ಸೀರಿಯಲ್’ಗೆ ಬ್ರೇಕ್…ಗೋವಾದಲ್ಲಿ ಮೋಜು, ಮಸ್ತಿ ಮಾಡ್ತಿದ್ದಾರೆ ಲಕ್ಷ್ಮೀ ನಿವಾಸ ತಾರೆಯರು
Lakshmi Nivasa: ಲಕ್ಷ್ಮೀ ನಿವಾಸ ಧಾರಾವಾಹಿಯ ನಟ-ನಟಿಯರು ತಮ್ಮ ಬ್ಯುಸಿ ಶೆಡ್ಯೂಲ್ ಮಧ್ಯೆ, ಸೀರಿಯಲ್ ಶೂಟಿಂಗ್ ಗೆ ಕೊಂಚ ಬ್ರೇಕ್ ಕೊಟ್ಟು, ಜೊತೆಯಾಗಿ ಸೇರಿ ಗೋವಾ ಟೂರ್ ಮಾಡಿ ಬಂದಿದ್ದಾರೆ. ಫೋಟೊಗಳನ್ನು ತಾರೆಯರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಲಕ್ಷ್ಮೀ ನಿವಾಸ ತಾರೆಯರು
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯ ನಟ-ನಟಿಯರು ತಮ್ಮ ಬ್ಯುಸಿ ಶೆಡ್ಯೂಲ್ ನಿಂದ ಬ್ರೇಕ್ ತೆಗೆದುಕೊಂಡು, ಧಾರಾವಾಹಿ ಶೂಟಿಂಗ್ ಗೆ ಬ್ರೇಕ್ ಕೊಟ್ಟು ಗೋವಾದಲ್ಲಿ ಎಂಜಾಯ್ ಮಾಡ್ತಿದ್ದಾರೆ.
ಗೋವಾದಲ್ಲಿ ತಾರೆಯರು
ಲಕ್ಷ್ಮೀ ನಿವಾಸದ ನಟ-ನಟಿಯರದಾದ ದಿಶಾ ಮದನ್, ಚಂದನಾ ಅನಂತಕೃಷ್ಣ, ಚೆರಿಕಾ, ಚಂದ್ರಶೇಖರ್ ಶಾಸ್ತ್ರೀ, ಮಧು ಹೆಗ್ಡೆ, ಅಶೋಕ್ ಜಂಬೆ ಎಲ್ಲರೂ ಜೊತೆಯಾಗಿ ಸೇರಿ ಗೋವಾದಲ್ಲಿ ಎಂಜಾಯ್ ಮಾಡಿ ಬಂದಿದ್ದಾರೆ.
ಸೀರಿಯಲ್ ನಲ್ಲಿ ಶತ್ರುಗಳು ರಿಯಲ್ ಮಿತ್ರರು
ಧಾರಾವಾಹಿಯಲ್ಲಿ ಸಂತತೋಷ್ ಪಾತ್ರಧಾರಿ ಮಧು ಹೆಗ್ಡೆಯನ್ನು ಕಂಡರೆ ಯಾರಿಗೂ ಆಗಲ್ಲ. ಯಾಕಂದ್ರೆ ಎಲ್ಲದರಲ್ಲೂ ಹಣಕ್ಕೆ ಹೆಚ್ಚು ಒತ್ತು ಕೊಡುವ ಮನುಷ್ಯ ಅವರು. ಅದೆಲ್ಲಾ ಸೀರಿಯಲ್ ನಲ್ಲಿ ಮಾತ್ರ ಆದರೆ ರಿಯಲ್ ಆಗಿ ಇವರೆಲ್ಲಾ ಮಿತ್ರರು.
ವೈರಲ್ ಹಾಡಿಗೆ ರೀಲ್ಸ್
ಗೋವಾದಲ್ಲಿ ಈ ತಂದ ವೈರಲ್ ಹಾಡು ಟುಮಕ್ ಟುಮಕ್ ಗೆ ಸಖತ್ತಾಗಿ ಹೆಜ್ಜೆ ಹಾಕಿದ್ದು, ಅದೂ ಕೂಡ ವೈರಲ್ ಆಗಿತ್ತು. ಅಭಿಮಾನಿಗಳು ಇವರ ಮುದ್ದಾದ ಡ್ಯಾನ್ಸ್ ಇಷ್ಟಪಟ್ಟಿದ್ದು, ಸೂಪರ್ ಎಂದಿದ್ದಾರೆ.
ದಿಶಾ ಮದನ್ ಹೇಳಿದ್ದೇನು?
ನಮ್ಮ ತಂಡವು ವಿಶ್ರಾಂತಿ ಪಡೆಯಲು ಸ್ವಲ್ಪ ಸಮಯ ತೆಗೆದುಕೊಂಡಿತು. ನನ್ನನ್ನು ನಂಬಿ ನಾವು ಎಲ್ಲವನ್ನೂ ಮಾಡಿದ್ದೇವೆ ಆದರೆ ವಿಶ್ರಾಂತಿ ಮಾತ್ರ ಪಡೆದಿಲ್ಲ, ಇದನ್ನು ಮತ್ತೆ ಮಾಡಲು ಕಾಯುತ್ತಿದ್ದೇನೆ ಎಂದು ಭಾವನಾ ಪಾತ್ರಧಾರಿ ದಿಶಾ ಮದನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಚಂದ್ರಶೇಖರ್ ಶಾಸ್ತ್ರಿ
ವೆಂಕಿ ಪಾತ್ರದ ಮೂಲಕ ಮನರಂಜನೆ ನೀಡುತ್ತಿರುವ ನಟ ಚಂದ್ರಶೇಖರ್ ಶಾಸ್ತ್ರಿ ಫೇಸ್ ಬುಕ್ ನಲ್ಲಿ ಒಂದಷ್ಟು ಸುಂದರ ಕ್ಷಣಗಳ ಫೋಟೊಗಳನ್ನು ಸೆರೆ ಹಿಡಿದು ಹಂಚಿಕೊಂಡಿದ್ದಾರೆ. ಕಿರುತೆರೆಯ ಗೆಳೆಯರೊಟ್ಟಿಗೆ , ಕಿರುಪ್ರವಾಸದಲ್ಲಿ, ಕಿರುನಗೆಯಲಿ ನಾವುಗಳು, ನೆನಪಿನಲ್ಲಿರಲಿ ಈ ಚಿತ್ರಗಳು ಎಂದು ಬರೆದುಕೊಂಡಿದ್ದಾರೆ.
ಧಾರಾವಾಹಿಯಲ್ಲಿ ಏನಾಗ್ತಿದೆ?
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸದ್ಯ ಜಾನುಗಾಗಿ ಹುಡುಕಾಟ ಮಾಡುತ್ತಿದ್ದಾನೆ ಜಯಂತ್, ತನು ಕೂಡ ಯಾರು ಈ ಜಾನು ಅನ್ನೋದನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾಳೆ. ಇನ್ನೊಂದು ಕಡೆ ಭಾವನಾಗಾಗಿ ಸಿದ್ದೇ ಗೌಡ್ರು ಸಹ ವ್ರತ ಮಾಡುತ್ತಿದ್ದಾರೆ. ಒಟ್ಟಲ್ಲಿ ಕಥೆ ನಿಧಾನಗತಿಯಲ್ಲಿ ಸಾಗುತ್ತಿದೆ.