ಚರ್ಚೆಗೆ ಗ್ರಾಸವಾದ ಜಾನು ಜಡೆ , ಇತ್ತ ವೀಕ್ಷಕರಿಂದ ಬಂತು ಚಿನ್ನುಮರಿಗೆ ಶಾಕಿಂಗ್ ನ್ಯೂಸ್
Lakshmi Nivasa Jaanu New Look: ಲಕ್ಷ್ಮೀ ನಿವಾಸ ಧಾರಾವಾಹಿಯ ಜಾಹ್ನವಿ ಪಾತ್ರದ ಹೊಸ ಲುಕ್ ವೀಕ್ಷಕರ ಮನಗೆದ್ದಿದೆ. ಜಡೆ ಹಾಕಿಕೊಂಡು ಕಾಣಿಸಿಕೊಂಡಿರುವ ಜಾನುವಿನ ಈ ಲುಕ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಜಯಂತ್ ಜೊತೆ ಜಾನು ಜೋಡಿ ಹೇಗಿದೆ ಎಂಬ ಚರ್ಚೆ ಕೂಡ ನಡೆಯುತ್ತಿದೆ.

ಲಕ್ಷ್ಮೀ ನಿವಾಸದಲ್ಲಿನ ಜಾಹ್ನವಿ ಬದುಕು ರೋಚಕ ತಿರುವು ಪಡೆದುಕೊಂಡಿದೆ. ಜಾನು ಬದುಕು ಬದಲಾಗುತ್ತಿದ್ದಂತೆ ಚಿನ್ನುಮರಿಯ ಲುಕ್ ಸಹ ಬದಲಾಯಿಸಲಾಗಿದೆ. ಈ ಹೊಸ ಲುಕ್‌ಗೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿ ಅಚ್ಚರಿಯ ಕಮೆಂಟ್ ಮಾಡಿದ್ದಾರೆ.
ಹೌದು, ಈ ಹಿಂದೆ ಜಾನು ಓಪನ್ ಹೇರ್ ಬಿಟ್ಕೊಂಡು ಕಾಣಿಸಿಕೊಳ್ಳುತ್ತಿದ್ದರು. ಇದೀಗ ಜಾನು ಜಡೆ ಹಾಕಿಕೊಂಡು ಮುದ್ದಾಗಿ ಕಾಣಿಸಿಕೊಳ್ಳತ್ತಿದ್ದಾಳೆ. ಹಾಗೆ ಸೀರೆ ಧರಿಸುವ ಸ್ಟೈಲ್‌ನಲ್ಲಿಯೂ ಬದಲಾವಣೆ ತರಲಾಗಿದೆ. ಈ ಹಿಂದೆ ನೋಡುಗರು ಜಾನುಗೆ ಜಡೆ ಹಾಕಿಕೊಳ್ಳುವಂತೆ ಅಥವಾ ಹೇರ್ ಸ್ಟೈಲ್ ಬದಲಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಇದೀಗ ಹೊಸ ಹೇರ್‌ಸ್ಟೈಲ್‌ಗೆ ಫಿದಾ ಆಗಿದ್ದಾರೆ.
ನರಸಿಂಹನ ಮನೆಯಲ್ಲಿ ಆಶ್ರಯ ಪಡೆದುಕೊಂಡಿರುವ ಜಾನುಗೆ ಲಲಿತಾಳ ಪರಿಚಯವಾಗಿದೆ. ಗಂಡನ ಜೀವ ಉಳಿಸಿರುವ ಹುಡುಗಿ ತಮ್ಮ ಮನೆಯಲ್ಲಿಯೇ ಕೆಲಸ ಮಾಡಿಕೊಂಡಿರಲೆಂದು ಲಲಿತಾ ಕರೆದುಕೊಂಡು ಬಂದಿದ್ದಾಳೆ. ಮನೆಯಲ್ಲಿ ಯಾವೆಲ್ಲಾ ಕೆಲಸ ಮಾಡಬೇಕು ಎಂದು ಹೇಳಿಕೊಟ್ಟಿದ್ದಾಳೆ. ಕೆಲಸ ಮಾಡಲು ಬರದಿದ್ರೂ ಪರವಾಗಿಲ್ಲ ನಿಧಾನವಾಗಿ ಕಲಿತುಕೊಳ್ಳಬೇಕು ಎಂದಿದ್ದಾಳೆ.
Jaanu Lakshmi Nivasa
ಚರ್ಚೆಗೆ ಗ್ರಾಸವಾದ ಜಾನು ಜಡೆ
ಈ ವಿಡಿಯೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಸದ್ಯ ಕೂದಲು ಕಟ್ಟಿಕೊಂಡ್ಯ ತಾಯಿ. ಎಲ್ಲರೂ ಹೇಳಿದ್ರೂ ಕೇಳಲಿಲ್ಲ. ಸದ್ಯ ಸಮುದ್ರಕ್ಕೆ ಬಿದ್ದದ್ದು ಒಳ್ಳೇದು ಆಯ್ತು ತಲೆ ಸರಿ ಹೋಯ್ತು. ಸಮುದ್ರಕ್ಕೆ ಬಿದ್ದಮೇಲೆ ಕೂದಲು ಸಹ ಬೆಳೆದು ಉದ್ದ ಜಡೆಯಾಗಿದೆ ಎಂದು ತಮಾಷೆಯ ಕಮೆಂಟ್ ಮಾಡಿದ್ದಾರೆ. ಜಾನು ನೀನು ಹಾಕಿರೋ ಸ್ಯಾರಿ ನೀನು ಬಾಚಿರೋ ತಲೆ ಸೂಪರ್ ಎಕ್ಸಲೆಂಟ್ ಜಾನು ಇವತ್ತು ಮಾತ್ರ ಸೂಪರ್ ಕಾಣಿಸುತ್ತಿದ್ದೀಯಾ. ಹೀಗೆ ಜಡೆ ಹಾಕ್ಕೊಂಡೆ ಇರು, ಕೂದಲು ಬಿಟ್ ಕೊಡಬೇಡ ತುಂಬಾ ಮುದ್ದು ಕಾಣ್ತಾ ಇದ್ದೀಯಾ ಎಂದು ಕಮೆಂಟ್ ಮಾಡಿದ್ದಾರೆ.
ಜಾನು ಜಯಂತ್ ಜೋಡಿ ಸೂಪರ್
ಜಾನುಗೆ ಜಯಂತ್ ಸರಿಯಾದ ಜೋಡಿ, ಆದ್ರೆ ಜಯಂತ್ ಬದಲಾಗಬೇಕು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಶ್ವ ಮತ್ತು ಜಾನು ಸ್ನೇಹಿತರಾಗಿಯೇ ಇರಲಿ ಎಂದು ವೀಕ್ಷಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ವಿಶ್ವನಿಗಾಗಿಯೇ ತನು ಇದ್ದಾಳೆ. ಆಕೆಯನ್ನು ನೋವಿಗೆ ತಳ್ಳೋದು ಬೇಡ ಎಂದಿದ್ದಾರೆ. ವಿಶ್ವನೊಂದಿಗೆ ಜಾನು ಮದುವೆ ಆಗುತ್ತಾ ಎಂದು ಯೋಚಿಸುತ್ತಿರೋರಿಗೆ ಈ ಕಮೆಂಟ್‌ಗಳು ಅಚ್ಚರಿ ಮೂಡಿಸಿವೆ. ಗಂಡನಿಂದ ದೂರವಾದ ಜಾನು, ಈ ಕಮೆಂಟ್‌ಗಳನ್ನುಓದಿದ್ರೆ ಖಂಡಿತ ಶಾಕ್ ಆಗುತ್ತದೆ.
ನಿರ್ದೇಶಕರು ಅಂತಹ ದೊಡ್ಡ ಸಮುದ್ರದಲ್ಲಿ ಬಿದ್ದರೂ ಕೂಡಾ ಬದುಕಿಸಿದ್ದಾರೆ. ಶ್ರೀಲಂಕಾದಲ್ಲಿ ಬಿದ್ದು ಚೆನ್ನೈನಲ್ಲಿ ಎದ್ದಿದ್ದಾಳೆ. ಅಂತದ್ರಲ್ಲಿ ಸೈಕೋ ಜಯಂತನಾ ಕೂಡ ಒಳ್ಳೇ ವ್ಯಕ್ತಿಯಾಗಿ ರೂಪಿಸೋದು ಅಷ್ಟು ಕಷ್ಟ ಆಗಲ್ಲ. ಜಯಂತ್ and ಜಾನು ಜೋಡಿ ಸೂಪರ್ ಎಂದು ಹಾರ್ಟ್ ಎಮೋಜಿ ಹಾಕಿ ಕಮೆಂಟ್ ಮಾಡಿದ್ದಾರೆ.
ಇತ್ತ ಜಾನು ಹುಡುಕಾಟಕ್ಕಾಗಿ ಜಯಂತ್, ಗೂಢಚಾರರನ್ನು ನೇಮಿಸಿದ್ದಾನೆ. ಬಾಲಕನ ಮಾತಿನಿಂದ ಜಾನು ಬದುಕಿರೋದನ್ನು ಖಚಿತಪಡಿಸಿಕೊಂಡಿರುವ ಜಯಂತ್, ಪತ್ನಿಗಾಗಿ ಹಾತೊರೆಯುತ್ತಿದ್ದಾನೆ.