ಎರಡನೇ ಮದುವೆ ಬಳಿಕ ಮೊದಲ ಬಾರಿ ಮಂಗಳ ಗೌರಿ ಪೂಜೆ ಮಾಡಿದ ಲಕ್ಷ್ಮೀ ನಿವಾಸ ನಟಿ
ಲಕ್ಷ್ಮೀ ನಿವಾಸದ ನಟಿ ಮಾನಸ ಮನೋಹರ್ ಎರಡನೇ ಮದುವೆಯಾದ ಬಳಿಕ ಇದೀಗ ಮೊದಲ ಬಾರಿ ಗಂಡನ ಮನೆಯಲ್ಲಿ ಮಂಗಳ ಗೌರಿ ಪೂಜೆ ಮಾಡಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಮಿಂಚುತ್ತಿರುವ ನಟಿ ಮಾನಸ ಮನೋಹರ್. (Manasa Manohar) ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ತಮ್ಮ ಜೀವನದ ಮುಖ್ಯ ವಿಷ್ಯಗಳನ್ನು, ರೀಲ್ಸ್ ಗಳನ್ನು ಶೇರ್ ಮಾಡುತ್ತಲಿರುತ್ತಾರೆ.
ಮಾನಸ ಮನೋಹರ್ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮೀರಾ ಪಾತ್ರದಲ್ಲಿ ನಟಿಸುವ ಮೂಲಕ ವೀಕ್ಷಕರ ಮನಸ್ಸು ಗೆದ್ದಿದ್ದರು. ಇದೀಗ ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿಯಲ್ಲಿ ಸಿದ್ಧೇ ಗೌಡ್ರ ಅಣ್ಣ ಮರಿ ಗೌಡರ ಹೆಂಡತಿ ನೀಲಾಂಬರಿ ಪಾತ್ರನಲ್ಲಿ ನಟಿಸುತ್ತಿದ್ದಾರೆ.
ಅಷ್ಟೇ ಅಲ್ಲ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಶಾಂಭವಿ (Shambhavi) ಧಾರಾವಾಹಿಯಲ್ಲಿ ಶಾಂಭವಿ ಪಾತ್ರದಲ್ಲೂ ಸಹ ಇವರು ನಟಿಸುತ್ತಿದ್ದಾರೆ. ಸದ್ಯಕ್ಕಂತೂ ನೆಗೆಟಿವ್ ಮತ್ತು ಪಾಸಿಟಿವ್ ಎರಡೂ ಪಾತ್ರಗಳಲ್ಲಿ ಮಾನಸ ಅದ್ಭುತವಾಗಿ ನಟಿಸಿದ್ದಾರೆ.
ಜುಲೈ 29ರಂದು ಮಂಗಳ ಗೌರಿ (Mangala Gouri) ಹಬ್ಬವಾಗಿದ್ದು, ಈ ಹಿನ್ನೆಲೆಯಲ್ಲಿ ಮಾನಸ ಮನೋಹರ್ ಪೂಜೆ ಮಾಡಿದ್ದು, ಹಬ್ಬದ ಫೋಟೊಗಳನ್ನು ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ವಿಚ್ಚೇಧಿತರಾಗಿದ್ದ ನಟಿ ಮಾನಸ, ಎರಡನೇ ಬಾರಿ ಕಳೆದ ವರ್ಷ ನವಂಬರ್ ನಲ್ಲಿ ಪ್ರೀತಂ ಚಂದ್ರ (Preetham Chandra) ಎನ್ನುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಪ್ರೀತಂ ಅವರಿಗೂ ಇದು ಎರಡನೇ ಮದುವೆಯಾಗಿತ್ತು.
ಎರಡನೇ ವಿವಾಹವಾದ ಬಳಿಕ ಇದು ಮಾನಸ ಅವರ ಮೊದಲ ಮಂಗಳ ಗೌರಿ ಹಬ್ಬವಾಗಿದೆ. ಹಬ್ಬವನ್ನು ಅತ್ತೆ ಹಾಗೂ ಸಂಬಂಧಿಕರ ಜೊತೆ ಸೇರಿ ನಟಿ ಅದ್ಧೂರಿಯಾಗಿ ಆಚರಿಸಿದ್ದಾರೆ. ಪೂಜೆಗೆ ಹಸಿರು ಸೀರೆ ಮತ್ತು ಹಸಿರು ಬಳೆ ಧರಿಸಿದ್ದರು ನಟಿ.
ತಮ್ಮ ಫೋಟೊಗಳ ಜೊತೆಗೆ ನಟಿ ಪ್ರಾರ್ಥನೆಗಳು ಮತ್ತು ಪೂಜೆಗಳು ಹೊಗಳಿಕೆ ಅಥವಾ ಸಂತೋಷಕ್ಕಾಗಿ ಅಲ್ಲ, ನನ್ನ ಪ್ರಕಾರ ಅವು ಕೇವಲ ಸುಂದರವಾದ ಪೋರ್ಟಲ್‌ಗಳು,‘ಶಾಂತಿ - ಉದ್ದೇಶ - ಪ್ರಗತಿ’ ಅದಕ್ಕಾಗಿಯೇ ನಾನು ಅವುಗಳನ್ನು ಉತ್ಸಾಹದಿಂದ ನಿರ್ವಹಿಸುತ್ತೇನೆ! ಎಂದು ಬರೆದುಕೊಂಡಿದ್ದಾರೆ.