- Home
- Entertainment
- TV Talk
- ಇದಪ್ಪಾ ಹಠ ಅಂದ್ರೆ..! ಒಂದೇ ಒಂದು ಫೋಟೋ ಶೇರ್ ಮಾಡಿ ಶಾಕ್ ಕೊಟ್ಟ Lakshmi Baramma Serial ನಟಿ
ಇದಪ್ಪಾ ಹಠ ಅಂದ್ರೆ..! ಒಂದೇ ಒಂದು ಫೋಟೋ ಶೇರ್ ಮಾಡಿ ಶಾಕ್ ಕೊಟ್ಟ Lakshmi Baramma Serial ನಟಿ
ʼಮಂಗಳಗೌರಿ ಮದುವೆ, ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಯಲ್ಲಿ ನಟಿಸಿದ್ದ ಕೃತಿ ಬೆಟ್ಟದ್ ಅವರು ತೂಕ ಇಳಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

'ಮಂಗಳಗೌರಿ ಮದುವೆ' ( Mangalagowri Maduve Serial ) ಧಾರಾವಾಹಿಯಲ್ಲಿ ಬೆಳ್ಳಿಯಾಗಿ ಮಿಂಚಿದ್ದ ನಟ ಕೃತಿ ಬೆಟ್ಟದ್ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿ ನಿಜಕ್ಕೂ ಎಲ್ಲರೂ ಮೂಗು ಮೇಲೆ ಬೆರಳು ಇಟ್ಟುಕೊಳ್ಳುವ ಹಾಗೆ ಮಾಡಿದ್ದಾರೆ.
ಹೌದು, ಕೃತಿ ಬೆಟ್ಟದ್ ಅವರು ಸಣ್ಣಗಾಗಿದ್ದಾರೆ. ಕಳೆದ ಒಂದು ವರ್ಷಗಳಿಂದ ಅವರು ಜಿಮ್‌ನಲ್ಲಿ ವರ್ಕೌಟ್ ಮಾಡುವ ವಿಡಿಯೋವನ್ನು ಹಂಚಿಕೊಂಡು, ಬರುತ್ತಲಿದ್ದಾರೆ. ಕೃತಿ ಸಣ್ಣಗಾಗಿದ್ದು, ಈ ಬಗ್ಗೆ ನಟಿ ಕಾವ್ಯಶ್ರೀ ಗೌಡ, ಶರ್ಮಿತಾ ಗೌಡ, ತನಿಷಾ ಕುಪ್ಪಂಡ ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಆರಂಭದಲ್ಲಿ 84kg ತೂಕ ಇದ್ದ ಕೃತಿ ಅವರೀಗ 20kg ತೂಕ ಇಳಿಸಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರದ ಗುಡಿಬಂಡೆಯವರಾದ ಕೃತಿ ಬೆಟ್ಟದ್ ಅವರು ರಂಗಭೂಮಿಯಲ್ಲಿ ಬೆಳೆದವರು. ಬಿಬಿಎಂ ಓದಿದ್ದು, ಬ್ಯಾಂಕ್‌ನಲ್ಲಿ ಉದ್ಯೋಗ ಮಾಡುತ್ತಿದ್ದರು. ಅದೇ ಸಮಯಕ್ಕೆ ಅವರಿಗೆ ನಟನೆ ಬಗ್ಗೆ ಒಲವಿತ್ತು. ಹೀಗಾಗಿ ಅವರು ಬ್ಯಾಂಕ್ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಚಿತ್ರರಂಗಕ್ಕೆ ಕಾಲಿಟ್ಟರು.
ಕೃತಿ ಅಪ್ಪ-ಅಮ್ಮ ಇಬ್ಬರೂ ರಂಗಭೂಮಿಯಲ್ಲಿ ಇದ್ದವರು. ಹೀಗಾಗಿ ಮೂರು ವರ್ಷದವರಿದ್ದಾಗಲೇ ಅವರು ನಾಟಕಗಳಲ್ಲಿ ನಟಿಸಿದ್ದರು. ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿ ಪ್ರಶಸ್ತಿಗಳನ್ನು ಪಡೆದರು. 'ರಾಧಾ' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಅವರು 'ಕಲ್ಯಾಣ ರೇಖೆ' ಧಾರಾವಾಹಿಯಲ್ಲಿ ನಟಿಸಿದ್ದರು. ಆಮೇಲೆ 'ಮಂಗಳಗೌರಿ ಮದುವೆ', ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿದ್ದರು. ಒಟ್ಟಿನಲ್ಲಿ ನೆಗೆಟಿವ್ ಶೇಡ್‌ನಲ್ಲಿ ಅವರು ಮಿಂಚಿದ್ದರು.
'ಝೂಮ್' , 'ಮೈಲಾರಿ', 'ಡೆಡ್ಲಿ-2' , 'ಡ್ರಾಮಾ', 'ಕೂಲ್', 'ವಿಕ್ಟರಿ -2' ಮುಂತಾದ ಸಿನಿಮಾಗಳಲ್ಲಿ ಕೃತಿ ನಟಿಸಿದ್ದಾರೆ. 'ಜೋ ಬಿ ಕರ್ ವಾಲೇ' ಸಿನಿಮಾದಲ್ಲಿ ಕೃತಿ ನಟಿಸಿದ್ದರು. ಆಮೇಲೆ ಅವರು ತೆಲುಗು ಸಿನಿಮಾಗಳಲ್ಲಿಯೂ ನಟಿಸಿದ್ದರು.
ಕಲಾವಿದೆಯಾಗಿ ಕೃತಿ ಬೆಟ್ಟದ್ ಅವರು ಹೊಸ ಹೊಸ ಪಾತ್ರಗಳಲ್ಲಿ ನಟಿಸುವ ಆಸೆ ಹೊಂದಿದ್ದಾರೆ. ತೂಕ ಇಳಿಸಿಕೊಂಡ ಅವರಿಗೆ ಯಾವ ರೀತಿಯ ಪಾತ್ರಗಳು ಬರಲಿದೆ ಎಂದು ಕಾದು ನೋಡಬೇಕಿದೆ.