ಮಂಗಳೂರಿನ ಸೊಸೆ ನಾನು…. ಸೀಮಂತದ ಸಂಭ್ರಮದಲ್ಲಿ ಲಕ್ಷ್ಮೀ ಬಾರಮ್ಮ ಖ್ಯಾತಿಯ ಗಂಗಕ್ಕಾ
ಲಕ್ಷ್ಮೀ ಬಾರಮ್ಮ ಸೇರಿ ಕನ್ನಡ ಕಿರುತೆರೆಯಲ್ಲಿ ಪೋಷಕ ಪಾತ್ರಗಳ ಮೂಲಕ ಮಿಂಚಿದ ನಟಿ ಹರ್ಷಿತಾ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ.

ಕನ್ನಡ ಕಿರುತೆರೆ ನಟಿ ತುಂಬು ಗರ್ಭಿಣಿ ಹರ್ಷಿತಾ (Harshitha) ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ತವರು ಮನೆ ಮಧುಗಿರಿಯಲ್ಲಿ ಅದ್ಧೂರಿಯಾಗಿ ನಡೆದಿದೆ. ಸೀಮಂತದ ಫೋಟೊಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹರ್ಷಿತಾ ಅನ್ನೋದಕ್ಕಿಂತ ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯ ಗಂಗಕ್ಕಾ ಅಂದರೇನೆ ಜನರಿಗೆ ಬೇಗನೆ ಪರಿಚಯ ಆಗಬಹುದು. ಲಕ್ಷ್ಮೀ ಬಾರಮ್ಮದಲ್ಲಿ ಮನೆ ಕೆಲಸದಾಕೆ ಗಂಗಕ್ಕಾ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿದ್ದರು ಹರ್ಷಿತಾ.
ಅಷ್ಟೇ ಅಲ್ಲದೇ ಇವರು ರಾಧಿಕಾ ಧಾರಾವಾಹಿ, ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಧಾರಾವಾಹಿಯಲ್ಲಿ ಸುಬ್ಬು ಅಕ್ಕ ಧನ ಲಕ್ಷ್ಮೀ ಪಾತ್ರದಲ್ಲಿ ಸಹ ಮಿಂಚಿದ್ದರು. ಗರ್ಭಿಣಿಯಾದ ಹಿನ್ನೆಲೆಯಲ್ಲಿ ಸೀರಿಯಲ್ ನಿಂದ ಹೊರ ನಡೆದಿದ್ದರು ಹರ್ಷಿತಾ.
ಹರ್ಷಿತಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು, ಸೀರಿಯಲ್ ಸಂದರ್ಭದಲ್ಲಿ ರೀಲ್ಸ್ ಗಳನ್ನು ಮಾಡುತಿದ್ದರೆ, ಗರ್ಭಿಣಿಯಾದ ಬಳಿಕ, ಮಿನಿ ವ್ಲಾಗ್ ಮೂಲಕ ತಮ್ಮ ದಿನಚರಿಯ ಪರಿಚಯ ಮಾಡಿಸುತ್ತಿದ್ದರು. ಇತ್ತೀಚೆಗೆ ಸೀಮಂತದ ಸಿದ್ಧತೆಯ ಬಗ್ಗೆ ಕೂಡ ವಿಡಿಯೋ ಮಾಡಿದ್ದರು.
ಇದೀಗ ಸೀಮಂತದ (Baby Shower)ಫೋಟೊಗಳನ್ನು ಹಂಚಿಕೊಂಡಿರುವ ಹರ್ಷಿತಾ. ಫೋಟೊಗೆ ನಾನು ಮಂಗಳೂರಿನ ಸೊಸೆ ಎಂದು ಬರೆದುಕೊಂಡಿದ್ದಾರೆ. ಹರ್ಷಿತಾ ಹಸಿರು ಬಣ್ಣದ ಸೀರೆಯುಟ್ಟು, ತಲೆ ಮೇಲೆ ಹಿಂಗಾರ ಹೂವನ್ನು ಮುಡಿದಿದ್ದು, ಮುಖದಲ್ಲಿ ಪ್ರೆಗ್ನೆನ್ಸಿ ಗ್ಲೋ ಎದ್ದು ಕಾಣುತ್ತಿದೆ.
ಹರ್ಷಿತಾ ಫೋಟೊ ನೋಡಿ ಅಭಿಮಾನಿಗಳು ಶುಭಾಶಯ ತಿಳಿಸಿದ್ದು, ಯಾರ ದೃಷ್ಟಿಯೂ ಬೀಳದಿರಲಿ, ಆರೋಗ್ಯಯುತವಾದ ಮಗು ಜನಿಸಲಿ, ಯಾವಾಗ್ಲೂ ಖುಷಿ ಖುಷಿಯಾಗಿ ಇರಿ ಎಂದು ಹಾರೈಸಿದ್ದಾರೆ.
ಹರ್ಷಿತಾ ಅವರ ಪತಿ ಸಂದೀಪ್ ಆಚಾರ್. ಇವರು ರೈಟರ್ ಆಗಿದ್ದು, ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋನಲ್ಲಿ ಎಲ್ಲಾ ಸ್ಕಿಟ್ ಗಳಿಗೆ ಇವರೇ ಸ್ಕ್ರಿಪ್ಟ್ ಬರೆಯುತ್ತಿದ್ದರು. ಈ ಜೋಡಿ ಇತ್ತಿಚೆಗಷ್ಟೇ ತುಂಬಾನೆ ಮುದ್ದಾದ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸಿದ್ದರು.