ಲಕ್ಷ್ಮೀ -ವೈಷ್ಣವ್ ಆಲ್ಬಂ ಸಾಂಗ್ ಭರ್ಜರಿ ಹಿಟ್ : ಮೆಚ್ಚಿದ್ರು ವೀಕ್ಷಕರು!
ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಹೊಸ ಪ್ರಯತ್ನ ಮಾಡಿದ್ದು, ಲಕ್ಷ್ಮೀ ಮತ್ತು ವೈಷ್ಣವ್ ನಟಿಸಿರುವ ಮೊದಲ ಆಲ್ಬಂ ಸಾಂಗ್ ನನ್ನೊಲವೆ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ತಾಗಿ ವೈರಲ್ ಆಗುತ್ತಿದೆ.
ಒಂದು ವಿಭಿನ್ನ ಪ್ರೇಮಕತೆ ಮೂಲಕ ತೆರೆಗೆ ಬಂದ ಸೀರಿಯಲ್ ಲಕ್ಷ್ಮೀ ಬಾರಮ್ಮ (Lakshmi Baramma). ಸದ್ಯ ಆಲ್ಬಂ ಹಾಡಿನಿಂದಾಗಿ ಸೋಶಿಯಲ್ ಮೀಡಿಯಾದಾದ್ಯಂತ ಸದ್ದು ಮಾಡುತ್ತಿದೆ. ಬಿಡುಗಡೆಯಾದ 12 ಗಂಟೆಯಲ್ಲೇ ಮಿಲಿಯನ್ ವ್ಯೂ ಪಡೆದು ಕೊಂಡಿದೆ.
ಲಕ್ಷ್ಮೀ ಬಾರಮ್ಮ ಸೀರಿಯಲ್ ಕಥೆಯ ಪ್ರಕಾರ ಲಕ್ಷ್ಮೀ ಬರೆದಿರುವ ಹಾಡನ್ನು, ವೈಷ್ಣವ್ ಹಾಡುವುದಾಗಿ ನಿಶ್ಚಯವಾಗಿತ್ತು. ಅಷ್ಟೇ ಅಲ್ಲ ಲಕ್ಷ್ಮಿ ಮತ್ತು ವೈಷ್ಣವ್ ನಟಿಸೋದಾಗಿ, ನಂತರ ಕೀರ್ತಿ - ವೈಷ್ಣವ್ ನಟಿಸೋದಾಗಿ ಹೇಳಲಾಗಿತ್ತು.
ಇದೀಗ ಎಲ್ಲರನ್ನೂ ಕರೆದು ಸರ್ಪೈಸ್ ಪಾರ್ಟಿ ಅರೇಂಜ್ ಮಾಡಿರುವ ವೈಷ್ಣವ್ ತಾನು ಮತ್ತು ಮಹಾಲಕ್ಷ್ಮೀ ಜೊತೆಯಾಗಿ ನಟಿಸಿರುವ ಆಲ್ಬಂ ಹಾಡನ್ನು ಬಿಡುಗಡೆ ಮಾಡುವ ಮೂಲಕ ಕಾವೇರಿ, ಕೀರ್ತಿಗೆ ಶಾಕ್, ಉಳಿದ ಮನೆಮಂದಿಗೆಲ್ಲಾ ಸರ್ಪ್ರೈಸ್ ನೀಡಿದ್ದಾರೆ.
ಕಲರ್ಸ್ ಕನ್ನಡ (Colors Kannada) ತಂಡ ಗಾಯಕನೇ ಆಗಿರುವ ವೈಷ್ಣವ್ ಅಂದ್ರೆ ಶಮಂತ್ ಗೌಡರಿಂದಲೇ ಈ ಹಾಡು ಹಾಡಿಸಿದ್ದು, ಹಾಡು, ಲಿರಿಕ್ಸ್, ಕೊರೊಯೋಗ್ರಾಫಿ, ಸಿನಿಮಾಟೋಗ್ರಾಫಿ ಎಲ್ಲವೂ ಅದ್ಭುತವಾಗಿ ಮೂಡಿ ಬಂದಿದೆ.
ಪ್ರೀತಿಯ ಮೊದಲ ಮಳೆ ಹಾಡನ್ನು ಸೋಶಿಯಲ್ ಮೀಡಿಯಾದಲ್ಲಿ (Social media) ಹಂಚಿಕೊಂಡಿದ್ದು, ಜನರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಅಲ್ಲದೇ ವಿಡೀಯೋ ಬಿಡುಗಡೆಯಾದ ಮೊದಲ 12 ಗಂಟೆಯಲ್ಲಿ ಮಿಲಿಯನ್ ಜನರು ವೀಕ್ಷಿಸುವ ಮೂಲಕ ಗೆಲುವು ತಂದುಕೊಟ್ಟಿದ್ದಾರೆ.
ಹಾಡನ್ನು ನೋಡಿ ಇಷ್ಟಪಟ್ಟ ಅಭಿಮಾನಿಗಳು ಮೊದಲನೇ ಸಲ ಕನ್ನಡ ಕಿರುತೆರೆ ಇತಿಹಾಸದಲ್ಲಿ ಹೊಸ ಪ್ರಯತ್ನ. ಡ್ಯಾನ್ಸ್ ತುಂಬಾನೆ ಚೆನ್ನಾಗಿದೆ. ಲಕ್ಷ್ಮೀ ವೈಷ್ಣವ್ ಜೋಡಿ ಮತ್ತಷ್ಟು ಚೆನ್ನಾಗಿದೆ. ಇಬ್ಬರ ಕೆಮಿಸ್ಟ್ರಿ, ಮ್ಯೂಸಿಕ್ ಅದ್ಭುತವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
'ನನ್ನೊಲವೇ' ಹಾಡಿನ ಬಗ್ಗೆ ಮಾತನಾಡಿದ ಕಲರ್ಸ್ ಕನ್ನಡದ ಮುಖ್ಯಸ್ಥ ಪ್ರಶಾಂತ್ ನಾಯಕ್, ಇಡೀ ಹಾಡನ್ನು ಲಕ್ಷ್ಮೀ ಬಾರಮ್ಮ ತಂಡದ ಪ್ರತಿಭೆಗಳೇ ಸೇರಿ ರೂಪಿಸಿರುವುದು ವಿಶೇಷ ಎಂದರು.
ಅಜಿತ್ ಕೇಶವ ಅವರ ಸಾಲುಗಳನ್ನು ಶಮಂತ್ ಬ್ರೊ ಗೌಡ (Shamanth Bro Gowda) ಹಾಡಿದ್ದು, ರುದ್ರ ಮಾಸ್ಟರ್ ಕೊರಿಯೋಗ್ರಫಿ, ಅರುಣ್ ಬ್ರಹ್ಮ ಕ್ಯಾಮೆರಾದೊಂದಿಗೆ ಹಾಡು ಅದ್ಭುತವಾಗಿ ಮೂಡಿ ಬಂದಿದೆ.