- Home
- Entertainment
- TV Talk
- Age is Just Number ಎಂದು ಸಾಬೀತುಪಡಿಸಿದ ಕುಲವಧು ಧಾರಾವಾಹಿ ನಟ; 60 ವರ್ಷ ಜಿಮ್‌ನಲ್ಲಿ ವರ್ಕೌಟ್!
Age is Just Number ಎಂದು ಸಾಬೀತುಪಡಿಸಿದ ಕುಲವಧು ಧಾರಾವಾಹಿ ನಟ; 60 ವರ್ಷ ಜಿಮ್‌ನಲ್ಲಿ ವರ್ಕೌಟ್!
Actor Gururaj Maruthi: ಬಣ್ಣದ ಲೋಕದಲ್ಲಿ ಅನೇಕರು ನಟನೆಯ ಮೂಲಕ ಗುರುತಿಸಿಕೊಂಡಿದ್ದಾರೆ. ಆದರೆ ನಟನೆಯ ಜೊತೆಗೆ, ತಮ್ಮ ಶಿಸ್ತುಬದ್ಧ ಜೀವನ, ಅಸಾಧಾರಣ ಫಿಟ್‌ನೆಸ್‌ನಿಂದ ಎಲ್ಲರನ್ನೂ ಬೆರಗುಗೊಳಿಸಿ, ಸ್ಫೂರ್ತಿಯಾಗುತ್ತಿರುವವರು ಹಿರಿಯ ಕಲಾವಿದ ಗುರುರಾಜ್ ಮಾರುತಿ.

ಜಿಮ್‌ನಲ್ಲಿ ವರ್ಕೌಟ್
ಸುಮಾರು 6 ದಶಕಗಳಿಂದ, ಅಂದರೆ ಬರೋಬ್ಬರಿ 60 ವರ್ಷಗಳಿಂದ ಪ್ರತಿದಿನ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಈ ಮೂಲಕ ಅವರು ಇಂದಿನ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ.
ಧಾರಾವಾಹಿ, ಸಿನಿಮಾಗಳಲ್ಲಿ ನಟನೆ
ಗುರುರಾಜ್ ಮಾರುತಿ ಅವರು ಕನ್ನಡ ಕಿರುತೆರೆ, ಬೆಳ್ಳಿತೆರೆಯಲ್ಲಿ ಆಕ್ಟಿವ್ ಆಗಿದ್ದಾರೆ. ಕನ್ನಡದಲ್ಲಿ 'ಬೃಂದಾವನ' ಮತ್ತು 'ಕುಲವಧು' ಧಾರಾವಾಹಿ ಮೂಲಕ ಮನೆಮಾತಾಗಿದ್ದಾರೆ. ಇಷ್ಟು ವರ್ಷಗಳಿಂದ ಅವರು ತಂದೆ, ಅಜ್ಜ ಅಥವಾ ಕುಟುಂಬದ ಹಿರಿಯ ವ್ಯಕ್ತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
60 ವರ್ಷಗಳಿಂದ ವರ್ಕೌಟ್
ಗುರುರಾಜ್ ಮಾರುತಿ ಅವರ ಲೈಫ್‌ಸ್ಟೈಲ್ ಎಲ್ಲರಿಗೂ ಮಾದರಿಯಾಗಿದೆ. ಇಂದು ಯುವ ಜನತೆ ಕೂಡ ಎರಡು ದಿನ ವರ್ಕೌಟ್ ಮಾಡಿ, ಮೂರನೇ ದಿನ ಮಾಡೋದಿಲ್ಲ. ಗುರುರಾಜ್ ಅವರು ಕಳೆದ 60 ವರ್ಷಗಳಿಂದ ವರ್ಕೌಟ್ ಮಾಡುತ್ತಿದ್ದಾರೆ. ಜಿಮ್ ನನಗೆ ಜೀವನ ಎಂದು ಅವರು ಪೋಸ್ಟ್ ಹಂಚಿಕೊಂಡಿದ್ದಾರೆ.
ಆರೋಗ್ಯವೇ ಭಾಗ್ಯ
ಇಂದಿಗೂ ಇವರು ಜಿಮ್‌ನಲ್ಲಿ ಯುವಕರಿಗಿಂತಲೂ ಹೆಚ್ಚು ಉತ್ಸಾಹದಿಂದ Weight Lifting ಮಾಡುತ್ತಾರೆ. ಇದರ ಹಿಂದೆ ದೃಢ ಸಂಕಲ್ಪ, ಶಿಸ್ತುಬದ್ಧ ಆಹಾರ ಪದ್ಧತಿಯಿದೆ. "ಆರೋಗ್ಯವೇ ಭಾಗ್ಯ" ಎಂಬ ಮಾತನ್ನು ಗುರುರಾಜ್ ಅವರು ಅಕ್ಷರಶಃ ಪಾಲಿಸುತ್ತಿದ್ದಾರೆ.
ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ
ಇಂದಿನ ಸ್ಪರ್ಧಾತ್ಮಕ ಯುಗ ಹಾಗೂ ಒತ್ತಡದ ಬದುಕಿನಲ್ಲಿ ನಟನೆ ಜೊತೆಗೆ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳುವುದು ಮುಖ್ಯ ಎಂಬುದಕ್ಕೆ ಗುರುರಾಜ್ ಮಾರುತಿ ಜೀವಂತ ಉದಾಹರಣೆ ಎನ್ನಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

