ಕುತಂತ್ರಿ ಕಾವೇರಿಗೆ ಅಮ್ಮನಿಂದಲೇ ಕಪಾಳಮೋಕ್ಷ... ಒನ್ ಮೋರ್ ಒನ್ ಮೋರ್ ಎಂದ ವೀಕ್ಷಕರು!
ಕುತಂತ್ರಿ ಕಾವೇರಿಗೆ ಕೋರ್ಟ್ ನಲ್ಲಿ ಸೋಲಾಗಿ, ಆಕೆ ಮತ್ತೆ ಜೈಲು ಸೇರಿದ್ರೂ ಕೂಡ ಆಕೆಯ ಅಹಂಕಾರ ಕಡಿಮೆಯಾಗಿಲ್ಲ. ಇದೀಗ ಅಮ್ಮನಿಂದಲೇ ಕಾವೇರಿಗೆ ಕಪಾಳಮೋಕ್ಷ ಆಗಿದೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ (Lakshmi Baramma)ಧಾರಾವಾಹಿಯಲ್ಲಿ ಕಥೆ ದಿನದಿಂದ ದಿನಕ್ಕೆ ಬೇರೆ ಬೇರೆ ತಿರುವುಗಳಲ್ಲಿ ಸಾಗುತ್ತಿದೆ. ಕೀರ್ತಿ ಮನೆಗೆ ವಾಪಾಸ್ ಆದ ಸ್ವಲ್ಪ ಸಮಯದಲ್ಲೇ ಲಕ್ಷ್ಮೀ ಕೂಡ ಇದೀಗ ಕೋರ್ಟ್ ಬಾಗಿಲಿಗೆ ಬಂದು ಕಾವೇರಿ ವಿರುದ್ಧ ಸಾಕ್ಷಿ ನುಡಿದಿದ್ದಾಳೆ. ಕಾವೇರಿ ಅದೆಲ್ಲಾ ಸುಳ್ಳು ಅಂತ ಹೇಳಿದ್ರು, ಲಕ್ಷ್ಮೀ ಅದನ್ನ ನಿಜ ಎಂದು ಸಾಬೀತು ಪಡಿಸಿದ್ದಾಳೆ.
ಕೊನೆಗೂ ಕಾವೇರಿಗೆ ಸೋಲಾಗಿ, ಇನ್ನೂ ಒಂದು ವಾರಗಳವರೆಗೂ ಕಾವೇರಿ ಜೈಲು ಪಾಲಾಗುವಂತಾಗಿದೆ. ಕಾವೇರಿ ವಂಚನೆಯಿಂದಲೇ ಕೀರ್ತಿ ವೈಷ್ಣವ್ ನಿಂದ ದೂರ ಆಗಿರೋದು, ಕಾವೇರಿ ಸುಮ್ಮನೆ ಜಾತಕವನ್ನು ಬದಲಾಯಿಸಿ, ಕೀರ್ತಿಯೇ ಮದುವೆ ಬೇಡ ಎನ್ನುವಂತೆ ಮಾಡಿ, ಲಕ್ಷ್ಮೀ ಜೊತೆ ವೈಷ್ಣವ್ ಮದುವೆ ಮಾಡಿಸಿದ್ದು ಅನ್ನೋದು ಮನೆಯವರಮುಂದೆ ಬಯಲಾಗಿದೆ.
ಕಾವೇರಿ ವೈಷ್ಣವ್ ಬಳಿ ಬಂದು, ನಿನಗೂ ಈಗ ಈ ಅಮ್ಮ ಬೇಡವಾಗಿ ಬಿಟ್ಲಾ, ಹೆಂಡ್ತಿ ಬಂದ ಮೇಲೆ ಅವಳ ಸೆರಗು ಹಿಡಿದು ಓಡಾಡ್ತಾ ಇದ್ಯಾ? ನಿನ್ನ ಹೆಂಡ್ತಿ ನನ್ನನ್ನ ಕೊಲೆಗಾರ್ತಿ ಅಂತಿದ್ದಾಳೆ ನಾನು ಕೊಲೆ ಮಾಡಿಲ್ಲ, ಹೇಳು ಎಂದು ವೈಷ್ಣವ್ ನನ್ನು ಪ್ರಶ್ನಿಸುತ್ತಾಳೆ ಕಾವೇರಿ. ಆವಾಗ ಲಕ್ಷ್ಮಿ ಸಿಟ್ಟಿನಿಂದ ಹೌದು ನೀವೇ ಕೊಲೆಗಾರ್ತಿ, ನನ್ನನ್ನು ಮತ್ತು ಕೀರ್ತಿಯನ್ನು ಕೊಲ್ಲೋದಿಕ್ಕೆ ಪ್ರಯತ್ನಿಸಿದ್ದು ನೀವೇ ಎನ್ನುತ್ತಾಳೆ. ಲಕ್ಷ್ಮಿ ಹೀಗೆ ಹೇಳ್ತಿರೋವಾಗ್ಲೇ ಕಾವೇರಿ ಇದಕ್ಕೆ ಏನ್ ಸಾಕ್ಷಿ ಅಂತ ಕೇಳ್ತಾಳೆ. ಅದಕ್ಕೆ ಲಕ್ಷ್ಮಿ ಮನಸಾಕ್ಷಿಗೆ ಹೆದರೋರು ಮನುಷ್ಯರ ಸಾಕ್ಷಿಯನ್ನು ಕೇಳುವುದಿಲ್ಲ ಎನ್ನುತ್ತಾ ಖಡಕ್ ಉತ್ತರ ನೀಡುತ್ತಾಳೆ.
ಲಕ್ಷ್ಮಿ ಖಡಕ್ ಮಾತುಗಳನ್ನ ಕೇಳಿದ ಕಾವೇರಿ ಮನೆಯವರನ್ನೆಲ್ಲ ಉದ್ದೇಶಿಸಿ, ನೀವೆಲ್ಲ ಯಾಕೆ ಸುಮ್ಮನಿದ್ದಿರಿ, ಲಕ್ಷ್ಮಿನ ಮಾತನಾಡುವುದಕ್ಕೆ ಬಿಟ್ಟು ನೀವೆಲ್ಲ, ಮೌನವಾಗಿರೋದು ಯಾಕೆ? ಲಕ್ಷ್ಮಿಗೆ ಹುಚ್ಚು ನೆತ್ತಿಗೇರಿದೆ , ಆಕೆಯನ್ನ ಈಗಲೇ ಸೆಂಟರ್ ಗೆ ಸೇರಿಸಿ ಎನ್ನುತ್ತಾ ಕಿಡಿ ಕಾರುತ್ತಾಳೆ ಕಾವೇರಿ. ಇದನ್ನು ನೋಡಿ ಕಾವೇರಿ ಅಮ್ಮ ಕಾವೇರಿಯ ಕೆನ್ನೆಗೆ ಬಾರಿಸುತ್ತಾಳೆ. ಅದನ್ನ ಪ್ರಶ್ನಿಸಿದ ಕಾವೇರಿಗೆ ಮತ್ತೊಮ್ಮೆ ಕಪಾಳಮೋಕ್ಷ ಮಾಡುತ್ತಾರೆ ಕಾವೇರಿಯ ಅಮ್ಮ.
ಇದನ್ನ ನೋಡಿ ವೀಕ್ಷಕರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಇದನ್ನ ಮೊದಲೇ ಮಾಡಬೇಕಿತ್ತು. ಪರವಾಗಿಲ್ಲ, ಈಗಲಾದ್ರೂ ಮಾಡಿದ್ರಲ್ವಾ ಎಂದಿದ್ದಾರೆ. ಅಷ್ಟೇ ಅಲ್ಲ ಅಂತೂ ವೈಶ್ ಮನೆಯಲ್ಲಿ ಬೇರೆಯವರಿಗೆ ಅರ್ಥ ಆಗದಿದ್ರೂ, ಈ ಹಿರಿಯ ಜೀವಕ್ಕಾದ್ರೂ ಕಾವೇರಿಯಿಂದ ಕೀರ್ತಿ ಜೀವನ ಹಾಳಾಯ್ತು ಅಂತ ಅರ್ಥ ಆಯ್ತಲ್ಲ.. ಅದೇ ಸಮಾಧಾನ. ಅಜ್ಜಿ ಎಂತಹ ಒಳ್ಳೆ ಮಾತಾಡಿದ್ರಿ ಅಜ್ಜಿ, ಒಳ್ಳೆಯ ಕೆಲಸವನ್ನೇ ಮಾಡಿದ್ದೀರಿ ಎಂದು ಮೆಚ್ಚಿಕೊಂಡಿದ್ದಾರೆ.
ಇನ್ನೂ ಕೆಲವರಂತೂ ಇದು ಚೆನ್ನಾಗಿದೆ, ಒನ್ ಮೋರ್ ಒನ್ ಮೋರ್ ಅಂತಿದ್ದಾರೆ. ಇಷ್ಟೇಲ್ಲಾ ಮಾಡಿದ್ರೂ, ಕಾವೇರಿಗೆ ಬುದ್ದಿ ಬರುತ್ತಾ? ಕಾವೇರಿ ಸತ್ಯವನ್ನು ಒಪ್ಪಿಕೊಳ್ಳುತ್ತಾಳ? ಖಂಡಿತವಾಗಿಯೂ ಆ ಲಕ್ಷಣ ಕಾಣಿಸುತ್ತಿಲ್ಲ. ಅಷ್ಟೇ ಯಾಕೆ ಇನ್ನು ಮುಂದಿನ ವಾರ ಕೂಡ ಲಕ್ಷ್ಮೀಗೆ ಜಯ ಸಿಗುತ್ತಾ ಅಂತಾನೂ ಹೇಳೋದಕ್ಕೆ ಸಾಧ್ಯ ಇಲ್ಲ. ಯಾಕಂದ್ರೆ ಇಲ್ಲಿವರೆಗೂ ಆಗಿದ್ದು ಕಾವೇರಿಯ ಜಯ, ಇನ್ನು ಮುಂದೆ ಕೂಡ ಅದೇ ಆಗುತ್ತೇನೋ?