ತೆಲುಗು ಡ್ಯಾನ್ಸ್ ಶೋಗೆ ಅಕುಲ್ ಬಾಲಾಜಿ ಆಂಕರ್; ಈ ಗುರುತಿಗೆ ಕನ್ನಡಿಗರೇ ಕಾರಣವಂತೆ!
ತೆಲುಗು ಡ್ಯಾನ್ಸ್ ರಿಯಾಲಿಟಿ ಶೋಗೆ ನಿರೂಪಕನಾದ ಅಕುಲ್ ಬಾಲಾಜಿ. ನಟನಾಗುವ ಮೊದಲು ನಾನು ಡ್ಯಾನ್ಸರ್.....

ತೆಲುಗು ಧಾರಾವಾಹಿಗಳಲ್ಲಿ ಅಭಿನಯಿಸುತ್ತಿರುವ ಕನ್ನಡ ನಟ ಅಕುಲ್ ಬಾಲಾಜಿ ಇದೀಗ ಡ್ಯಾನ್ಸ್ ರಿಯಾಲಿಟಿ ಶೋ ನಿರೂಪಕನಾಗಲು ಸಜ್ಜಾಗಿದ್ದಾರೆ.
'ಆಂಧ್ರದಲ್ಲಿ ಧಾರಾವಾಗಳಲ್ಲಿ ಅಭಿನಯಿಸಿರುವೆ ಆದರೆ 8 ವರ್ಷಗಳ ನಂತರ ನಾನು ನಿರೂಪಕನಾಗುತ್ತಿರುವೆ. ಡ್ಯಾನ್ಸ್ ರಿಯಾಲಿಟಿ ಶೋಗಳು ನನ್ನ ಮನಸ್ಸಿಗೆ ತುಂಬಾನೇ ಹತ್ತಿರವಾಗಿರುತ್ತದೆ ಏಕೆಂದರೆ ನಾನು ಮೊದಲು ಡ್ಯಾನ್ಸರ್ ಆನಂತರ ನಟ.'
'ಕುಣಿಯೋಣ ಬಾರ ಡ್ಯಾನ್ಸ್ ಶೋ ಮೂಲಕ ನಾನು ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು. ಈಗ ತೆಲುಗುನಲ್ಲಿ ಇದೇ ನಿರೂಪಣೆ ಮಾಡುತ್ತಿರುವುದು' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ನನಗೆ ಜೀವನ ಕೊಟ್ಟಿದ್ದು ಕರ್ನಾಟಕ. ಕನ್ನಡ ಅಭಿಮಾನಿಗಳು ತೋರಿಸಿದ ಪ್ರೋತ್ಸಾಹದಿಂದಲೇ ನಾನು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದ್ದು.'
'ಒಂದಾದ ಮೇಲೊಂದು ಶೋ ನೀಡಿ ಸುಮಾರು 16 ವರ್ಷಗಳ ಪಯಣ ಇದಾಗಿದೆ. ಇದರಿಂದ ಕರ್ನಾಟಕದಲ್ಲಿ ಮಾತ್ರವಲ್ಲ ಹೊರಗಡೆನೂ ಜನಪ್ರಿಯತೆ ತಂದುಕೊಟ್ಟಿದೆ. ಆಂಧ್ರಗೆ ನಾನು ಕಾಲಿಟ್ಟಾಗ ಕನ್ನಡದ ಪ್ರತಿಭೆ ಎಂದು ಗುರುತಿಸುತ್ತಾರೆ.
'ತೆಲುಗು ರಂಗದಲ್ಲಿ ಬ್ಯುಸಿ ಇದ್ದರೂ ನಾನು ಬ್ರೇಕ್ ತೆಗೆದುಕೊಂಡು ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೆ. ಎರಡೂ ರಂಗಭೂಮಿಯನ್ನು ಸಮವಾಗಿ ನಿಭಾಯಿಸುತ್ತಿರುವೆ' ಎಂದಿದ್ದಾರೆ ಅಕುಲ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.