- Home
- Entertainment
- TV Talk
- Karna Serial: ಶುರುವಾಯ್ತು ನಿಧಿ-ಕರ್ಣನ ರೊಮಾನ್ಸ್: ನಿತ್ಯಾಳ ಮೇಲೆನೇ ತೇಜಸ್ಗೆ ಅನುಮಾನದ ಕಿಡಿ!
Karna Serial: ಶುರುವಾಯ್ತು ನಿಧಿ-ಕರ್ಣನ ರೊಮಾನ್ಸ್: ನಿತ್ಯಾಳ ಮೇಲೆನೇ ತೇಜಸ್ಗೆ ಅನುಮಾನದ ಕಿಡಿ!
ಎಲ್ಲಾ ಕುತಂತ್ರಗಳನ್ನು ಮೀರಿ ನಿತ್ಯಾ ಮತ್ತು ತೇಜಸ್ ಒಂದಾಗಿದ್ದಾರೆ. ಆದರೆ, ಕರ್ಣ ಪ್ರೀತಿಯಿಂದ ತಂದುಕೊಟ್ಟ ಊಟವನ್ನು ನಿತ್ಯಾ ಸವಿಯುವುದನ್ನು ಕಂಡ ತೇಜಸ್ ಮನದಲ್ಲಿ ಅನುಮಾನದ ಕಿಡಿ ಹೊತ್ತಿಕೊಂಡಿದ್ದು, ಇದು ಅವರ ಸಂಬಂಧದಲ್ಲಿ ಹೊಸ ಬಿರುಕಿಗೆ ಕಾರಣವಾಗುವ ಸೂಚನೆ ನೀಡಿದೆ.

ರೋಚಕ ಹಂತ
ಕರ್ಣ ಸೀರಿಯಲ್ (Karna Serial) ಇದೀಗ ರೋಚಕ ಹಂತ ತಲುಪಿದೆ. ಎಲ್ಲಾ ತೊಂದರೆಗಳನ್ನು ಎದುರಿಸಿಯೂ ನಿತ್ಯಾ ಮತ್ತು ತೇಜಸ್ ಒಂದಾಗಿದ್ದಾರೆ. ಸದ್ಯ ವಿಲನ್ಗಳ ಕುತಂತ್ರ ಕೆಲಸ ಮಾಡುತ್ತಿಲ್ಲ.
ರಮೇಶ್ ಪ್ಲ್ಯಾನ್
ನಿತ್ಯಾ ಮತ್ತು ತೇಜಸ್ ಇಬ್ಬರನ್ನೂ ಸೇರಿಸಬಾರದು, ಕರ್ಣ, ನಿತ್ಯ ಮತ್ತು ನಿಧಿ ವಿಲವಿಲ ಒದ್ದಾಡಿ ಸಾಯಬೇಕು ಎನ್ನುವ ರಮೇಶ್ ಮತ್ತು ಸಂಜಯ್ ಕನಸು ಸದ್ಯ ನನಸಾಗಿಲ್ಲ. ಏನೇ ಪ್ರಯತ್ನ ಪಟ್ಟರೂ ಅವರೆಲ್ಲರೂ ಒಂದಾಗಿದ್ದಾರೆ.
ವಿಲನ್ಗಳ ಅಬ್ಬರ
ಅದೇ ಇನ್ನೊಂದೆಡೆ, ಕಿಡ್ನ್ಯಾಪ್ ಮಾಡಿಸಿದ್ದು ಕರ್ಣ ಎಂದು ತೇಜಸ್ಗೆ ಈ ವಿಲನ್ಗಳು ಹೇಳಿದ್ದರೆ, ತೇಜಸ್ ಅಪ್ಪ ಅಮ್ಮನೇ ಈ ಕೆಲಸ ಮಾಡಿಸಿದ್ದು ಎಂದು ಕರ್ಣನ ಅಮ್ಮನನ್ನು ಬ್ಲ್ಯಾಕ್ಮೇಲ್ ಮಾಡಿ ರಮೇಶ್ ಹೇಳಿಸಿದ್ದಾರೆ..
ನಿತ್ಯಾಗೆ ಹಸಿವು
ಅದೇನೇ ಇದ್ದರೂ ಸದ್ಯ ಎಲ್ಲರೂ ಜೊತೆಯಾಗಿದ್ದಾರೆ. ಈ ಎರಡೂ ಜೋಡಿ ಕಾರಿನಲ್ಲಿ ಹೋಗುವಾಗ, ಎಲ್ಲವೂ ಸುಸೂತ್ರವಾಗಿ ನಡೆಯಿತು ಎಂದು ಕಾರಿನಲ್ಲಿಯೇ ಕಣ್ಣು ಮಿಟುಕಿಸುವ ಮೂಲಕ ಕರ್ಣ ಮತ್ತು ನಿಧಿ ರೊಮಾನ್ಸ್ ಶುರು ಮಾಡಿಕೊಂಡಿದ್ದಾರೆ.
ಕರ್ಣನ ಊಟ
ನಿತ್ಯಾಳಿಗೆ ಜೋರಾದ ಹಸಿವೆಯಾಗಿದೆ. ತೇಜಸ್ ಓಡಿ ಹೋಟೆಲ್ಗೆ ಹೋಗಿ ಟೇಬಲ್ ಬುಕ್ ಮಾಡಿದ್ದಾನೆ. ಅಷ್ಟರಲ್ಲಿ ನಿಧಿ, ನಿತ್ಯಾಳಿಗಾಗಿ ಕರ್ಣ ತಯಾರಿಸಿರೋ ಊಟವನ್ನು ನೀಡಿದ್ದಾಳೆ. ಹೊರಗಿನದ್ದು ತಿನ್ನಬಾರದು ಎಂದು ಕರ್ಣ ನಿತ್ಯಾಳಿಗಾಗಿ ತಯಾರಿಸಿದ ಅಡುಗೆ ಇದು. ಇದನ್ನು ಸೇವಿಸಿ ನಿತ್ಯಾ ಫುಲ್ ಖುಷ್ ಆಗಿದ್ದಾಳೆ.
ಕಾಡಿತು ಸಂದೇಹ
ಅದೇ ವೇಳೆ, ತೇಜಸ್ ಹೋಟೆಲ್ ಬುಕ್ ಮಾಡಿರುವ ವಿಷಯ ಹೇಳಲು ಓಡೋಡಿ ಬಂದಾಗ, ಕರ್ಣನ ಅಡುಗೆಯನ್ನು ನಿತ್ಯಾ ಸವಿಯುತ್ತಿದ್ದುದನ್ನು ನೋಡಿ ಅವನಿಗೆ ಕಸಿವಿಸಿಯಾಗಿದೆ. ಮನಸ್ಸಿನಲ್ಲಿಯೇ ಏನೋ ಸಂದೇಹವೂ ಕಾಡತೊಡಗಿದೆ. ಹಾಗಿದ್ದರೆ ಮುಂದೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

