- Home
- Entertainment
- TV Talk
- Karna Serial: ಎಷ್ಟು ಕ್ಯೂಟ್ರೀ ನಿಮ್ ಜೋಡಿ, ಕಣ್ಣು ಬೀಳಬಾರದೆಂದು ಟಿವಿ ಪರದೆಗೇ ದೃಷ್ಟಿ ತೆಗೆದುಬಿಟ್ಟೆ ಕಣ್ರೀ!
Karna Serial: ಎಷ್ಟು ಕ್ಯೂಟ್ರೀ ನಿಮ್ ಜೋಡಿ, ಕಣ್ಣು ಬೀಳಬಾರದೆಂದು ಟಿವಿ ಪರದೆಗೇ ದೃಷ್ಟಿ ತೆಗೆದುಬಿಟ್ಟೆ ಕಣ್ರೀ!
ಕರ್ಣ ಸೀರಿಯಲ್ನಲ್ಲಿ ಪ್ರವಾಸಕ್ಕೆ ತೆರಳಿರುವ ನಿಧಿ ಮತ್ತು ಕರ್ಣರ ಬ್ಯಾಗ್ ಅದಲು ಬದಲಾಗುತ್ತದೆ. ಕರ್ಣನ ಷರ್ಟ್ ಧರಿಸಿ ನಿಧಿ ಖುಷಿಪಡುತ್ತಿರುವಾಗ, ಇಬ್ಬರ ರೊಮ್ಯಾಂಟಿಕ್ ಕ್ಷಣದ ಮಧ್ಯೆ ನಿತ್ಯಾ ಬಂದು ಬಾಗಿಲು ತಟ್ಟುತ್ತಾಳೆ. ಆಗ ಕರ್ಣ ಬಾತ್ರೂಮ್ನಲ್ಲಿ ಅಡಗಿಕೊಳ್ಳುತ್ತಾನೆ.

ನಿಧಿ-ಕರ್ಣ ರೊಮಾನ್ಸ್
ಕರ್ಣ ಸೀರಿಯಲ್ (Karna Serial) ನಲ್ಲಿ ಇದೀಗ ನಿಧಿ ಮತ್ತು ಕರ್ಣನ ರೊಮಾನ್ಸ್ ಶುರುವಾಗಿದೆ. ನಿಧಿ ಮತ್ತು ನಿತ್ಯಾ ಒಂದು ಕೋಣೆಯಲ್ಲಿ ಹಾಗೂ ಎರಡು ಪ್ರತ್ಯೇಕ ಕೋಣೆಗಳಲ್ಲಿ ತೇಜಸ್ ಮತ್ತು ಕರ್ಣ ರೂಮ್ ಮಾಡಿಕೊಂಡು ಪ್ರವಾಸದ ಮೂಡ್ನಲ್ಲಿದ್ದಾರೆ.
ಬ್ಯಾಗ್ ಎಕ್ಸ್ಚೇಂಜ್
ನಿಧಿ ಮತ್ತು ಕರ್ಣನ ಬ್ಯಾಗ್ ಎಕ್ಸ್ಚೇಂಜ್ ಆಗಿಬಿಟ್ಟಿದೆ. ಕರ್ಣ ಬೇಕಂತನೇ ಈ ರೀತಿ ಮಾಡಿದ್ದಾನೆ ಎಂದು ಆತನ ಷರ್ಟ್ ಹಾಕಿಕೊಂಡು ಖುಷಿ ಪಡುತ್ತಿದ್ದಾಳೆ ನಿಧಿ.
ಕರ್ಣನ ಷರ್ಟ್
ಅತ್ತ ಕರ್ಣ ಬ್ಯಾಗ್ ತೆಗೆದುಕೊಂಡು ಬಂದಾಗ, ನಿಧಿ ತನ್ನ ಷರ್ಟ್ ಹಾಕಿಕೊಂಡಿದ್ದನ್ನು ನೋಡಿ ಖುಷಿಪಟ್ಟುಕೊಂಡಿದ್ದಾನೆ. ಹೀಗೆ ಇವರಿಬ್ಬರ ರೊಮಾನ್ಸ್ ನಡೆದಿದೆ. ಒಬ್ಬರಿಗೊಬ್ಬರು ನೋಡುವುದರಲ್ಲಿಯೇ ಕಳೆದು ಹೋಗಿದ್ದಾರೆ.
ನಿಧಿ-ಕರ್ಣನಿಗೆ ಪೇಚಾಟ
ಅಷ್ಟರಲ್ಲಿ ನಿತ್ಯಾ ಬಂದು ಬಾಗಿಲು ಬಡಿದಿದ್ದಾಳೆ. ಒಳಗಡೆಯಿಂದ ಲಾಕ್ ಹಾಕಿರೋ ನಿಧಿ ಮತ್ತು ಕರ್ಣನಿಗೆ ಏನು ಮಾಡಬೇಕು ಎಂದೇ ತಿಳಿಯದಾಗಿದೆ. ಕರ್ಣನನ್ನು ಬಾತ್ರೂಮ್ ಒಳಗೆ ದಬ್ಬಿ ನಿಧಿ ಡೋರ್ ಓಪನ್ ಮಾಡಲು ಹೋಗಿದ್ದಾಳೆ.
ನಿತ್ಯಾ ಬಂದೇ ಬಿಟ್ಟಳು!
ಷರ್ಟ್ ಮೇಲೆ ಟವಲ್ ಸುತ್ತುಕೊಂಡು ನಿತ್ಯಾಗೆ ಡೌಟ್ ಬರದ ಹಾಗೆ, ಬಾಗಿಲು ತೆರೆದಿದ್ದಾಳೆ. ಅಕ್ಕಳನ್ನು ಹೇಗಾದರೂ ಅಲ್ಲಿಂದ ಸಾಗ ಹಾಕುವ ಪ್ಲ್ಯಾನ್ ಮಾಡಿದ್ರೆ ನಿತ್ಯಾ ನೇರವಾಗಿ ಒಳಗೇ ಬಂದುಬಿಟ್ಟಿದ್ದಾಳೆ.
ಟಿವಿ ಪರದೆಗೆ
ಇವುಗಳ ನಡುವೆಯೇ, ನಿಧಿ ಮತ್ತು ಕರ್ಣನ ಮುದ್ದಾದ ರೊಮಾನ್ಸ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ನಿಮ್ಮ ಜೋಡಿ ಸಕತ್ ಕ್ಯೂಟ್, ಯಾರ ಕಣ್ಣೂ ಬೀಳದಿರಲಿ ಎಂದು ಕೆಲವರು ಹೇಳಿದ್ರೆ, ನೇರವಾಗಿ ನಿಮ್ಮ ದೃಷ್ಟಿ ತೆಗೆಯಲು ಆಗಲ್ಲ ಎಂದು ಟಿವಿ ಪರದೆಗೇ ದೃಷ್ಟಿ ತೆಗೆದೆ ಎಂದೂ ಕಮೆಂಟ್ ಹಾಕಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

