- Home
- Entertainment
- TV Talk
- Karna Serial: ಕರ್ಣ ಏನಾದ್ರೂ ಅದೊಂದು ಮಾತು ಹೇಳಿದ್ರೆ ಮಾತ್ರ ವೀಕ್ಷಕರ ಆಸೆಗೆ ಎಳ್ಳು ನೀರು ಬಿಟ್ಟಂಗೆ!
Karna Serial: ಕರ್ಣ ಏನಾದ್ರೂ ಅದೊಂದು ಮಾತು ಹೇಳಿದ್ರೆ ಮಾತ್ರ ವೀಕ್ಷಕರ ಆಸೆಗೆ ಎಳ್ಳು ನೀರು ಬಿಟ್ಟಂಗೆ!
Karna Serial Episode: ಕರ್ಣ ಧಾರಾವಾಹಿಯಲ್ಲಿ ನಿತ್ಯಾಗೆ ತಾನು ಪ್ರಗ್ನೆಂಟ್ ಎನ್ನೋದು ಗೊತ್ತಾಗಿದೆ. ತೇಜಸ್ ಕೂಡ ಈಗ ಕಾಣಿಸುತ್ತಿಲ್ಲ, ಈಗ ಹೊಟ್ಟೆಯಲ್ಲಿರುವ ಮಗುಗೆ ತಂದೆ ಪ್ರೀತಿ ಕೂಡ ಸಿಗೋದಿಲ್ಲ ಎಂದು ಅವಳು ಗರ್ಭಪಾತ ಮಾಡಿಸಲು ಮುಂದಾಗಿದ್ದಳು. ಇದನ್ನು ಕರ್ಣ ತಡೆಯುತ್ತಾನಾ?

ಸಿಟ್ಟಿನಲ್ಲಿ ಸತ್ಯ ಹೇಳಿದ ಕರ್ಣ
ಕರ್ಣ ಧಾರಾವಾಹಿಯಲ್ಲಿ ನಿತ್ಯಾ, ಕರ್ಣ ಮದುವೆ ಆದೆವು ಎಂದು ನಾಟಕ ಮಾಡುತ್ತಿದ್ದಾರೆ, ಹೀಗಿರುವಾಗ ತೇಜಸ್ ಚಿಕ್ಕಮಗಳೂರಿನಲ್ಲಿದ್ದಾರೆಂದು ತಿಳಿದು, ಅವನನ್ನು ಹುಡುಕಲು ಅಲ್ಲಿಗೆ ಬಂದಿದ್ದಾರೆ. ನಿತ್ಯಾ ತನ್ನ ಆರೋಗ್ಯದ ಕಡೆಗೆ ಗಮನ ಕೊಡುತ್ತಿಲ್ಲವೆಂದು ಕರ್ಣ, ಸಿಟ್ಟಿನಲ್ಲಿ ಅವಳು ಪ್ರಗ್ನೆಂಟ್ ಎಂದು ಹೇಳಿದ್ದಾನೆ.
ಮಾಹಿತಿ ಪಡೆದ ಕರ್ಣ
ತನ್ನ ಮಗು ತಂದೆಯಿಲ್ಲದೆ ಅನಾಥವಾಗುತ್ತದೆ, ಸಮಾಜದ ಎದುರು ಅಪರಾಧಿ ಆಗುತ್ತದೆ ಎಂದು ನಿತ್ಯಾ, ಗರ್ಭಪಾತ ಮಾಡಿಸಿಕೊಳ್ಳಲು ಮುಂದಾಗಿದ್ದಳು. ಕರ್ಣನಿಗೆ ಈ ವಿಷಯ ಗೊತ್ತಾಗಿ ಆಸ್ಪತ್ರೆಗೆ ಹೋಗಿದ್ದಾನೆ. ಅದಕ್ಕೂ ಮುನ್ನ ನಿಧಿಗೆ ಫೋನ್ ಮಾಡಿ, ಅಕ್ಕ ಫೋನ್ ಮಾಡಿದ್ರಾ? ಯಾವ ಆಸ್ಪತ್ರೆ ಎಂದೆಲ್ಲ ಡಿಟೇಲ್ಸ್ ಪಡೆದು ಅಲ್ಲಿಗೆ ಹೋಗಿದ್ದಾನೆ.
ನಿತ್ಯಾಳ ಗರ್ಭಪಾತವನ್ನು ತಡೆದನು
ಕರ್ಣನಿಗೆ ದಾರಿ ಮಧ್ಯೆ ಗೂಂಡಾಗಳು ತಡೆದರು, ಅಲ್ಲಿಯೂ ಅವನು ಫೈಟ್ ಮಾಡಿ ಹೋಗಿದ್ದಾನೆ. ಆಸ್ಪತ್ರೆಗೆ ಹೋಗಿ ನಿತ್ಯಾಳ ಗರ್ಭಪಾತವನ್ನು ಅವನು ತಡೆದಿದ್ದಾನೆ. ಆಮೇಲೆ ನಿತ್ಯಾಗೆ ಸಮಾಧಾನ ಮಾಡಿದ್ದಾನೆ. ಆಗ ನಿತ್ಯಾ ಕೇಳಿದ ಪ್ರಶ್ನೆಗೆ ಉತ್ತರವೇ ಇಲ್ಲದಂತಾಗಿದೆ.
ಮಗುಗೆ ಅಪ್ಪ ಯಾರು?
“ನನ್ನ ಮಗುಗೆ ಅಪ್ಪ ಯಾರು ಎಂದು ಹೇಳಲಿ? ಸಮಾಜದ ಎದುರು ಆ ಮಗು ಅಪರಾಧಿ ಆಗಿ ನಿಲ್ಲೋದು ಬೇಡ” ಎಂದು ನಿತ್ಯಾ ಹೇಳುತ್ತಾಳೆ. ಈ ಪ್ರಶ್ನೆಗೆ ಕರ್ಣ ಏನು ಹೇಳುತ್ತಾನೆ? ನಿತ್ಯಾ ಮಗುಗೆ ನಾನೇ ತಂದೆ ಆಗ್ತೀನಿ ಎಂದು ಕರ್ಣ ಹೇಳಿದರೆ ಅಲ್ಲಿಗೆ ನಿಧಿ ಜೊತೆಗಿನ ಲವ್‌ಸ್ಟೋರಿಗೆ ಎಳ್ಳು ನೀರು ಬಿಡಬೇಕಾಗಿ ಬರುವುದು.
ಇದು ತಪ್ಪಲ್ಲವೇ?
ಮದುವೆಗೂ ಮುನ್ನ ದೈಹಿಕ ಸಂಪರ್ಕ ಹೊಂದಿರೋದು, ತಾಯಿಯಾಗ್ತಿರೋದು ತಪ್ಪು. ಆದರೆ ನಿತ್ಯಾ ತಾನು ಮಾಡಿದ್ದು ತಪ್ಪು, ಪ್ರೀತಿಯ ಅಮಲಿನಲ್ಲಿ ಹೀಗೆ ಮಾಡಿದೆ ಎಂದು ಹೇಳೋದಿಲ್ಲ. ಇದು ವೀಕ್ಷಕರಿಗೆ ಆಶ್ಚರ್ಯಮೂಡಿಸುವುದು. ಸಂಸ್ಕಾರಯುತ ಮನೆಯಲ್ಲಿ ಹುಟ್ಟಿದ ನಿತ್ಯಾ ಹೀಗೆ ಮಾಡ್ತಾಳಾ?