Karimani Serial: ಕರ್ಣ, ಸಾಹಿತ್ಯ ಮದುವೆ ರೋಚಕ ಎಪಿಸೋಡ್ ತೆರೆ ಹಿಂದಿನ ಫೋಟೋಗಳಿವು!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ʼಕರಿಮಣಿʼ ಧಾರಾವಾಹಿ ಮದುವೆ ಎಪಿಸೋಡ್ ಮುಗಿದಿದೆ. 23 ಎಪಿಸೋಡ್‌ಗಳ ಕಾಲ ಮದುವೆ ಎಪಿಸೋಡ್ ಪ್ರಸಾರ ಮಾಡಲಾಗಿತ್ತು. ಕರ್ಣ ಹಾಗೂ ಸಾಹಿತ್ಯ ಇಬ್ಬರಿಗೂ ಮದುವೆ ಆಗತ್ತಾ? ಅಥವಾ ಬೇರೆ ಬೇರೆ ಮದುವೆ ಆಗ್ತಾರಾ ಎಂಬ ಪ್ರಶ್ನೆ ಇತ್ತು. ಇದಕ್ಕೀಗ ಉತ್ತರ ಸಿಕ್ಕಿದ್ದು, ರೋಚಕ ಎಪಿಸೋಡ್ ಜೊತೆಗೆ ಈ ಜೋಡಿ ಮದುವೆ ಆಗಿದೆ.

ಕರಿಮಣಿ ಧಾರಾವಾಹಿಯಲ್ಲಿ ಕರ್ಣ ಪಾತ್ರದಲ್ಲಿ ಅಶ್ವಿನ್ ಎಚ್ ಹಾಗೂ ಸಾಹಿತ್ಯ ಪಾತ್ರದಲ್ಲಿ ಸ್ಪಂದನಾ ಸೋಮಣ್ಣ ಅವರು ನಟಿಸುತ್ತಿದ್ದಾರೆ.
ಕರ್ಣನನ್ನು ಮದುವೆಯಾಗಲು ಸಿಂಚನಾ ತುಂಬ ಪ್ರಯತ್ನಮಾಡುತ್ತಾಳೆ. ಕೊನೆಗೂ ಅವಳಿಗೆ ಕರ್ಣ, ಸಾಹಿತ್ಯಳನ್ನು ಸೇರಬೇಕು ಅಂತ ಅರಿವಾಗುತ್ತದೆ.
ಅರಿಷಿಣ ಶಾಸ್ತ್ರದಲ್ಲಿ ಸಿಂಚನಾ ಹಾಗೂ ಕರ್ಣ ಕಾಣಿಸಿಕೊಂಡಿದ್ದು ಹೀಗೆ. ತೆರೆ ಹಿಂದೆ ಕೂಡ ಈ ಜೋಡಿ ತುಂಬ ಒಳ್ಳೆಯ ಸ್ನೇಹ ಸಂಬಂಧ ಇದೆ.
ರಾಜೇಂದ್ರ ಪ್ರಸಾದ್ ಮನೆಯ ಸಾಹಿತ್ಯ, ಕರ್ಣ ಸಹೋದರರು ಕಾಣಿಸಿಕೊಂಡಿದ್ದು ಹೀಗೆ. ತೆರೆ ಇವರೆಲ್ಲರೂ ಮಸ್ತ್ ಎಂಜಾಯ್ ಮಾಡುತ್ತಾರೆ.
ಕರ್ಣ ಪಾತ್ರದಲ್ಲಿ ಅಶ್ವಿನ್ ಅವರು ನಟಿಸುತ್ತಿದ್ದಾರೆ. ಆರಂಭದಲ್ಲಿ ಕೆಲವರು ಇಷ್ಟಪಟ್ಟಿಲ್ಲ ಅಂತ ಅಶ್ವಿನ್ ಬೇಸರ ಮಾಡಿಕೊಂಡಿದ್ದಾನಂತೆ.
ತೆರೆ ಮೇಲೆ ಈ ಜೋಡಿ ಆರಂಭದಲ್ಲಿ ಜಗಳ ಮಾಡಿಕೊಂಡಿತ್ತು. ಆಮೇಲೆ ಸ್ನೇಹಿತರಾದರು. ಈಗ ಸತಿ-ಪತಿಗಳಾದರು. ತೆರೆ ಹಿಂದೆ ಇವರಿಬ್ಬರು ತುಂಬ ಸಪೋರ್ಟಿವ್.
ಕರ್ಣ ಹಾಗೂ ಸಾಹಿತ್ಯ ಜೋಡಿಯನ್ನು ಅನೇಕರು ಇಷ್ಟಪಡ್ತಾರೆ. ಇವರಿಗೆ ಒಂದು ದೊಡ್ಡ ಅಭಿಮಾನಿ ಬಳಗ ಇದೆ. ಈ ಧಾರಾವಾಹಿ ಕಥೆ ಹೇಗೆ ಮೂಡಿ ಬರಲಿದೆ ಎಂದು ಕಾದು ನೋಡಬೇಕಿದೆ.