- Home
- Entertainment
- TV Talk
- ಕನ್ನಡತಿ ರಂಜನಿ ರಾಘವನ್ ದೇಸಿ ಲುಕ್’ಗೆ ಕನ್ನಡಿಗರು ಫಿದಾ... ಬೇಗನೆ ದೃಷ್ಟಿ ತೆಗೆಸಿ ಅಂದ್ರು
ಕನ್ನಡತಿ ರಂಜನಿ ರಾಘವನ್ ದೇಸಿ ಲುಕ್’ಗೆ ಕನ್ನಡಿಗರು ಫಿದಾ... ಬೇಗನೆ ದೃಷ್ಟಿ ತೆಗೆಸಿ ಅಂದ್ರು
ಕನ್ನಡತಿ ಸೀರಿಯಲ್ ಮೂಲಕ ಭುವಿ ಟೀಚರ್ ಆಗಿ ಜನಪ್ರಿಯತೆ ಗಳಿಸಿದ ನಟಿ ರಂಜನಿ ರಾಘವನ್ ಸೀರೆಯುಟ್ಟು ಮಿಂಚಿದ್ದು, ಅವರ ಹೊಸ ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗ್ತಿವೆ.

ರಂಜನಿ ರಾಘವನ್ (Ranjani Raghavan) ಅಂದ್ರೆ ನೆನಪಾಗೋದು ಕನ್ನಡತಿ ಸೀರಿಯಲ್. ಕನ್ನಡತಿ ಧಾರಾವಾಹಿಯಲ್ಲಿ ಭುವಿ ಟೀಚರ್ ಆಗಿ ಕನ್ನಡಿಗರ ಮನಗೆದ್ದ ಬೆಡಗಿ ರಂಜನಿ. ಕನ್ನಡವನ್ನೆ ಉಸಿರಾಗಿಸಿಕೊಂಡಿದ್ದು, ಪ್ರಬುದ್ಧ ನಾಯಕಿ ಭುವಿ ಪಾತ್ರದಲ್ಲಿ ಸದಾ ಸೀರೆಯುಟ್ಟೇ ಕಾಣಿಸಿಕೊಳ್ಳುತ್ತಿದ್ದ ರಂಜನಿಗೆ ನಿಜ ಜೀವನದಲ್ಲೂ ಸೀರೆ ಎಂದರೆ ಬಲು ಪ್ರೀತಿ.
ಸೋಶಿಯಲ್ ಮೀಡಿಯಾದಲ್ಲಿ ರಂಜನಿ ಅವರ ಫೋಟೊಗಳನ್ನ ನೋಡಿದ್ರೆ, ನಟಿ ಹೆಚ್ಚಾಗಿ ಸೀರೆಯುಟ್ಟು ಫೋಟೊ ಶೂಟ್ ಮಾಡಿಸಿರೋದನ್ನ ಕಾಣಬಹುದು. ಒಂದು ಸಲ ಕಾಟನ್ ಸೀರೆ, ಒಂದು ಸಲ ಇಳ್ಕಲ್ ಸೀರೆ, ಮತ್ತೊಂದು ಸಲ ಅಮ್ಮನ ಮೈಸೂರ್ ಸಿಲ್ಕ್ ಸೀರೆ. ಹೀಗೆ ಸೀರೆಯಲ್ಲೇ ರಂಜನಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ರಂಜನಿ ರಾಘವನ್ ಬಿಳಿ ಸೀರೆ ಮತ್ತು ಕೆಂಪು ಬಣ್ಣದ ಸ್ಲೀವ್ ಲೆಸ್ ಬ್ಲೌಸ್ ಧರಿಸಿ ಫೋಟೊ ಶೂಟ್ ಮಾಡಿಸಿದ್ದು, ಬ್ಯಾಕ್ ಗ್ರೌಂಡಲ್ಲಿ ಇಳಯರಾಜ ಮ್ಯೂಸಿಕ್ ಹಾಕಿದ್ದು, ಸೀರೆಯಲ್ಲಿ ತುಂಬಾನೆ ಮುದ್ದಾಗಿ ಕಾಣಿಸ್ತಿದ್ದಾರೆ. ರಂಜನಿ ಟ್ರೆಡಿಶನಲ್ ಲುಕ್ ಗೆ ಅಭಿಮಾನಿಗಳು ಕೂಡ ಮನಸೋತಿದ್ದಾರೆ.
ಜನರು ಶ್ವೇತ ಸುಂದರಿ, ತುಂಬಾನೆ ಮುದ್ದಾಗಿ ಕಾಣಿಸ್ತಿದ್ದೀರಿ, ತುಂಬಾ ಅದ್ಭುತವಾಗಿ ಮೂಡಿಬಂದಿದೆ ನಿಮ್ಮ ಪೋಟೋ, ಮೈಸೂರು ಮಲ್ಲಿಗೆ , ಕನ್ನದದ ಕಣ್ಮಣಿ, ದೇವತೆ, ಸುಂದರಿ, ಕೋಟಿ ಜನ ಕರ್ನಾಟಕದಲ್ಲಿ ಇದ್ದರೂ ನೀವೊಬ್ಬರೇ ಕನ್ನಡತಿ ಎಂದು ಕನ್ನಡತಿಯ ಬೆಡಗಿಯನ್ನು ಹಾಡಿ ಹೊಗಳಿದ್ದಾರೆ.
ಅಷ್ಟೇ ಅಲ್ಲ ಅನುಬಂಧ ಅವಾರ್ಡ್ಸ್" ನಲ್ಲಿ ನಿಮ್ಮನ್ನು ತುಂಬಾ ಮಿಸ್ ಮಾಡ್ಕೊಂಡೆ ಎಂದು ಸಹ ಹೇಳಿದ್ದಾರೆ, ಜೊತೆಗೆ ಬಿಗ್ ಬಾಸ್ (Bigg Boss Season 11) ಕಾರ್ಯಕ್ರಮಕ್ಕೆ ನೀವು ಬಂದೇ ಬರ್ತಿರಿ ಅಂತ ಕಾಯ್ತಿದ್ದೆ ಅಂತಾನೂ ಹೇಳಿದ್ದಾರೆ. ತುಂಬ ತುಂಬ ತುಂಬ ತುಂಬ ತುಂಬ ಚೆನ್ನಾಗಿ ಕಾಣ್ತಾ ಇದಿರ ದೃಷ್ಟಿ ಆಗುತ್ತೆ, ಆದಷ್ಟು ಬೇಗ ದೃಷ್ಟಿ ತೆಗೆಸಿ ಅಂತಾನೂ ಜನ ಕಾಮೆಂಟ್ ಮಾಡಿದ್ದಾರೆ.
ಕನ್ನಡತಿ ಬಳಿಕ ಕಿರುತೆರೆಯಿಂದ ದೂರ ಉಳಿದಿರುವ ರಂಜನಿ ರಾಘವನ್ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ವರ್ಷ ನೈಟ್ ಕರ್ಫ್ಯೂ ಮತ್ತು ಕಾಂಗರೂ ಸಿನಿಮಾಗಳಲ್ಲಿ ನಟಿಸಿದ್ದರು. ಇದೀಗ ಸತ್ಯಂ ಮತ್ತು ಸ್ವಪ್ನ ಮಂಟಪ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸತ್ಯಂ ಸಿನಿಮಾ ಮೂಲಕ ತೆಲುಗಿನಲ್ಲೂ ಡೆಬ್ಯೂ ಮಾಡಲಿದ್ದಾರೆ.
ರಂಜನಿ ರಾಘವನ್ ನಟಿಯಾಗಿರೋದರ ಜೊತೆಗೆ ಬರಹಗಾರ್ತಿ (Writer) ಕೂಡ ಹೌದು, ಕತೆ ಡಬ್ಬಿ ಮತ್ತು ಸ್ವೈಪ್ ರೈಟ್ ಪುಸ್ತಕಗಳನ್ನ ಇವರು ಬರೆದಿದ್ದಾರೆ. ಇವರು ಗಾಯಕಿ ಕೂಡ ಹೌದು. ಇತ್ತೀಚೆಗಷ್ಟೆ ನಟಿ ತಮ್ಮ ಜೀವನ ಸಂಗಾತಿಯ ಫೋಟೊ ರಿವೀಲ್ ಮಾಡುವ ಮೂಲಕ ಸುದ್ದಿಯಾಗಿದ್ದರು. ಸೋಶಿಯಲ್ ಮೀಡೀಯಾದಲ್ಲಿ ಆಕ್ಟೀವ್ ಆಗಿರುವ ರಂಜನಿಗೆ ಇನ್’ಸ್ಟಾಗ್ರಾಂನಲ್ಲಿ ಬರೋಬ್ಬರಿ 1 ಮಿಲಿಯನ್ ಫಾಲೋವರ್ಸ್ ಇದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.