- Home
- Entertainment
- TV Talk
- 18 ನೇ ವಯಸ್ಸಿಗೆ ಸಾಧನೆ ಮಾಡಿರೋ ಯುಟ್ಯೂಬರ್ ಸ್ಯಾಮ್ ಸಮೀರ್ ಹುಡುಗಿ ನೇಹಾ ಗುಪ್ತ ಅನೇಕರಿಗೆ ಮಾದರಿ!
18 ನೇ ವಯಸ್ಸಿಗೆ ಸಾಧನೆ ಮಾಡಿರೋ ಯುಟ್ಯೂಬರ್ ಸ್ಯಾಮ್ ಸಮೀರ್ ಹುಡುಗಿ ನೇಹಾ ಗುಪ್ತ ಅನೇಕರಿಗೆ ಮಾದರಿ!
Kannada Youtuber Sam Sameer GF Neha Gupta: ಕನ್ನಡ ಯುಟ್ಯೂಬರ್ ಸ್ಯಾಮ್ ಸಮೀರ್, ಈಗಾಗಲೇ ಮದುವೆ ಆಗೋಕೆ ಹುಡುಗಿ ಫಿಕ್ಸ್ ಮಾಡಿಕೊಂಡಿದ್ದಾರೆ. 1 ವಾರದ ಹಿಂದೆ ಇವರು ಹುಡುಗಿ ನೋಡೋ ಶಾಸ್ತ್ರ ಮಾಡಿ, ಮದುವೆ ಫಿಕ್ಸ್ ಮಾಡಿಕೊಂಡಿದ್ದಾರೆ. ನೇಹಾ ಗುಪ್ತ ಸಾಧನೆ ಅನೇಕರಿಗೆ ಗೊತ್ತಿಲ್ಲ.

ಕೇಕ್ ಬೇಕ್ ಮಾಡ್ತಾರೆ
ನೇಹಾ ಗುಪ್ತ ಅವರು ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿದ್ದರು. ಚಿಕ್ಕ ವಯಸ್ಸಿನಲ್ಲಿ ಕೇಕ್ ಕಟ್ ಮಾಡಿ ಜನ್ಮದಿನ ಆಚರಿಸಿಕೊಳ್ಳೋದು ಎಲ್ಲರಿಗೂ ಇಷ್ಟವೇ. ಆದರೆ ನೇಹಾಗೆ ಕೇಕ್ ಕಟ್ ಮಾಡೋದು ಸುಲಭ ಇರಲಿಲ್ಲ. ಇಂದು ಇವರು ಕೇಕ್ ಬೇಕ್ ಮಾಡಿ, ಇದರಲ್ಲೇ ಜೀವನ ಕಟ್ಟುಕೊಂಡಿದ್ದಾರೆ.
11,12 ನೇ ವಯಸ್ಸಿನಲ್ಲಿ ಕೇಕ್ ಬೇಕಿಂಗ್ ಕೋರ್ಸ್ ಮಾಡಿದ್ರು
11,12 ನೇ ವಯಸ್ಸಿನಲ್ಲಿ ಇವರು ಕೇಕ್ ಮಾಡುವ ಕ್ಲಾಸ್‌ಗೆ ಹೋಗುತ್ತಿದ್ದರಂತೆ. ಅಲ್ಲಿ ಅವರು ಕೇಕ್ ಮಾಡೋದನ್ನು ಕಲಿಯುತ್ತ, ಬೇರೆಯವರಿಗೆ ಕೂಡ ಕೇಕ್ ಮಾಡೋದು ಹೇಗೆ ಎಂದು ಕ್ಲಾಸ್ ಹೇಳುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿ ಯಾರಿಗೂ ಕಿಚನ್‌ಗೆ ಬರೋಕೆ ಬಿಡೋದಿಲ್ಲ. ಆದರೂ ಇವರು ಕಷ್ಟಪಟ್ಟು ಕೇಕ್ ಮಾಡೋದು ಕಲಿತರು.
16ನೇ ವಯಸ್ಸಿಗೆ ಕೇಕ್ ಮಾರಾಟ
ವಯಸ್ಸು 16 ಆಗುತ್ತಿದ್ದಂತೆ ನೇಹಾ ಗುಪ್ತ ಅವರು ಕೇಕ್ ಮಾಡೋದು ಕಲಿತರು, ಬೇರೆಯವರಿಗೆ ಹೇಳಿಕೊಡೋದರಲ್ಲಿ ಯಶಸ್ವಿಯಾದರು. ಅದೇ ಟೈಮ್‌ಗೆ ಸರಿಯಾಗಿ ಅವರು ಬೇರೆಯವರಿಂದ ಆರ್ಡರ್ ತಗೊಂಡು ಕೇಕ್ ಮಾಡಿ ಮಾರುತ್ತಿದ್ದರು.
ಕೋರ್ಸ್ ಮುಗಿಯೋ ಮುಂಚೆ ಉದ್ಯಮ
18ನೇ ವಯಸ್ಸಿಗೆ ನೇಹಾ ಗುಪ್ತ ಅವರು ಮಾಡೆಲಿಂಗ್, ಕೇಕ್ ಬೇಕಿಂಗ್ ಎಂದು ಬ್ಯುಸಿಯಾದರು, ಆಗಲೇ ಅವರು ಉದ್ಯಮ ಶುರು ಮಾಡಿದ್ದರು. ಕೋರ್ಸ್ ಮುಗಿಸೋ ಮುಂಚೆ ಅವರು 5000 ಗ್ರಾಹಕರನ್ನು ಕೂಡ ಸಂಪಾದನೆ ಮಾಡಿದ್ದರು.
10000 ಗ್ರಾಹಕರು
ಈಗ ನೇಹಾ ಗುಪ್ತಾಗೆ 23 ವರ್ಷ ವಯಸ್ಸು. ಕಳೆದ ನಾಲ್ಕು ವರ್ಷಗಳ ಹಿಂದೆ 5000 ಗ್ರಾಹಕರನ್ನು ಹೊಂದಿದ್ದ ನೇಹಾ ಈಗ, ಹತ್ತು ಸಾವಿರಕ್ಕೂ ಅಧಿಕ ಗ್ರಾಹಕರನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ ಇವರು ಕೇಕ್ ಮಾಡುವ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಾರೆ. ಸಮೀರ್ ಗರ್ಲ್‌ಫ್ರೆಂಡ್ ಎಂದು ರಿವೀಲ್ ಆದಾಗಿನಿಂದ ಇವರ ಇನ್‌ಸ್ಟಾಗ್ರಾಮ್ ಪೇಜ್ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದೆ.
ಸೆಲೆಬ್ರಿಟಿಗಳು ಖರೀದಿ ಮಾಡ್ತಾರೆ
ಶ್ರೀಲೀಲಾ, ಧ್ರುವ ಸರ್ಜಾರಿಂದ ಹಿಡಿದು ಸಿನಿಮಾ ಹಾಗೂ ರಾಜಕೀಯ ಸೆಲೆಬ್ರಿಟಿಗಳಿಗೂ ಕೂಡ ನೇಹಾ ಅವರು ಕೇಕ್ ಬೇಕ್ ಮಾಡಿಕೊಡ್ತಾರೆ. ಅಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಇವೆಂಟ್‌ಗಳಿಗೂ ಕೂಡ ಕೇಕ್ ಬೇಕ್ ಮಾಡ್ತಾರೆ. 18 ನೇ ವಯಸ್ಸಿಗೆ ಸೌತ್ ವುಮನ್ ಅಚೀವರ್ಸ್ ಅವಾರ್ಡ್ ಕೂಡ ಬಂದಿದೆ.
ಕೇಕ್ ತಯಾರಿಕೆಗೆ ಬೇಕಾದ ಕಿಚನ್
ನೇಹಾ ಅವರು ಕೇಕ್ ಬೇಕಿಂಗ್ ಕೋರ್ಸ್ ಮುಗಿಸೋ ವೇಳೆಗೆ ಅವರ ಮನೆಯಲ್ಲಿ ಮನೆ ಕಟ್ಟುತ್ತಿದ್ದರು. ಇವರಿಗೋಸ್ಕರ ಬೇಕಾದ ರೀತಿಯಲ್ಲಿ ಕಿಚನ್ ಕೂಡ ಕಟ್ಟಿದ್ದಾರಂತೆ.
ಸಾಮಾಜಿಕ ಸೇವೆಯೂ ಇದೆ
ಸಮಾಜಕ್ಕೆ ಏನಾದರೂ ಕೊಡಬೇಕು ಎಂದು ಅವರು expedition annapoorna ಎನ್ನುವ ಅಭಿಯಾನ ಆರಂಭಿಸಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿರುವ ಅಸಹಾಯಕರಿಗೆ, ಎನ್‌ಜಿಒಗಳಿಗೆ, ಅನಾಥಾಶ್ರಮಗಳಿಗೆ ಅನ್ನದಾನ, ಊಟದ ರೇಶನ್, ಅವಶ್ಯಕ ಸಾಮಗ್ರಿಗಳನ್ನು ಒದಗಿಸಲಾಗ್ತಿದೆ. ಇದರಲ್ಲಿ ಈಗ 70 ಜನರು ನಿರಂತರವಾಗಿ ಅನ್ನದಾನ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

