- Home
- Entertainment
- TV Talk
- ಯುಟ್ಯೂಬಲ್ಲಿ ದುಡಿದಾಯ್ತು, ಉದ್ಯಮ ಮಾಡಾಯ್ತು: 25ನೇ ವಯಸ್ಸಿಗೆ ತಾಯಿಯಾಗ್ತಿರೋ ಕನ್ನಡ ಯುಟ್ಯೂಬರ್ ಮಧು ಗೌಡ
ಯುಟ್ಯೂಬಲ್ಲಿ ದುಡಿದಾಯ್ತು, ಉದ್ಯಮ ಮಾಡಾಯ್ತು: 25ನೇ ವಯಸ್ಸಿಗೆ ತಾಯಿಯಾಗ್ತಿರೋ ಕನ್ನಡ ಯುಟ್ಯೂಬರ್ ಮಧು ಗೌಡ
ಕನ್ನಡದ ಜನಪ್ರಿಯ ಯೂಟ್ಯೂಬರ್ ಮಧು ಗೌಡ ಸದ್ಯ ತಮ್ಮ ವೈಯಕ್ತಿಕ ಜೀವನದ ಖುಷಿಯ ವಿಚಾರದಿಂದ ಸುದ್ದಿಯಲ್ಲಿದ್ದಾರೆ. ಮದುವೆಯಾಗಿ ಎರಡು ವರ್ಷಗಳ ಬಳಿಕ ಇದೀಗ 25ನೇ ವಯಸ್ಸಿನಲ್ಲೇ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಮಧು.

ತಾಯಿಯಾಗ್ತಿರೋ ಕನ್ನಡ ಯುಟ್ಯೂಬರ್ ಮಧು ಗೌಡ
ಕನ್ನಡದ ಜನಪ್ರಿಯ ಯೂಟ್ಯೂಬರ್ ಮಧು ಗೌಡ ಸದ್ಯ ತಮ್ಮ ವೈಯಕ್ತಿಕ ಜೀವನದ ಖುಷಿಯ ವಿಚಾರದಿಂದ ಸುದ್ದಿಯಲ್ಲಿದ್ದಾರೆ. ಮದುವೆಯಾಗಿ ಎರಡು ವರ್ಷಗಳ ಬಳಿಕ ಇದೀಗ 25ನೇ ವಯಸ್ಸಿನಲ್ಲೇ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಮಧು ಗೌಡ, ತಮ್ಮ ಬೇಬಿ ಬಂಪ್ ಫೋಟೋಶೂಟ್ ಮೂಲಕ ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದ್ದಾರೆ. ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿರುವ ಮಧು ಗೌಡ ಅವರ ಪ್ರೆಗ್ನೆನ್ಸಿ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ದಂಪತಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ನಿಖಿಲ್ ರವೀಂದ್ರ ಜೊತೆ ಅದ್ಧೂರಿ ಮದುವೆ
ಮಧು ಗೌಡ ಅವರು ಯೂಟ್ಯೂಬರ್ ನಿಖಿಲ್ ರವೀಂದ್ರ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರ ಮದುವೆ ಅದ್ಧೂರಿಯಾಗಿ ನಡೆದಿದ್ದು, ಹಲವು ದಿನಗಳ ಕಾಲ ನಡೆದ ವಿವಾಹ ಕಾರ್ಯಕ್ರಮ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ನಿಖಿಲ್ ಅವರ ತಂಗಿ ನಿಶಾ ಹಾಗೂ ಮಧು ಗೌಡ ಸ್ನೇಹಿತರಾಗಿದ್ದು, ಇವರಿಬ್ಬರ ಮೂಲಕವೇ ಮಧು ಮತ್ತು ನಿಖಿಲ್ ಪರಿಚಯವಾಗಿದ್ದರು ಎನ್ನಲಾಗಿದೆ. ಬಳಿಕ ಸ್ನೇಹ ಪ್ರೀತಿಯಾಗಿ, ಕೊನೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಯೂಟ್ಯೂಬ್‌ನಿಂದಲೇ ಕೋಟ್ಯಂತರ ಆದಾಯವಾ?
ಮಧು ಗೌಡ ಮತ್ತು ನಿಖಿಲ್ ರವೀಂದ್ರ ಅವರ ಐಷಾರಾಮಿ ಜೀವನಶೈಲಿ ಕಂಡು, ಯೂಟ್ಯೂಬ್‌ನಿಂದಲೇ ಇವರಿಗೆ ದೊಡ್ಡ ಮೊತ್ತದ ಹಣ ಬರುತ್ತದೆ ಎಂಬ ಮಾತುಗಳು ಆಗಾಗ ಕೇಳಿಬರುತ್ತಿದ್ದವು. ಪದೇಪದೇ ಟ್ರಿಪ್‌ಗಳು, ಚಿನ್ನದ ಖರೀದಿ, ಮನೆ ಹಾಗೂ ದುಬಾರಿ ವಸ್ತುಗಳನ್ನು ನೋಡಿದ ಕೆಲವರು ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದರು. ಈ ವಿಚಾರದ ಬಗ್ಗೆ ನಿಶಾ ಮಾತನಾಡಿದ್ದು, ಕನ್ನಡ ಯೂಟ್ಯೂಬರ್‌ಗಳಿಗೆ ಹಿಂದಿ ಯೂಟ್ಯೂಬರ್‌ಗಳಷ್ಟು ದೊಡ್ಡ ಪ್ರಮಾಣದ ಆದಾಯ ಬರುವುದು ಕಷ್ಟ ಎಂದು ಹೇಳಿದ್ದರು. ಅವರ ಪ್ರಕಾರ, ಯೂಟ್ಯೂಬ್‌ನಿಂದ ತಿಂಗಳಿಗೆ ಸುಮಾರು ₹1 ಲಕ್ಷದಿಂದ ₹2 ಲಕ್ಷದವರೆಗೆ ಆದಾಯ ಬರಬಹುದು. ಆದರೆ ಈ ಮೊತ್ತ ಪ್ರತೀ ತಿಂಗಳು ಒಂದೇ ರೀತಿ ಇರುವುದಿಲ್ಲ. ವೀಕ್ಷಣೆ ಹೆಚ್ಚಾದಂತೆ ಆದಾಯವೂ ಬದಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಗೋಲ್ಡ್, ಥಾರ್ ಎಲ್ಲವೂ ಯೂಟ್ಯೂಬ್ ಹಣದಿಂದಲ್ಲ
ಮಧು ಗೌಡ ಚಿನ್ನ ಖರೀದಿಸಿದಾಗ ಅಥವಾ ಕುಟುಂಬದವರು ಥಾರ್ ಕಾರು ಖರೀದಿಸಿದಾಗ, ಅದನ್ನೆಲ್ಲ ಯೂಟ್ಯೂಬ್ ಆದಾಯದಿಂದಲೇ ಮಾಡಿದ್ದಾರೆ ಎಂದು ಹಲವರು ಭಾವಿಸಿದ್ದರು. ಆದರೆ ಯೂಟ್ಯೂಬ್ ಮಾತ್ರ ಇವರ ಏಕೈಕ ಆದಾಯದ ಮೂಲವಲ್ಲ ಎಂಬುದು ನಿಶಾ ಅವರ ಮಾತಿನಿಂದ ಸ್ಪಷ್ಟವಾಗಿದೆ. ಮಧು ಗೌಡ ಮತ್ತು ನಿಖಿಲ್ ರವೀಂದ್ರ ಅವರು ಜಾಹೀರಾತುಗಳು, ಬ್ಯುಸಿನೆಸ್ ಹಾಗೂ ಸೀರೆ ಉದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಸೀರೆ ಬ್ಯುಸಿನೆಸ್‌ನಲ್ಲೂ ಸಕ್ಸಸ್
ಯೂಟ್ಯೂಬ್‌ನಲ್ಲಿ ಜನಪ್ರಿಯತೆ ಗಳಿಸಿರುವ ಈ ಜೋಡಿ ಇದೀಗ ತಮ್ಮದೇ ಸೀರೆ ಬ್ಯುಸಿನೆಸ್ ಕೂಡ ನಡೆಸುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಉದ್ಯಮವನ್ನು ಪ್ರಮೋಟ್ ಮಾಡುತ್ತಿದ್ದು, ಈ ಬ್ಯುಸಿನೆಸ್ ಕೂಡ ಉತ್ತಮವಾಗಿ ಸಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಯೂಟ್ಯೂಬ್ ಜೊತೆಗೆ ಉದ್ಯಮದಲ್ಲೂ ತೊಡಗಿಸಿಕೊಂಡಿರುವ ಮಧು ಗೌಡ, ತಮ್ಮದೇ ಆದ ವೃತ್ತಿಜೀವನವನ್ನು ಕಟ್ಟಿಕೊಂಡಿದ್ದಾರೆ.
ಇದೀಗ 25ನೇ ವಯಸ್ಸಿಗೆ ತಾಯಿಯಾಗುವ ಸಂಭ್ರಮ
ಯೂಟ್ಯೂಬ್, ಸೋಶಿಯಲ್ ಮೀಡಿಯಾ ಹಾಗೂ ಉದ್ಯಮದ ಮೂಲಕ ತಮ್ಮದೇ ಗುರುತನ್ನು ಸಂಪಾದಿಸಿರುವ ಮಧು ಗೌಡ, ಇದೀಗ ಜೀವನದ ಮತ್ತೊಂದು ಮಹತ್ವದ ಹಂತಕ್ಕೆ ಕಾಲಿಡುತ್ತಿದ್ದಾರೆ. ಮದುವೆಯಾಗಿ ಎರಡು ವರ್ಷಗಳ ಬಳಿಕ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಮಧು ಗೌಡ, ಸದ್ಯ ಎಂಟು ತಿಂಗಳ ಗರ್ಭಿಣಿಯಾಗಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಾಡಿಸಿರುವ ವಿಶೇಷ ಬೇಬಿ ಬಂಪ್ ಫೋಟೋಶೂಟ್ ಗಮನ ಸೆಳೆಯುತ್ತಿದೆ. ಯೂಟ್ಯೂಬ್‌ನಲ್ಲಿ ಯಶಸ್ಸು, ಉದ್ಯಮದಲ್ಲಿ ಸಕ್ಸಸ್, ಇದೀಗ 25ನೇ ವಯಸ್ಸಿಗೆ ತಾಯಿಯಾಗುವ ಸಂಭ್ರಮ—ಮಧು ಗೌಡ ಅವರ ಜೀವನದ ಈ ಹೊಸ ಅಧ್ಯಾಯಕ್ಕೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.