AI ಬಳಸಿ ಫೋಟೋ ಎಡಿಟ್ ಮಾಡಿ: ಮದುವೆ ವದಂತಿಗೆ ನಿರೂಪಕಿ ಅನುಪಮಾ ಗೌಡ ಖಡಕ್ ಉತ್ತರ!
ನಿರೂಪಕಿ ಅನುಪಮಾ ಗೌಡ ಅವರ ಮದುವೆ ಹಾಗೂ ನಿಶ್ಚಿತಾರ್ಥದ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಹುಟ್ಟುಹಬ್ಬದ ಫೋಟೋಗಳನ್ನು ಬಳಸಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರಿಗೆ ವ್ಯಂಗ್ಯದ ಮೂಲಕವೇ ಉತ್ತರಿಸಿದ್ದಾರೆ.

ನಿರೂಪಕಿ, ನಟಿ ಅನುಪಮಾ ಗೌಡ
ಕಳೆದ ಕೆಲವು ದಿನಗಳಿಂದ ನಿರೂಪಕಿ, ನಟಿ ಅನುಪಮಾ ಗೌಡ ಅವರ ಮದುವೆ ಕುರಿತು ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಹುಟ್ಟುಹಬ್ಬದ ಹಿನ್ನೆಲೆ ಶೇರ್ ಮಾಡಿಕೊಂಡ ಫೋಟೋಗಳಿಗೆ ತರೇಹವಾರಿ ಶೀರ್ಷಿಕೆಗಳನ್ನು ನೀಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳಲಾಗುತ್ತಿತ್ತು. ಇದೀಗ ಈ ಎಲ್ಲಾ ಊಹಾಪೋಹಗಳಿಗೆ ನಟಿ ಅನುಪಮಾ ಗೌಡ ತೆರೆ ಎಳೆಯುವ ಕೆಲಸ ಮಾಡಿದ್ದಾರೆ.
ಶುಭಾಶಯಗಳ ಸಂದೇಶ
ಕಳೆದ ಎರಡು ದಿನಗಳಿಂದ ಕೆಲವರು ಮೆಸೇಜ್ ಮೂಲಕ ಮತ್ತು ಶೂಟಿಂಗ್ ಬಂದಾಗ್ಲೂ ವಿಶ್ ಮಾಡ್ತಿದ್ದಾರೆ. ನಮ್ಮ ಎಂಗೇಜ್ಮೆಂಟ್ ಅಂತ ನಮಗೂ ಯಾರು ಆಹ್ವಾನ ನೀಡಿರಲಿಲ್ಲ. ಹಾಗಾಗಿ ನಮಗೂ ಅಟೆಂಡ್ ಮಾಡೋದಕ್ಕೆ ಆಗಲಿಲ್ಲ ಎಂದು ಅನುಪಮಾ ಗೌಡ ವ್ಯಂಗ್ಯದ ಮೂಲಕ ನಿಶ್ಚಿತಾರ್ಥದ ಸುದ್ದಿಗೆ ತೆರೆ ಎಳೆದಿದ್ದಾರೆ.
ಮದುವೆ-ನಿಶ್ಚಿತಾರ್ಥ
ನಮ್ಮ ಬರ್ತ್ ಡೇಗೆ ಹಾಕಿದ ಫೋಟೋಗಳನ್ನು ಬಳಸಿ, ಮದುವೆ-ನಿಶ್ಚಿತಾರ್ಥ ಅಂತ ಶೇರ್ ಮಾಡ್ತಿದ್ದಾರೆ. ಅನುಶ್ರೀ ಮದುವೆ ಆಯ್ತು, ಇದೀಗ ಅನುಪಮಾ ಗೌಡ ನಿಶ್ಚಿತಾರ್ಥ ಅಂತ ಹೇಳ್ತಿದ್ದಾರೆ. ಇದು AI ಕಾಲ, ಉಂಗುರ ಬದಲಿಸುವ ರೀತಿಯಲ್ಲಾದ್ರೂ ಫೋಟೋ ಎಡಿಟ್ ಮಾಡಿ ಹಾಕಬಹುದಿತ್ತು. ಆದ್ರೆ ಹಾಗೇನೂ ಮಾಡದಿರೋದಕ್ಕೆ ಬೇಸರವಾಗ್ತಿದೆ ಎಂದು ಟ್ರೋಲಿಗರಿಗೆ ಚಾಟಿ ಬೀಸುವ ಕೆಲಸ ಮಾಡಿದ್ದಾರೆ.
ಎಂಗಜ್ಮೇಂಟ್ ಆಯ್ತು, ಮದುವೆ ಬೇಗ ಮಾಡಿಸಬೇಡಿ
ಎಂಗಜ್ಮೇಂಟ್ ಆಗಿ ಎರಡು ದಿನ ಮಾತ್ರ ಆಗಿದ್ದು, ಬೇಗ ಮದುವೆ ಮಾಡಿಸಬೇಡಿ. ಜನರಿಗೆ ಅನುಮಾನ ಬರುತ್ತೆ. ಈಗಾಗಲೇ ಬಂದಿರುವ ಲೈಕ್ಸ್ ಕಮೆಂಟ್‌ಗಳೆಲ್ಲಾ ವೇಸ್ಟ್ ಆಗುತ್ತೆ. ಸಾಧ್ಯವಾದ್ರೆ ಮದುವೆಗೆ ನನ್ನನ್ನು ಮತ್ತು ರಾಘವ್ ಅವರನ್ನು ಕರೆಯಿರಿ ಎಂದು ಮತ್ತೆ ಪರೋಕ್ಷವಾಗಿ ಅನುಪಮಾ ಗೌಡ ಟ್ರೋಲಿಗರ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: BBK 12: ಮನೆಗೆ ಬಂದಿರೋ ಅಕ್ಕನ ಮುಂದೆ ನಡೆಯಿತು ಸ್ವಯಂವರ: ರಘುನಲ್ಲಿ ಮಗು ಕಂಡ ಅಶ್ವಿನಿ ಗೌಡ
ಲೈಕ್ಸ್, ಕಮೆಂಟ್
ನಿಮ್ಮ ಪೇಜ್‌ಗೆ ಹೆಚ್ಚು ಲೈಕ್ಸ್, ಕಮೆಂಟ್‌ಗಾಗಿ ಬೇರೆಯವರ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡ್ತಿದ್ದೀರಿ. ನನ್ನ ಮದುವೆ ಬಗ್ಗೆ ಇಷ್ಟೊಂದು ಆಸಕ್ತಿ ತೋರಿಸೋದನ್ನು ನೋಡಿ ಖುಷಿಯಾಗುತ್ತಿದೆ. ದಯವಿಷ್ಟು ಮದುವೆಗೆ ನಮ್ಮನ್ನು ಕರೆಯಿರಿ ಧನ್ಯವಾದಗಳು ಎಂದು ಹೇಳಿ ಅನುಪಮಾ ಗೌಡ ತಮ್ಮ ಮಾತುಗಳನ್ನು ಮುಗಿಸಿದ್ದಾರೆ.
ಇದನ್ನೂ ಓದಿ: ಮೇಡಂ, ಒಂದು ಪ್ಯಾಕ್ ಗೆ ಕೇವಲ 20 ರು.ಮಾತ್ರ; ಊದಿನಕಡ್ಡಿ ವಾಸನೆಗೆ ಹಣ ಕಳೆದುಕೊಂಡ ಜನ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

