ಅನುಪಮಾ ಗೌಡ ಸೀರಿಯಲ್ ಮೂಲಕ ಎಂಟ್ರಿ ಕೊಟ್ಟು, ಸದ್ಯ ಕನ್ನಡ ಕಿರುತೆರೆಯಲ್ಲಿ ನಿರೂಪಕಿಯಾಗಿ ಮಿಂಚುತ್ತಿದ್ದಾರೆ.
ಕೊಡಗಿನ ಬೆಡಗಿ ಕೃಷಿ ಸಿನಿಮಾ ಅಕೀರಾ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟು, ನಂತರ ಏಳೆಂಟು ಸಿನಿಮಾದಲ್ಲಿ ನಟಿಸಿದ್ದಾರೆ.
ಕೃಷಿ ಮತ್ತು ಅನುಪಮಾ ಗೌಡ ಭೇಟಿಯಾಗಿದ್ದು, ಕನ್ನಡ ಬಿಗ್ ಬಾಸ್ ಸೀಸನ್ 5 ರಲ್ಲಿ. ಈ ಜೋಡಿ ಅಂದಿನಿಂದ ಇಂದಿನವರೆಗೂ ತಮ್ಮ ಸ್ನೇಹವನ್ನು ಉಳಿಸಿಕೊಂಡು ಬಂದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಇಬ್ಬರೂ ಕೂಡ ಆಕ್ಟಿವ್ ಆಗಿದ್ದು, ಜೊತೆಯಾಗಿ ಜಿಮ್, ಔಟಿಂಗ್, ಶಾಪಿಂಗ್ ಮಾಡುವ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ.
ಅನುಪಮಾ ಮತ್ತು ಕೃಷಿಯ ಮುದ್ದಾದ ಸ್ನೇಹ ನೋಡಿ, ಜನರು ಇವರಿಬ್ಬರ ಮೇಲೆ ಯಾರ ದೃಷ್ಟಿಯೂ ಬೀಳದಿರಲಿ, ಸ್ನೇಹ ಶಾಶ್ವತವಾಗಿರಲಿ ಎಂದು ಹಾರೈಸುತ್ತಾರೆ.
ಇದೀಗ ಅನುಪಮಾ ಮತ್ತು ಕೃಷಿ ತಮ್ಮ ಕೆಲಸ, ಶೂಟಿಂಗ್ ಗೆ ಬ್ರೇಕ್ ಕೊಟ್ಟು, ಶಿರಡಿ ಸಾಯಿ ಬಾಬನ ದರ್ಶನ ಪಡೆದು ಬಂದಿದ್ದಾರೆ.
ಕೃಷಿ ತಮ್ಮ ಇನ್;ಸ್ಟಾಗ್ರಾಂನಲ್ಲಿ ಶಿರಡಿ ಪರಿಸರದಲ್ಲಿ ತೆಗೆದಂತಹ ಹಲವು ಫೋಟೊಗಳನ್ನು ಶೇರ್ ಮಾಡಿದ್ದು, ಇಬ್ಬರು ಕೂಡ ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ಇಬ್ಬರ ಫೋಟೊ ನೋಡಿದ ಅಭಿಮಾನಿಗಳು ನಜರ್ ನಾ ಲಗೆ ಎಂದೂ, ಇವರನ್ನ ನೋಡಿದ್ರೆ ಇಬ್ಬರು ಹುಡುಗಿಯರ ಸ್ನೇಹ ಟಾಕ್ಸಿಕ್ ಆಗದೇಯೂ ಇರುತ್ತದೆ ಅನ್ನೋದಕ್ಕೆ ಉದಾಹರಣೆ ಎಂದಿದ್ದಾರೆ.
ಹಿಂದೊಮ್ಮೆ ಕೃಷಿ ಅನುಪಮಾ ಕುರಿತು ಮಾತನಾಡಿ, ಆಕೆ ನನ್ನ ಜೀವನದಲ್ಲಿ ಬಂದಿದ್ದಕ್ಕೆ ನಾನು ತುಂಬಾನೇ ಪುಣ್ಯ ಮಾಡಿದ್ದೀನಿ. ನನ್ನ ಜೀವನದಲ್ಲಿ ಆಕೆ ತುಂಬಾ ಸ್ಪೆಷಲ್ ಅಂದಿದ್ದರು.
ಇಡೀ ಪ್ರಪಂಚ ಒಂದು ಕಡೆ ನಿಂತರೂ, ಒಬ್ಬರನ್ನು ಆಯ್ಕೆ ಮಾಡಬೇಕು ಅಂದ್ರೆ ಆ ವ್ಯಕ್ತಿ ಅನು ಮಾತ್ರ. ಪ್ರಪಂಚದ ಯಾವುದೇ ಮೂಲೆಯಿಂದ ಆಕೆ ಕರೆದರೂ ನಾನು ಹೋಗಿಬಿಡುತ್ತೀನಿ ಎಂದಿದ್ದರು.
Photos: ಭಾವನಾ ರಾಮಣ್ಣಗೆ ಸೀಮಂತ ಸಂತಸ!
ನೆಗೆಟಿವ್ ಕಾಮೆಂಟ್’ಗಳಿಗೆ ಕ್ಯಾರೆ ಎನ್ನದೇ ಕಾಲುಂಗುರ ತೋರಿಸುತ್ತಾ ಪೋಸ್ ಕೊಟ್ಟ ವೈಷ್ಣವಿ ಗೌಡ
ಭರ್ಜರಿ ಬ್ಯಾಚುಲರ್ ಫಿನಾಲೆಯಲ್ಲಿ ಮಿಸ್ ಆಗಿದ್ದ ನಟಿ ವಿಜಯಲಕ್ಷ್ಮಿ ವಿಯೆಟ್ನಾಂನಲ್ಲಿ ಏನ್ ಮಾಡ್ತಿದ್ದಾರೆ?
ಅತ್ತ ರಾಮಾಚಾರಿ ಸಾಯೋ ಸ್ಥಿತಿಯಲ್ಲಿದ್ರೆ… ಇತ್ತ ಸಕಲೇಶಪುರದಲ್ಲಿ ಎಂಜಾಯ್ ಮಾಡ್ತಿದ್ದಾರೆ ಚಾರು