MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಪತ್ನಿ ಸುಹಾನಾ ಕನಸಿನಲ್ಲಿ ಮಾಡುವ ಕೆಲಸ ಹೇಳಿದ ಗಂಡ ನಿತಿನ್; ದಾಂಪತ್ಯದ ಬಗ್ಗೆ ಜೋಡಿಯ ಮಾತು

ಪತ್ನಿ ಸುಹಾನಾ ಕನಸಿನಲ್ಲಿ ಮಾಡುವ ಕೆಲಸ ಹೇಳಿದ ಗಂಡ ನಿತಿನ್; ದಾಂಪತ್ಯದ ಬಗ್ಗೆ ಜೋಡಿಯ ಮಾತು

ಗಾಯಕಿ ಸುಹಾನಾ ಸಯ್ಯದ್ ಮತ್ತು ರಂಗಭೂಮಿ ಕಲಾವಿದ ನಿತಿನ್ ತಮ್ಮ ಮದುವೆಯ ನಂತರ ಮೊದಲ ಬಾರಿಗೆ ಯೂಟ್ಯೂಬ್ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ತಮಾಷೆಯ ಸಂದರ್ಶನದ ಪ್ರೋಮೋ ವೈರಲ್ ಆಗಿದ್ದು, ಇದರಲ್ಲಿ ಅವರು ತಮ್ಮ ದಾಂಪತ್ಯ ಜೀವನ ಮತ್ತು ಮನೆಗೆಲಸದ ಬಗ್ಗೆ ಮಾತನಾಡಿದ್ದಾರೆ.

2 Min read
Author : Mahmad Rafik
Published : Apr 04 2026, 03:36 PM IST
Share this Photo Gallery
  • FB
  • TW
  • Linkdin
  • Whatsapp
15
ಸುಹಾನಾ ನಿತಿನ್ ಸಂದರ್ಶನ
Image Credit : Suhana Instagram

ಸುಹಾನಾ-ನಿತಿನ್ ಸಂದರ್ಶನ

ಗಾಯಕಿ ಸುಹಾನಾ ಸಯ್ಯದ್ ಮತ್ತು ರಂಗಭೂಮಿ ಕಲಾವಿದ ನಿತಿನ್ ಮದುವೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಧರ್ಮದ ಎಲ್ಲೆಗಳನ್ನು ಮೀರಿ ಇಬ್ಬರು ಕಲಾವಿದರು ಮಂತ್ರಮಾಂಗಲ್ಯ ಪರಿಕಲ್ಪನೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಇದೀಗ ಇಬ್ಬರು ಮೊದಲ ಬಾರಿಗೆ ಯಟ್ಯೂಬ್ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದಾರೆ. ಸಂದರ್ಶನದ ಪ್ರೋಮೋ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

25
ಕೀರ್ತಿ ಇಎನ್‌ಟಿ ಕ್ಲಿನಿಕ್‌ಗೆ ಪತಿ ಜೊತೆ ಬಂದ ಸುಹಾನಾ
Image Credit : Suhana Instagram

ಕೀರ್ತಿ ಇಎನ್‌ಟಿ ಕ್ಲಿನಿಕ್‌ಗೆ ಪತಿ ಜೊತೆ ಬಂದ ಸುಹಾನಾ

ಸುಹಾನಾ ಮತ್ತು ನಿತಿನ್ ಮೊದಲ ಬಾರಿ ಕೀರ್ತಿ ಅವರ keerthientclinic ಸಂದರ್ಶನ ನೀಡಿದ್ದಾರೆ. ನಿರೂಪಕರಾದ ಕೀರ್ತಿ ಎಲ್ಲವನ್ನು ತಮಾಷೆಯಾಗಿ ಪ್ರಶ್ನೆಗಳನ್ನು ಕೇಳುತ್ತಾ, ಆಗಮಿಸಿರುವ ಅತಿಥಿಗಳನ್ನು ನಗಿಸುತ್ತಾರೆ. ಈ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಕೀರ್ತಿ ಅವರ ಮಾಡುವ ಸಂದರ್ಶನಗಳು ಹೆಚ್ಚು ವೈರಲ್ ಆಗುತ್ತಿರುತ್ತವೆ. ಇತ್ತೀಚೆಗಷ್ಟೇ ಗಾಯಕಿಯರಾದ ಪ್ರಥ್ವಿ ಭಟ್ ಮತ್ತು ಐಶ್ವರ್ಯಾ ರಂಗರಾಜನ್ ಅವರನ್ನು ಸಂದರ್ಶನ ಮಾಡಿದ್ದರು. ಇದೀಗ ಕೀರ್ತಿ ಇಎನ್‌ಟಿ ಕ್ಲಿನಿಕ್‌ಗೆ ಪತಿ ನಿತಿನ್ ಜೊತೆ ಸುಹಾನಾ ಅಗಮಿಸಿದ್ದಾರೆ.

Related Articles

Related image1
ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್
Related image2
ಪಾಕಿಸ್ತಾನಕ್ಕೆ ಹೋಗು ಅಂದವರಿಗೆ ದಿಟ್ಟ ಉತ್ತರ ನೀಡಿದ್ದ ಸುಹಾನಾ ಸೈಯದ್ ಹಿಂದಿನ ಕಥೆ; ಹಳೆ ಪೋಸ್ಟ್ ವೈರಲ್
35
ತಮಾಷೆಯ ಸಂದರ್ಸನ
Image Credit : Suhana Instagram

ತಮಾಷೆಯ ಸಂದರ್ಸನ

ಪ್ರೋಮೋದಲ್ಲಿ ಆರಂಭದಲ್ಲಿಯೇ ನಿತಿನ್ ತಮ್ಮನ್ನು ರಂಗಭೂಮಿ ಕಲಾವಿದ ಮತ್ತು ಸುಹಾನಾ ಅವರ ಗಂಡ ಅಂತ ಪರಿಚಯ ಮಾಡಿಕೊಳ್ಳುತ್ತಾರೆ. ಕೀರ್ತಿ ಸಹ ಶಿವಾಜಿನಗರದ ಮುಸ್ಲಿಮರು ಮಾತನಾಡುವ ಶೈಲಿಯಲ್ಲಿಯೇ ಪ್ರಶ್ನೆಗಳನ್ನು ಕೇಳಿದ್ದಾರೆ. ಸುಹಾನಾ ಸಹ ಅದೇ ರೀತಿಯಲ್ಲಿಯೇ ಉತ್ತರ ನೀಡುವ ಮೂಲಕ ಸಂದರ್ಶನವನ್ನು ಮತ್ತಷ್ಟು ತಮಾಷೆಯಾಗಿ ತೆಗೆದುಕೊಂಡು ಹೋಗಿದ್ದಾರೆ.

45
ಎಲ್ಲಾ ಕೆಲಸ ನಾನೇ ಮಾಡುವೆ
Image Credit : Suhana Instagram

ಎಲ್ಲಾ ಕೆಲಸ ನಾನೇ ಮಾಡುವೆ

ಮನೆಯಲ್ಲಿ ಎಲ್ಲಾ ಕೆಲಸಗಳನ್ನು ನಾನೇ ಮಾಡುತ್ತೇನೆ ಎಂದು ನಿತಿನ್ ಹೇಳುತ್ತಾರೆ. ಪಾತ್ರೆ ತೊಳೆಯೋದು, ಕಸ ಗುಡಿಸೋದು, ನೆಲ ಒರೆಸೋದು, ಅಂಗಳಕ್ಕೆ ನೀರು ಹಾಕೋದು ಎಲ್ಲವನ್ನು ನಾನೇ ಮಾಡುತ್ತೇನೆ. ಪತ್ನಿ ಸುಹಾನಾಗೆ ಮಾಡೋಕೆ ಇನ್ನೇನು ಉಳಿದಿದೆ ಎಂದು ನಿತಿನ್ ಹೇಳುತ್ತಾರೆ. ಇದಕ್ಕೆ ಉತ್ತರಿಸುವ ಕೀರ್ತಿ, ಮದುವೆ ಮಾಡಿಕೊಂಡು ಹುಡುಗನನ್ನು ಕೆಲಸ ಮಾಡೋಕೆ ಹಾಕೊಂಡಿದ್ದೀಯಾ ಎಂದು ತಮಾಷೆಯಾಗಿ ಪ್ರಶ್ನಿಸುತ್ತಾರೆ. ಕೆಲ ದಿನಗಳ ಹಿಂದೆ ಪತಿ ನಿತಿನ್ ಮನೆಗೆಲಸದಲ್ಲಿ ಹೇಗೆ ಸಹಾಯ ಮಾಡ್ತಾರೆ ಎಂಬುದರ ವಿಡಿಯೋವನ್ನು ಸುಹಾನಾ ಶೇರ್ ಮಾಡಿಕೊಂಡಿದ್ದರು.

55
ಪ್ರೋಮೋ ವೈರಲ್
Image Credit : Suhana Instagram

ಪ್ರೋಮೋ ವೈರಲ್

ಇಲ್ಲಪ್ಪಾ.. ನಾನು ಮನೆಯಲ್ಲಿ ಅಡುಗೆ, ಪಾತ್ರೆ ತೊಳೆದು ಕಸವೆಲ್ಲವನ್ನು ನಾನೇ ಗುಡಿಸುವೆ ಅಂತಾ ಸುಹಾನಾ ಹೇಳ್ತಿದ್ರೆ, ಇದೆಲ್ಲವೂ ಕನಸಿನಲ್ಲಿ ಎಂದು ನಿತಿನ್ ಟಾಂಗ್ ಕೊಡುತ್ತಾರೆ. ಇದಕ್ಕೆ ಕೀರ್ತಿ, ಮದುವೆ ಮುಂಚೆ ಜಾತಕ ತೋರಿಸಿದ್ದೀರಾ ಎಂದು ಕೇಳಿದ್ರೆ ನಿತಿನ್ ಇನ್ಮುಂದೆ ತೋರಿಸಬೇಕಾಗಹುದು ಎಂದು ತಮಾಷೆ ಮಾಡಿದ್ದಾರೆ. ಇದೇ ಸಂದರ್ಶನದಲ್ಲಿ ಸುಹಾನಾ ಅವರು ಪ್ಯಾರ್ ಆಗೇ ಆಗ್ಬಿಟೈತೆ ಎಂಬ ಹಾಡು ಹೇಳಿದ್ದಾರೆ. ಸದ್ಯ ಪ್ರೋಮೋ ವೈರಲ್ ಆಗುತ್ತಿದ್ದು, ಇಬ್ಬರು ಎಲ್ಲವನ್ನೂ ಹಂಚಿಕೊಂಡು ಖುಷಿ ಖುಷಿ ಇಂದ ಪ್ಯಾರ್ ಗೆ ಗೀರ್ ಗೆ ಮಾಡಿ ಕೊಂಡು ಇರಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

 
 
 
 
View this post on Instagram
 
 
 
 
 
 
 
 
 
 
 

A post shared by @keerthientclinic

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಸ್ಯಾಂಡಲ್‌ವುಡ್
ಮನರಂಜನಾ ಸುದ್ದಿ
ಮದುವೆ

Latest Videos
Recommended Stories
Recommended image1
ದೀಪಾ ಸಾಲದಂತ ಈಗ ನಂದಿನಿ ಬೇರೆ! Serial ಡೈರೆಕ್ಟರ್ಸ್​ಗೆ ಪುರುಷರ ಮೇಲೆ ಕರುಣೆನೇ ಇಲ್ವಾ- ಭಾರಿ ಅಸಮಾಧಾನ
Recommended image2
ಸುನಿ-ಮಲ್ಲಿ ಮಧುಚಂದ್ರದಲ್ಲಿ ಮೃತ್ಯುಪಾಶ: ಜೈದೇವ್‌ ಸೀರಿಯಲ್ ನಿರ್ದೇಶಕರ ಸಂಬಂಧಿನಾ?
Recommended image3
ನನ್ನಂಥ ಗಂಡ ಬೇಕೆಂದ್ರೆ ಹೀಗೆ ಮಾಡಿ: ಫ್ಯಾನ್ಸ್​ಗೆ Amrthadhaare ಸಿಂಪಲ್​ ಸುನಿ ಬಿಗ್​ ಆಫರ್​
Related Stories
Recommended image1
ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್
Recommended image2
ಪಾಕಿಸ್ತಾನಕ್ಕೆ ಹೋಗು ಅಂದವರಿಗೆ ದಿಟ್ಟ ಉತ್ತರ ನೀಡಿದ್ದ ಸುಹಾನಾ ಸೈಯದ್ ಹಿಂದಿನ ಕಥೆ; ಹಳೆ ಪೋಸ್ಟ್ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved