MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಅದೃಷ್ಟದ ಹಲ್ಲಿಗೆ ಕತ್ತರಿ ಹಾಕಿ ಅಭಿಮಾನಿಗಳಿಗೆ ಶಾಕ್ ನೀಡಿದ ಗಿಣಿರಾಮ ನಟಿ

ಅದೃಷ್ಟದ ಹಲ್ಲಿಗೆ ಕತ್ತರಿ ಹಾಕಿ ಅಭಿಮಾನಿಗಳಿಗೆ ಶಾಕ್ ನೀಡಿದ ಗಿಣಿರಾಮ ನಟಿ

ಗಿಣಿರಾಮ ಸೀರಿಯಲ್‌ನಲ್ಲಿ ನಟಿಸುತ್ತಿದ್ದ ಮಹತಿ ಖ್ಯಾತಿಯ ನಯನಾ ನಾಗರಾಜ್ ಯಾರಿಗೆ ಗೊತ್ತಿಲ್ಲ, ಹೇಳಿ ಅವರೀಗ ತಮ್ಮ ಮುದ್ದಾದ ಹಲ್ಲುಗಳಿಗೆ ಕತ್ತರಿ ಹಾಕಿದ್ದು, ಈ ವಿಚಾರವನ್ನು ಸ್ವತಃ ಇನ್ಸ್ಟಾಗ್ರಾಮ್‌ನಲ್ಲಿ ಹೇಳಿಕೊಂಡಿದ್ದಾರೆ. ಆದರೆ ಅವರ ಅಭಿಮಾನಿಗಳು ಮಾತ್ರ ಬೇಸರ ವ್ಯಕ್ತಪಡಿಸಿದ್ದಾರೆ.

2 Min read
Author : Anusha Kb
| Updated : Dec 14 2023, 02:09 PM IST
Share this Photo Gallery
  • FB
  • TW
  • Linkdin
  • Whatsapp
111

ಗಿಣಿರಾಮ ಸೀರಿಯಲ್‌ನಲ್ಲಿ ನಟಿಸುತ್ತಿದ್ದ ಮಹತಿ ಖ್ಯಾತಿಯ ನಯನಾ ನಾಗರಾಜ್ ಯಾರಿಗೆ ಗೊತ್ತಿಲ್ಲ, ಹೇಳಿ ಅಪ್ಪನ ಪಾಲಿನ ಹೆಮ್ಮೆಯ ಮಗಳಾಗಿ ಅನ್ಯಾಯದ ರಾಜಕೀಯದ ವಿರುದ್ಧ ಪ್ರತಿಭಟಿಸುವ ಪಾತ್ರದಲ್ಲಿ ಮಹತಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. 

211

ಉತ್ತರ ಕರ್ನಾಟಕದ ಭಾಷೆಯ ಬಳಕೆಯ ಕಾರಣಕ್ಕೆ ಈ ಸೀರಿಯಲ್ ಸಖತ್ ಫೇಮಸ್ ಆಗಿತ್ತು. ಈ ಧಾರಾವಾಹಿಯಲ್ಲಿ ನಟಿಸಿದ್ದ ಮಹತಿ ಬಗ್ಗೆ ಎಲ್ಲರಿಗೂ ಗೊತ್ತು. ಮಹತಿ ಬಾಯಲ್ಲಿ ಬಾಯ್ತುಂಬ ಹಲ್ಲುಗಳಿದ್ದವು.

311

ಅವು ಮೊಲದ ಹಲ್ಲುಗಳಂತೆ ಕಂಡರೂ ಆ ಹಲ್ಲುಗಳಲ್ಲೂ ಬಹಳ ಮುದ್ದಾಗಿ ಕಾಣುತ್ತಿದ್ದರು ನಟಿ. ಆದರೆ ಈಗ ಆ ಹಲ್ಲುಗಳಿಗೆ ಕತ್ತರಿ ಹಾಕಿದ್ದಾರೆ ಮಹತಿ.

411

ಈ ಹಿಂದೆ ಸೀರಿಯಲ್ ಹೊರತಾಗಿ ಬೇರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ಮಹತಿ ಅವರು ತಮ್ಮ ಆ ಹಲ್ಲಿನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದರು. ನನ್ನ ಹಲ್ಲು ನನ್ನ ಅದೃಷ್ಟ ಅವಕಾಶ ಸಿಕ್ಕದಿದ್ದರೂ ಪರವಾಗಿಲ್ಲ ಹಲ್ಲು ಮಾತ್ರ ಹೀಗೆ ಇರಲಿ ಎಂದು ಹೇಳಿಕೊಂಡಿದ್ದರು. ಆದರೆ ಈಗ ಏನಾಯ್ತೋ ಏನೋ ಹಲ್ಲಿಗೆ ಕತ್ತರಿ ಹಾಕಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. 

511

ಸ್ವತಃ ಮಹತಿ ಅವರೇ ಇನ್ಸ್ಟಾಗ್ರಾಮ್‌ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ವೀಡಿಯೋ ಸಮೇತ ತಮ್ಮ ಹೊಸ ಲುಕ್ ಅನ್ನು ನಟಿ ಮಹತಿ ಅಲಿಯಾಸ್ ನಯನಾ ನಾಗರಾಜ್ ಹಂಚಿಕೊಂಡಿದ್ದು, ಈ ವೀಡಿಯೋ ನೋಡಿದ ಅಭಿಮಾನಿಗಳು ಮಾತ್ರ ನೀವು ಮೊದಲೇ ಚೆನ್ನಾಗಿದ್ದೀರಿ ಏಕೆ ಈ ರೀತಿ ಮಾಡಿದ್ದೀರಿ ಎಂದು ಕೇಳಿದ್ದಾರೆ. 

611

ಅದಕ್ಕೆ ಉತ್ತರಿಸಿ ನಯನಾ ನಾಗರಾಜ್ ನನಗೆ ಅದರಿಂದ ಸಮಸ್ಯೆಯಾಗುತ್ತಿತ್ತು ಬೇರೆ ದಾರಿ ಇರಲಿಲ್ಲ. ಇದೇ ಕಾರಣಕ್ಕೆ ನಾನು ಅವುಗಳಿಗೆ ಕತ್ತರಿ ಹಾಕಬೇಕಾಯ್ತು ಎಂದು ಹೇಳಿಕೊಂಡಿದ್ದಾರೆ.

711

ಈ ಶಸ್ತ್ರಚಿಕಿತ್ಸೆ ನೋವಿನಿಂದ ಕೂಡಿಲ್ಲ ಎಂದರೆ ಸುಳ್ಳಾಗುತ್ತದೆ. ಆದರೆ ಇಂಜೆಕ್ಷನ್ ಕೂಡ ತೆಗೆದುಕೊಳ್ಳಲು ಹೆದರುತ್ತಿದ್ದ ನನಗೆ ಈ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ಧೈರ್ಯ ತುಂಬಿದ್ದು ವೈದ್ಯ ದಂತ ತಜ್ಞ ಡಾ. ಆದರ್ಶ ಅವರು. ಅವರು ಆರಂಭದಿಂದಲೂ ಕೊನೆಯವರೆಗೂ ನನಗೆ ಧೈರ್ಯ ತುಂಬಿ ಎಲ್ಲ ವಿವರಗಳನ್ನು ಸರಿಯಾಗಿ ತಿಳಿಸಿ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಮಾಡಿದರು. 

811

ನನಗೆ ಹಲ್ಲಿನಲ್ಲಿ ಸ್ವಲ್ಪ ತೊಂದರೆ ಇತ್ತು. ಆದರ್ಶ ಅವರು ಎಲ್ಲವನ್ನು ನನಗೆ ಸರಿಯಾಗಿ ವಿವರಿಸಿದ್ದರು. ನಾನು ತುಂಬಾ ಭಯಗೊಂಡಿದ್ದೆ. ಆದರೆ ಡಾ ಆದರ್ಶ ಅವರು ಅವರ ಕೆಲಸ ಏನೆಂದು ತೋರಿಸಿದರು.  ಅಲ್ಲದೇ ನಾನು ಹೇಗೆ ಕಾಣುವೆ ಎಂಬುದನ್ನು ಅವರು ನನಗೆ ತೋರಿಸಿದ್ದರು. ಹೀಗಾಗಿ ನಾನು ಮುಂದೆ ಹೋದೆ.

911

ನಾನು ಈ ಕೆಲಸಕ್ಕೆ ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡಿದೆ. ನನಗೆ ಈ ರೀತಿಯ ನಗು ನೀಡಿದ್ದಕ್ಕೆ ವೈದ್ಯರಿಗೆ ತುಂಬ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ ಮಹತಿ ಅಲಿಯಾಸ್ ನಯನಾ. 

1011

ವೀಡಿಯೋ ನೋಡಿದ ವೀಕ್ಷಕರನೇಕರು ಆ ಹಲ್ಲುಗಳಿಂದಲೇ ಬಹಳ ಚೆನ್ನಾಗಿ ಕಾಣುತ್ತಿದ್ದೀರಿ ಅದನ್ನು ತೆಗೆಸಬಾರದಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಅನೇಕರು ಈ ಸಂಪೂರ್ಣ ಕಾರ್ಯಕ್ಕೆ ಎಷ್ಟು ವರ್ಷ ಹಿಡಿಯಿತು ಎಂದು ಕೇಳಿದ್ದು, ಒಟ್ಟು 4 ತಿಂಗಳು ಬೇಕಾಗುವುದು ಎಂದು ನಯನಾ ಉತ್ತರಿಸಿದ್ದಾರೆ

1111


ಅನೇಕರು ಬಹಳ ಕುತೂಹಲದಿಂದ ಇದನ್ನು ಯಾರು ಮಾಡಿದ್ದು, ನಮಗೂ ಅವರ ವಿಳಾಸ ನೀಡಿ ಎಂದೆಲ್ಲಾ ಕೇಳಿದ್ದಾರೆ. ಆದರೆ ಬಹುತೇಕರು ನಯನಾ ಹಲ್ಲಿಗೆ ಕತ್ತರಿ ಹಾಕಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದು, ದೊಡ್ಡ ತಪ್ಪು ಮಾಡಿದ್ದೀರಿ ಎಂದು ಹೇಳಿದ್ದಾರೆ. ಆದರ ಶಸ್ತ್ರಚಿಕಿತ್ಸೆಯ ನಂತರವೂ ನಯನಾ ಮಾತ್ರ ಮುದ್ದಾಗಿಯೇ ಕಾಣುತ್ತಿದ್ದು, ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ಬರುತ್ತಿದ್ದಂತೆ ಕರ್ಣ, ನಿತ್ಯಾ, ನಿಧಿಗೆ ಪಿಂಡ ಇಟ್ಟ ಅಭಿಜಿತ್; ಸೀರಿಯಲ್‌ನಿಂದ ಹೊರ ಬಂದಿದ್ಯಾಕೆ ಟಿಎಸ್ ನಾಗಾಭರಣ?
Recommended image2
'ಅವ್ರು ತಬ್ಬಿಕೊಳ್ಳುವಾಗ್ಲೇ ನಂಗೆ ಗೊತ್ತಾಗತ್ತೆ' ಎಂದು ವೇದಿಕೆ ಮೇಲೆ ಹೇಳಿ ತಬ್ಬಿಬ್ಬು ಮಾಡಿದ Rakshita Shetty
Recommended image3
ಕರ್ಣ ಸೀರಿಯಲ್‌ನಿಂದ ಹೊರ ಬಂದ ಟಿಎಸ್ ನಾಗಾಭರಣ; ಹೊಸ ವಿಲನ್ ಆಗಿ ಸ್ಟಾರ್ ನಟನ ಬಿಗ್ ಎಂಟ್ರಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved