ತಾಯಿಯಾಗುತ್ತಿರುವ ಸಂಭ್ರಮದಲ್ಲಿ ‘Lakshmi Nivasa’ ನಟಿ ಮಾನಸ ಮನೋಹರ್
Manasa Manohar: ‘ಲಕ್ಷ್ಮೀ ನಿವಾಸ’ ಸೇರಿ ಕನ್ನಡ ಕಿರುತೆರೆಯಲ್ಲಿ ನಟಿಸುತ್ತಿರುವ ನಟಿ ಚೊಚ್ಚಲ ತಾಯ್ತನದ ಸಂಭ್ರಮದಲ್ಲಿದ್ದಾರೆ. ಈ ವಿಷಯವನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಮುದ್ದಾದ ವಿಡೀಯೋ ಶೂಟ್ ಜೊತೆ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ನಟಿಗೆ ಶುಭ ಕೋರಿದ್ದಾರೆ.

ಮಾನಸ ಮನೋಹರ್
‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಸಿದ್ಧೇ ಗೌಡರ ಅತ್ತಿಗೆ ನೀಲೂ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಮಾನಸ ಮನೋಹರ್, ಹೊಸ ವರ್ಷದ ಸಂಭ್ರಮದಲ್ಲಿ ಗುಡ್ ನ್ಯೂಸ್ ಒಂದನ್ನು ಹಂಚಿಕೊಂಡಿದ್ದು, ತಾವು ತಾಯಿಯಾಗುತ್ತಿರುವ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ತಾಯಿಯಾಗುತ್ತಿರುವ ಸಂಭ್ರಮ
2024ರಲ್ಲಿ ಮಾನಸ ಮನೋಹರ್ ಬ್ಯುಸಿನೆಸ್ ಮ್ಯಾನ್ ಆಗಿರುವ ಪ್ರೀತಂ ಚಂದ್ರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದು ನಟಿಯ ಎರಡನೆ ಮದುವೆಯಾಗಿದೆ. ಇತ್ತೀಚೆಗಷ್ಟೇ ನಟಿ ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದರು. ಇದೀಗ ತಾಯಿಯಾಗುತ್ತಿರುವ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ಮೇ ತಿಂಗಳಲ್ಲಿ ಡೆಲಿವರಿ
ಸುಮಾರು ಒಂದು ವರ್ಷದ ಹಿಂದೆ, ಅದೇ ಸ್ಥಳದಲ್ಲಿ, ಅದೇ ಮರಗಳ ನಡುವೆ ನಾವಿಬ್ಬರೂ ಒಂದಾದೆವು ಮತ್ತು ಇಂದು ನಮಗೆ ನಮ್ಮ ಪ್ಲಸ್ ಒನ್ ಆಶೀರ್ವಾದ ದೊರೆಯುತ್ತಿದೆ. ನಮ್ಮ ಅತ್ಯಂತ 'ಅಮೂಲ್ಯ ಅಭಿವ್ಯಕ್ತಿ' ಈ ಮೇ ತಿಂಗಳಲ್ಲಿ ನಮ್ಮೊಂದಿಗೆ ಸೇರುತ್ತಿದೆ.
ಆರು ತಿಂಗಳಿಂದ ಇಟ್ಟುಕೊಂಡಿದ್ದ ಗುಟ್ಟು
ನಾವು 2026 ಅನ್ನು ನಮ್ಮ ಹೃದಯದಲ್ಲಿ ಅತ್ಯಂತ ಸಂತೋಷ ಮತ್ತು ಕೃತಜ್ಞತೆಯೊಂದಿಗೆ ಪ್ರಾರಂಭಿಸುತ್ತಿದ್ದೇವೆ! ಇಂದು ನಾನು ನಮ್ಮ ಪುಟ್ಟ BEE ಅನ್ನು ಪರಿಚಯಿಸುತ್ತಿದ್ದೇನೆ. ಕಳೆದ 6 ತಿಂಗಳುಗಳಿಂದ ನಾವು 1:1:11-11 ಕ್ಕೆ ಇಟ್ಟುಕೊಂಡಿದ್ದ ರಹಸ್ಯ ಇದಾಗಿದೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಜೀವನಕ್ಕೆ ಚಿಯರ್ ಮಾಡಿ ಎಂದು ಬರೆದುಕೊಂಡಿದ್ದಾರೆ.
ಶುಭಾಶಯ ತಿಳಿಸಿದ ಫ್ಯಾನ್ಸ್
ಮಾನಸ ಮನೋಹರ್ ದಂಪತಿಗಳಿಗೆ ಕಿರುತೆರೆಯ ನಟರು ಸೇರಿ ಅಭಿಮಾನಿಗಳು ಶುಭ ಕೋರಿದ್ದಾರೆ. ಗರ್ಬಿಣಿಯಾಗಿರೋದರಿಂದ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಪಾತ್ರವನ್ನು ಮುಗಿಸುತ್ತಾರೆಯೇ? ಹೊಸ ನಟಿಯ ಎಂಟ್ರಿಯಾಗಲಿದೆಯೇ ಕಾದು ನೋಡಬೇಕು.
ಮಾನಸ ಮನೋಹರ್ ನಟನೆಯ ಧಾರಾವಾಹಿಗಳು
ನಟಿ ಮಾನಸ ಮನೋಹರ್ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಮೀರಾ ಪಾತ್ರದ ಮೂಲಕ ಜನಪ್ರಿಯತೆ ಪಡೆದರು. ಇದೀಗ ಲಕ್ಷ್ಮೀ ನಿವಾಸದಲ್ಲಿ ವಿಲನ್ ನೀಲು ಆಗಿ ಹಾಗೂ ಶಾಂಭವಿ ಸೀರಿಯಲ್ ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

