- Home
- Entertainment
- Cine World
- Kaustubha Mani Baby Bump: ಮೊದಲ ಮಗುವಿನ ನಿರೀಕ್ಷೆಯಲ್ಲಿ ನನ್ನರಸಿ ರಾಧೆ ನಟಿ... ಬೇಬಿ ಬಂಪ್ ಫೋಟೋ ಶೂಟ್ ವೈರಲ್
Kaustubha Mani Baby Bump: ಮೊದಲ ಮಗುವಿನ ನಿರೀಕ್ಷೆಯಲ್ಲಿ ನನ್ನರಸಿ ರಾಧೆ ನಟಿ... ಬೇಬಿ ಬಂಪ್ ಫೋಟೋ ಶೂಟ್ ವೈರಲ್
ನನ್ನರಸಿ ರಾಧೆ ಸೀರಿಯಲ್ ನಲ್ಲಿ ನಟಿಸಿ ಜನಪ್ರಿಯತೆ ಪಡೆದ ನಟಿ ಕೌಸ್ತುಭ ಮಣಿ ತಮ್ಮ ಬೇಬಿ ಬಂಪ್ ಫೋಟೊ ಶೂಟ್ ಶೇರ್ ಮಾಡಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ನನ್ನರಸಿ ರಾಧೆ (Nannarasi Radhe) ಧಾರಾವಾಹಿಯಲ್ಲಿ ಇಂಚರಾ ಪಾತ್ರದ ಮೂಲಕ ವೀಕ್ಷಕರ ಮನಗೆದ್ದ ನಟಿ ಕೌಸ್ತುಭ ಮಣಿ ಇತ್ತೀಚೆಗಷ್ಟೇ ತಾವು ತಾಯಿಯಾಗುತ್ತಿರುವ ಸಂಭ್ರಮದ ವಿಷ್ಯವನ್ನು ಹಂಚಿಕೊಂಡಿದ್ದರು.
ಕೆಲವು ದಿನಗಳ ಹಿಂದೆ ಕೌಸ್ತುಭ ಮಣಿ (Kaustubha Mani) ಅವರ ಸೀಮಂತದ ಕೆಲವು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಆದರೆ ನಟಿ ಇಲ್ಲಿವರೆಗೆ ತಮ್ಮ ಪ್ರೆಗ್ನೆನ್ಸಿಯ ಯಾವುದೇ ಫೋಟೊಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿಕೊಂಡಿರಲಿಲ್ಲ.
ಇದೀಗ ಮೊದಲ ಬಾರಿಗೆ ನಟಿ ತಮ್ಮ ಬೇಬಿ ಬಂಪ್ ಫೋಟೊ ಶೂಟ್ ಮಾಡಿಸಿದ್ದು, ಅದನ್ನ ತಮ್ಮ ಇನ್’ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. Wrapped in love, we wait for the tiniest heartbeat to join us ಎಂದು ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕೌಸ್ತುಭ ಮಣಿ ಪ್ರೆಗ್ನೆನ್ಸಿ ಫೋಟೊ ಶೂಟ್ ವೈರಲ್ ಆಗುತ್ತಿದೆ. ಕೌಸ್ತುಭ ನಸು ನೀಲಿ ಬಣ್ಣದ ಬಾಡಿ ಕಾನ್ ಆಫ್ ಶೋಲ್ಡರ್ ಗೌನ್ ಧರಿಸಿದ್ದು ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಅವರ ಜೊತೆ ಪತಿ ಸಿದ್ಧಾಂತ್ ಸತೀಶ್ ಕೂಡ ಕಾಣಿಸಿಕೊಂಡಿದ್ದಾರೆ.
ಕೌಸ್ತುಭ ಮಣಿ ಅವರು ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಸಿದ್ಧಾಂತ್ (Siddanth Satish) ಜೊತೆ ಅದ್ಧೂರಿ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಬಳಿಕ ನಟಿ ನಟನೆಯಿಂದ ದೂರ ಉಳಿದಿದ್ದರು.
ನನ್ನರಸಿ ರಾಧೆ ಮೂಲಕ ನಟನೆಗೆ ಕಾಲಿಟ್ಟ ಕೌಸ್ತುಭ ಮಣಿ, ನಂತರ ತಮಿಳು ಸೀರಿಯಲ್ ಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಇದಾದ ಬಳಿಕ ಸ್ಟಾರ್ ಸುವರ್ಣದ ಗೌರಿ ಶಂಕರ ಧಾರಾವಾಹಿಯಲ್ಲೂ ನಟಿಸಿದ್ದರು, ಮದುವೆ ನಿಶ್ಚಯವಾದ ಹಿನ್ನೆಲೆಯಲ್ಲಿ ಸೀರಿಯಲ್ ನಿಂದ ಹೊರ ನಡೆದಿದ್ದರು.
ಬಿಗ್ ಬಾಸ್ ಮಿನಿ ಸೀಸನ್ ನಲ್ಲೂ ಕಾಣಿಸಿಕೊಂಡಿದ್ದ ಕೌಸ್ತುಭ ಸಿನಿಮಾಗಳಲ್ಲೂ ನಟಿಸಿದ್ದಾರೆ. ಇದೀಗ ಅರ್ಜುನ್ ಜನ್ಯ (Arjun Janya) ನಿರ್ದೇಶನದ 45 ಸಿನಿಮಾದಲ್ಲಿ ಶಿವಣ್ಣ, ಉಪೇಂದ್ರ, ರಾಜ್ ಬಿ ಶೆಟ್ಟಿ ಜೊತೆ ಕೂಡ ಕೌಸ್ತುಭ ಕೂಡ ನಟಿಸಿದ್ದಾರೆ. ಈ ಸಿನಿಮಾ ಇದೇ ಆಗಸ್ಟ್ ನಲ್ಲಿ ತೆರೆ ಕಾಣಲಿದೆ.