MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಅನುಶ್ರೀ-ಪುನೀತ್‌ ಮೊದಲ ಭೇಟಿ ಆಗಿದ್ದೆಲ್ಲಿ? ಅಪ್ಪು ನೆನೆದು ಭಾವುಕರಾದ ನಿರೂಪಕಿ

ಅನುಶ್ರೀ-ಪುನೀತ್‌ ಮೊದಲ ಭೇಟಿ ಆಗಿದ್ದೆಲ್ಲಿ? ಅಪ್ಪು ನೆನೆದು ಭಾವುಕರಾದ ನಿರೂಪಕಿ

ಕರಾವಳಿ ಬೆಡಗಿ ಪ್ರಸಿದ್ಧ ನಿರೂಪಕಿ ಅನುಶ್ರೀ ಅವರು ಇದೇ ಮೊದಲ ಬಾರಿಗೆ ತುಳುವಿನ ಪಾಡ್‌ ಕಾಸ್ಟ್ ಚಿಲ್ಲಿಂಗ್ ವಿಥ್ ಚಿಲಿಂಬಿ ಕಾರ್ಯಕ್ರಮದಲ್ಲಿ ಮಾತನಾಡಿದ್ದು, ಪುನೀತ್ ರಾಜ್ ಕುಮಾರ್‌ ಅವರೊಂದಿಗಿನ ಒಡನಾಟ, ಅವರನ್ನು ಮೊದಲು ಭೇಟಿ ಮಾಡಿದ್ದೆಲ್ಲಿ ಎಂಬ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ದಿ ಪವರ್ ಹೌಸ್‌ ವೈನ್ಸ್ ಯೂಟ್ಯೂಬ್‌ ನಲ್ಲಿ ಸಂದರ್ಶನ ಲಭ್ಯವಿದೆ.

4 Min read
Gowthami K
Published : May 17 2024, 05:41 PM IST| Updated : May 17 2024, 05:54 PM IST
Share this Photo Gallery
  • FB
  • TW
  • Linkdin
  • Whatsapp
110

ಪುನೀತ್ ರಾಜ್ ಕುಮಾರ್‌ ಬಗ್ಗೆ ಮಾತನಾಡುತ್ತಾ ಅನುಶ್ರೀ ಭಾವುಕಾದರು. ಅವರು ತಮ್ಮ ಮೊಬೈಲ್‌ ಹೋಂ ಸ್ಕ್ರೀನ್‌ ನಲ್ಲಿ ಅಪ್ಪು ಫೋಟೋವನ್ನು ಹಾಕಿಕೊಂಡಿದ್ದು, ಬೆಳಗ್ಗೆ ಎದ್ದ ತಕ್ಷಣ ಅದೇ ಫೋಟೋವನ್ನು ನೋಡಿ ದಿನ ಆರಂಭಿಸುತ್ತೇನೆ ಎಂದಿದ್ದಾರೆ. ನನ್ನ ಜೀವನದಲ್ಲಿ ಅವರೊಬ್ಬ ಅಗತ್ಯವಾದ ವ್ಯಕ್ತಿ. ನಾನು ಮೊದಲಿನಿಂದಲೂ ಅವರ ಫ್ಯಾನ್. ನಾನು ಡಾನ್ಸರ್‌ ಆಗಿರುವುದರಿಂದ ಅವರ ಡ್ಯಾನ್ಸ್ ನನಗೆ ತುಂಬಾ ಇಷ್ಟ. ಕನ್ನಡದಲ್ಲಿ ನಮ್ಮ ಜನರೇಶನ್‌ನಲ್ಲಿ ಅಪ್ಪು ಸರ್‌ ಡಾನ್ಸ್ ಮಾಡಿದ ರೀತಿ ಯಾರೂ ಮಾಡಿರಲ್ಲ. ಅದಕ್ಕಿಂತ ಮೊದಲು ಶಶಿಕುಮಾರ್, ವಿನೋದ್‌ ರಾಜ್ ಸರ್ ತುಂಬಾ ಜನ ಸೂಪರ್‌ ಡಾನ್ಸ್ ಮಾಡುತ್ತಿದ್ದರು. 

210

ಆದರೆ ನಮಗೆ ಫಿಲ್ಮ್ ನೋಡಲು, ನಾವು ಅರ್ಥ ಮಾಡಿಕೊಳ್ಳಲು ಆರಂಭಿಸಿದ ದಿನದಿಂದ ಅದು ಜಸ್ಟ್ ಅಪ್ಪು. ತಾಲಿಬಾನ್‌ ಅಲ್ಲಾ ಅಲ್ಲಾ ನೋಡಿದಾಗ ನಾನು ಅಂದುಕೊಳ್ಳುತ್ತಿದ್ದೆ. ಎಂತಾ ಪಲ್ಟಿ ಹಾಕುದು ಮಾರೆ ಇವರು ಅಂತ. ನಮಗೆ ಅದು  ದೊಡ್ಡ ವಿಷ್ಯವಾಗಿತ್ತು. ನಾನು ಇಂಡಸ್ಟ್ರಿಗೆ ಹೋಗುವಲ್ಲಿಯವರೆಗೆ ಅವರೊಬ್ಬ ಡಾನ್ಸರ್, ನಟ, ರಾಜ್ ಕುಮಾರ್ ಪುತ್ರ ಎಂದಷ್ಟೇ ಅಂದುಕೊಳ್ಳುತ್ತಿದ್ದೆ. ನಾನು ಯಾವಾಗ ಅವರನ್ನು ಭೇಟಿ ಆದೆ ಅಲ್ಲಿಂದ ಅವರ ವ್ಯಕ್ತಿತ್ವಕ್ಕೆ ಫ್ಯಾನ್‌ ಆದೆ. ನೀವು ಪ್ರಪಂಚದಲ್ಲಿ ಯಾರದ್ದೇ ಫ್ಯಾನ್‌ ಆಗಿರಿ. ಆದರೆ ಅವರು ಸಿಕ್ಕಿದ ಮೇಲೆ ಖಂಡಿತವಾಗಿಯೂ ನೀವು ಅಪ್ಪು ಫ್ಯಾನ್‌ ಆಗ್ತಿರಿ. ಅವರದ್ದು ಅಂತಹ ವ್ಯಕ್ತಿತ್ವ.

Anchor Anushree ಉತ್ತರ ಕರ್ನಾಟಕ ಜನರ ನಿಷ್ಕಲ್ಮಶ ಪ್ರೀತಿಗೆ ಆ್ಯಂಕರ್ ಅನುಶ್ರೀ ಫಿದಾ

310

ನಾನು ಒಂದು ಬಹು ದೊಡ್ಡ ಅವಾರ್ಡ್ ಕಾರ್ಯಕ್ರಮಕ್ಕೆ ಹೋಗಿದ್ದೆ. ಅದು ಗೊತ್ತಿಲ್ಲದ ಜಾಗ. ನನಗೆ ಅಲ್ಲಿ ಯಾರೂ ಕೂಡ ಪರಿಚಯ ಇಲ್ಲ.  ಅಲ್ಲಿ ಎಲ್ಲಾ ದೊಡ್ಡ ದೊಡ್ಡವರೇ ಇದ್ದರು. ನನಗೆ ಅವರ ಪರಿಚಯ ಇದ್ದರೂ ಅವರಿಗೆ ನನ್ನ ಪರಿಚಯ ಇಲ್ಲ. ಅವರೆಲ್ಲ ಜಾಲಿಯಾಗಿದ್ದರು. ಅವರು ಮಾತನಾಡುವ ಗೋಜಿಗೂ ಹೋಗುತ್ತಿರಲಿಲ್ಲ. ನನಗೆ ಆಗ ತುಂಬಾ ದುಃಖವಾಯ್ತು.  ನಾನು ಅಲ್ಲಿಂದ ಹೊರಗಡೆ ಬರಲು ಡೋರ್‌ ಓಪನ್‌ ಮಾಡಿದ್ರೆ ಅಪ್ಪು ಸರ್‌ ಊಟ ಮಾಡುವುದು ಕಂಡಿತು. ಹೇ... ನಾನು ನಿಮ್ಮನ್ನೆಲ್ಲೋ ನೋಡಿದ್ದೇನೆ ಎಂದರು. ಸರ್‌ ಅನುಶ್ರೀ ಅಂದೆ. ಹೇ ನಮ್ಮ ಕನ್ನಡ ಹುಡುಗಿ. ಯಾಕೆ ಏನಾಯ್ತು? ನೀವು ತುಂಬಾ ಡಲ್‌ ಇದ್ದೀರಲ್ವಾ?  ಏನಾಯ್ತು? ಅಂದ್ರು. ಇಲ್ಲ ಸರ್ ನನಗೆ ಇಲ್ಲಿ ಯಾರೂ ಗೊತ್ತಿಲ್ಲ. ಎಲ್ಲಾರೂ ಸುಮ್ಮನೆ  ಅವರಷ್ಟಕ್ಕೆ ಇದ್ದಾರೆ. ನನಗೆ ಏನು ಮಾಡಬೇಕೆಂದು ಗೊತ್ತಾಗ್ತಿಲ್ಲ ಎಂದೆ.

410

ಕೂಡಲೇ ಅಪ್ಪು 2 ನಿಮಿಷ  ಬಂದೆ ಅಂತ ಕೈ ತೊಳೆದು ಬಂದು. ಕೆಳಗೆ ರೆಸ್ಟೋರೆಂಟ್‌ಗೆ ಕರೆದುಕೊಂಡು ಹೋದರು. ನಿನಗೆ ಏನು ಬೇಕೋ ಅದನ್ನು ತೆಗೆದುಕೋ ಎಂದು ನನಗೆ ಊಟ ಕೊಡಿಸಿ ಅವರು ಕೂಡ ಜೊತೆಗೆ ಕೂತು ಊಟ ಮಾಡಿದರು.  ಅಪ್ಪು ಸರ್‌, ವಿನಯ್‌ ರಾಜ್‌ ಕುಮಾರ್ ಮತ್ತು ನಾನು  ಮೂವರು ಇದ್ದೆವು. ನಾನು ಸರ್... ಎಂದೆ. ಆರಾಮವಾಗಿ ಊಟ ಮಾಡಿ,  ಏನು? ಯಾವ ಊರು? ಹೋ ಮಂಗಳೂರು ಅಂತೆಲ್ಲ ಚೆನ್ನಾಗಿ ಮಾತನಾಡಿಸಿದರು. ಊಟ ಮಾಡಿ 40 ನಿಮಿಷದ ನಂತರ, ಕಾರು ಬಳಿ ಬಂದು.  ಅವರೊಂದಿಗಿದ್ದ ಪ್ರೆಂಡ್‌ ಅನ್ನು ಜೊತೆಗೆ ಕಳುಹಿಸಿ ಹೊಟೇಲ್‌  ಡ್ರಾಪ್‌ ಆದ ಬಳಿಕ ಕಾಲ್ ಮಾಡಿ ತಿಳಿಸಿ ಎಂದು ಡ್ರೈವರ್ ಬಳಿ ಹೇಳಿದರು. ಅಪ್ಪು ಅಂದ್ರೆ ಇದು.

ಕೇವಲ 1 ರೂ ಕಡಿಮೆಯಾಗಿದ್ದಕ್ಕೆ ಕರಿಮಣಿ ಅಡವಿಟ್ಟು ಸ್ಕೂಲ್‌ ಫೀಜ್‌ ಕಟ್ಟಿದ್ದ ಅನುಶ್ರೀ ಅಮ್ಮ

510

ಅಪ್ಪು ಅವರೊಬ್ಬ ಪವರ್ ಸ್ಟಾರ್‌. ನಾನು ಒಬ್ಬ ಕಾಂಜಿ ಪೀಂಜಿ (ಅತೀ ಸಾಮಾನ್ಯ). ಅಲ್ಲಿಂದ ಮೇಲೆ ಅವರು ನನ್ನ ಜೀವನದ ಸೂಪರ್‌ ಹಿರೋ.  ಕೇವಲ ಪರದೆ ಮೇಲೆ ಮಾತ್ರವ ಹೀರೋ ಆಗಲಿಲ್ಲ. ನಿಜ ಜೀವನದಲ್ಲೋ ಹೀರೋ ಅಂತ ಆ ದಿನ ತೋರಿಸಿಕೊಟ್ಟರು. ಅಲ್ಲಿಂದ ಮೇಲೆ ಯಾವಾಗಲೇ ಅವರ ಎದುರು ನಾನು ಹೋಗಿ ನಿಂತರೂ ಮುಖವೆಲ್ಲ ಖುಷಿಗೆ ಕೆಂಪಾಗುತ್ತಿತ್ತು. ಅವರು ಯಾವಾಗಲೂ ನನಗೆ ಹೇಳುತ್ತಿದ್ದರೂ, ಇದೆಲ್ಲ ಯಾಕೆ ಅನುಶ್ರೀ ಅಂತ. ಅಂತಹ ಒಬ್ಬ ಮನುಷ್ಯ ನನ್ನ ಕಷ್ಟದ ಸಮಯದಲ್ಲೂ ಒಳ್ಳೆದಾಗ್ಲಿ ಅಂತ ವಿಶ್ ಮಾಡಿದ ಕೆಲವೇ ಕೆಲವು ಜನರಲ್ಲಿ ಅಪ್ಪು ಸರ್ ನಂಬರ್‌ 1. 

610

ನಾನು ನನ್ನ ಮೊಬೈಲ್‌ ಅನ್ನು ಒಂದೆರಡು ಬಾರಿ ಬದಲಾಯಿಸಿರಬಹುದು. ಯಾವುದೇ ಟ್ರಾನ್ಸ್‌ಫರ್ ಮಾಡದಿದ್ದರೂ ಅಪ್ಪು ಸರ್ ಚಾಟ್‌ ಮಿಸ್‌ ಮಾಡುವುದಿಲ್ಲ. ಅವರ ಮೆಸೇಜ್‌ ಇಲ್ಲದೆ ನನಗಿರುವುದು ಕಷ್ಟ. ಅವರು ಯಾವುದೇ ಎಪಿಸೋಡ್‌ ನೋಡಿದರೂ, ಅವರ ಬಗ್ಗೆ ಏನೇ ಹೇಳಿದರು. ಅವರು ತಕ್ಷಣ ಮೆಸೇಜ್ ಮಾಡುತ್ತಿದ್ದರು. ನಿನ್ನಂತ ಫ್ಯಾನ್‌ ಇರುವುದು ನನಗೆ ಆಶೀರ್ವಾದ ಇದ್ದಂತೆ ಎಂದೆಲ್ಲ ಹೇಳುತ್ತಿದ್ದರು. ಇದನ್ನೆಲ್ಲ ಯಾರು ಹೇಳ್ತಾರೆ. ನನಗನಿಸುವುದು ಅವರು ಯಾವಾಗಲೂ ನಮ್ಮೊಂದಿಗೆ ಇದ್ದಾರೆ.  ದೈಹಿಕವಾಗಿ ಅವರಿಲ್ಲ. ಅದನ್ನು ನಾವು ಸಮಾಧಾನ ಮಾಡಿಕೊಳ್ಳಬೇಕು ಎಂದು ಅನುಶ್ರೀ ಭಾವುಕರಾದರು.

710

ನಾನು ಗೋವಾದಲ್ಲಿ ಶೂಟಿಂಗ್ ನಲ್ಲಿದ್ದೆ. ಬೆಳಗ್ಗೆ ನನಗೆ ಕಾಲ್ ಬಂತು ಅವರಿಗೆ ಹಾರ್ಟ್ ಅಟ್ಯಾಕ್‌ ಆಗಿದೆ ಅಂತ. ನಾನು ಆಗ ರಿಯಾಕ್ಟ್ ಮಾಡಿಲ್ಲ. ಯಾಕೆಂದರೆ ಈಗಿನ ದಿನಗಳಲ್ಲಿ ಹಾರ್ಟ್ ಅಟ್ಯಾಕ್‌ ಕಾಮನ್‌. ಅಪ್ಪು ಸರ್‌ ಗೆ ಏನು ಆಗುತ್ತೆ? ಅವರಿಗೆ ಏನೂ ಆಗುವುದಿಲ್ಲ. ಅವರು ಚೆನ್ನಾಗಿರುತ್ತಾರೆ ಅಂದುಕೊಂಡೆ. ಅರ್ಧ ಗಂಟೆ ಆದ ಬಳಿಕ ಮತ್ತೆ ಕಾಲ್‌ ಮಾಡಿ ಅವರಿಲ್ಲ ಅಂದರು. ನಾನು ಏನೂ ರಿಯಾಕ್ಟ್ ಮಾಡಿಲ್ಲ. ಅಳು ಕೂಡ ಬರಲಿಲ್ಲ. ಶೂಟಿಂಗ್ ನಿಲ್ಲಿಸಿ  ತಕ್ಷಣ ಏರ್ಪೂರ್ಟ್ ಹೋದೆ. ಅಲ್ಲಿ ಡೈರೆಕ್ಟರ್ ಅಥವಾ ಸೆಟ್‌ ಗೆ ನಾನು ಏನೂ ಹೇಳಲಿಲ್ಲ.

ಬೆಂಗಳೂರಿನಲ್ಲಿ ಮಧ್ಯರಾತ್ರಿ ಪಿಜಿ ಓನರ್‌ ಹೊರ ಹಾಕಿದ್ರು, ಗೆಳೆಯನ ಸಾಲ ಇನ್ನೂ ತೀರಿಸಿಲ್ಲ: ಅನುಶ್ರೀ

810

ನಾನು ವಿಮಾನದಲ್ಲಿ ಬರುವಾಗಲೂ, ಸದಾಶಿವ ನಗರಕ್ಕೆ ಕ್ಯಾಬ್‌ ನಲ್ಲಿ ಬರುವಾಗಲೂ, ಅಷ್ಟು ಜನ ಪೊಲೀಸರ ಮಧ್ಯೆ ಬರುವಾಗಲೂ ನನಗೆ ನಡುಕ ಆಗಲಿಲ್ಲ. 4.10 ಸಂಜೆ  ಮನೆಯೊಳಗೆ ಹೋಗ್ತೇನೆ. ಆ ಕಬ್ಬಿಣದಂತಹ ಮೈಕ್ಟಟಿನ ವ್ಯಕ್ತಿ. ಅಂತಹ ವ್ಯಕ್ತಿಯನ್ನು ಬಾಕ್ಸ್ ನಲ್ಲಿ ಇಡಲಾಗಿತ್ತು. ಜಸ್ಟ್‌ 10 ಸೆಕೆಂಡ್ಸ್‌ ನೋಡಿದೆ. ಆಮೇಲೆ ನಾನೂ ನೋಡಲೇ ಇಲ್ಲ. ಟಿವಿ ಹಾಕಲಿಲ್ಲ. ನನಗೆ ಅವರನ್ನು ಆ ಥರ ಬಾಕ್ಸ್‌ ನಲ್ಲಿ ನೋಡಲು ಇಷ್ಟವಿರಲಿಲ್ಲ.

910

 ಅಪ್ಪು ಹೇಗಂದ್ರೆ ಅವರ ಮನೆಗೆ ಹೋದ್ರೆ ಗೇಟ್‌ ವರೆಗೆ ಬಂದು ಬರಮಾಡಿಕೊಳ್ತಾರೆ. ಮರಳಿ ಹೊರಡುವಾಗಲೂ ಗೇಟ್‌ ಬಳಿ ಬಂದು ಕಳುಹಿಸಿ ಕೊಡ್ತಾರೆ. ನನ್ನ ಜೀವನದ ಡಾರ್ಕೆಸ್ಟ್ ಕ್ಷಣ ಅವರನ್ನು ಬಾಕ್ಸ್ ನಲ್ಲಿ ನೋಡಿದ್ದು. ಅವರೊಬ್ಬರೇ ಪವರ್‌ ಸ್ಟಾರ್‌, ಚಿನ್ನದಂತ ಹೃದಯ ಹೊಂದಿರುವ ವ್ಯಕ್ತಿ. ಅವರ ಜೊತೆಗೆ ಕಳೆದಿರುವ ಹಂಚಿಕೊಂಡಿರುವ ತೀರಾ ಪರ್ಸನಲ್‌  ನೆನಪುಗಳಿವೆ. ಅದನ್ನೆಲ್ಲ ಹೇಳಿಕೊಳ್ಳುವುದಿಲ್ಲ. ಯಾಕೆಂದರೆ ಅದು ನನ್ನ ಜೀವನದ ದುಬಾರಿ, ಮರೆಯಲಾರದ ನೆನಪುಗಳು. ಹೀಗಾಗಿ ಹಂಚಿಕೊಳ್ಳುವುದಿಲ್ಲ. ಅದು ನನಗಾಗಿ ನಾನಿಟ್ಟುಕೊಳ್ಳಬೇಕು ಎಂದಿದ್ದಾರೆ. 

1010

ಇವತ್ತು ಅಶ್ವಿನಿ ಮೇಡಂ ಇದ್ದಾರೆ.  ಎಲ್ಲಾ ಅಪ್ಪು ಅಭಿಮಾನಿಗಳಿಗೆ ಅವರು  ಧೈರ್ಯ. ಕೆಲವೊಮ್ಮೆ ಅವರು ನಗಾಡಿದಾಗ ನನಗೆ ಅಪ್ಪು ಸರ್ ನಕ್ಕಂತೆ ಫೀಲ್ ಆಗುತ್ತದೆ. ಅಪ್ಪು ಜತೆಗಿನ ಒಡನಾಟದಂತೆಯೇ ಅಶ್ವಿನಿ ಮೇಡಂ ಜೊತೆಗೂ ನನ್ನ ಒಡನಾಟ ಇದೆ. ನಮ್ಮ ಬ್ಯಾಡ್‌ ಲಕ್‌, ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ಆದರೆ ನಾವೆಷ್ಟು ಲಕ್ಕಿ ಅಂದ್ರೆ ಕರ್ನಾಟಕದ ಯಾವುದೇ ಮೂಲೆಗೂ ಹೋದ್ರು, ಒಂದು ಟೀ ಅಂಗಡಿಯಲ್ಲಿ, ದೇವಸ್ಥಾನದಲ್ಲಿ ಅವರ ಫೋಟೋ ಇದ್ದೇ ಇದೆ. ಅವರನ್ನು ದೇವರ ಸ್ಥಾನದಲ್ಲಿ ಇಟ್ಟಿದ್ದಾರೆ. ಅಂತಹ ದೇವರನ್ನು ಟಚ್‌ ಮಾಡಿದೇ ಎಂಬುದೇ ನನಗೆ ಖುಷಿ ಜೊತೆಗೆ ಲಕ್ಕಿ ಅಂದುಕೊಳ್ಳುತ್ತೇನೆ ಎಂದಿದ್ದಾರೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಆಂಕರ್ ಅನುಶ್ರೀ
ಪುನೀತ್ ರಾಜ್‌ಕುಮಾರ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved