ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ತೇಜಸ್ವಿನಿ ಪ್ರಕಾಶ್!
ಕನ್ನಡ ಕಿರುತೆರೆ ಮತ್ತು ಬೆಳ್ಳಿ ತೆರೆಯಲ್ಲಿ ಮಿಂಚುತ್ತಿರುವ ನಟಿ ತೇಜಸ್ವಿನಿ ಪ್ರಕಾಶ್ ಮತ್ತು ಫಣಿ ವರ್ಮ ನದೀಮ್‌ಪಳ್ಳಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸ್ಯಾಂಡಲ್‌ವುಡ್ ಬಬ್ಲಿ ಗರ್ಲ್ ಕಿರುತೆರೆಯ ವಿಲನ್ ತೇಜಸ್ವಿನಿ ಪ್ರಕಾಶ್ ಮತ್ತು ಫಣಿ ವರ್ಮ ನದೀಮ್‌ಪಳ್ಳಿ ಮಾರ್ಚ್ 20ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮದುವೆ ವಿಡಿಯೋ ಮತ್ತು ಫೋಟೋಗಳನ್ನು ನಟಿ ಕಾರುಣ್ಯ ರಾಮ್ ಮತ್ತು ತೇಜಸ್ವಿನಿ ಪ್ರಕಾಶ್ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಕೆಂಪು ಮತ್ತು ಗೋಲ್ಡ್ ಬಣ್ಣದ ರೇಶ್ಮೆ ಸೀರೆಯಲ್ಲಿ ತೇಜಸ್ವಿನಿ ಮಿಂಚುತ್ತಿದ್ದರೆ ಫನಿ ವರ್ಮಾ ಕ್ರೀಮ್ ಬಣ್ಣದ ರೇಶ್ಮೆ ಶರ್ಟ್- ಪಂಚೆಯಲ್ಲಿ ಕಾಣಿಸಿಕೊಂಡಿದ್ದಾರೆ.
ನೀಲಿ ಮತ್ತು ಕೆಂಪು ಬಣ್ಣದ ಸೀರೆ ಧರಿಸಿ ಚಪ್ಪರದ ಕೆಳಗೆ ನಡೆಯುತ್ತಿರುವ ಶಾಸ್ತ್ರದ ವಿಡಿಯೋ ಹಂಚಿಕೊಂಡು 'ಶ್ರೀವಲ್ಲಿ blush ಮಾಡ್ತಿದ್ದಾಳೆ' ಎಂದು ತೇಜು ಬರೆದುಕೊಂಡಿದ್ದಾರೆ.
ತುಂಬಾನೇ ಮಾಡ್ರನ್ ಆಗಿರುವ ಬಿಳಿ ಬಣ್ಣದ ಸೀರಿಯನ್ನು ಧರಿಸಿ ಅರಿಶಿಣ ಶಸ್ತ್ರ ಮಾಡಲಾಗಿದೆ. ಶಾಸ್ತ್ರದ ವಿಡಿಯೋ ಮತ್ತು ಫೋಟೋವನ್ನು ಕಾರುಣ್ಯ ರಾಮ್ ಹಂಚಿಕೊಂಡಿದ್ದಾರೆ.
ತೇಜಸ್ವಿನಿ ಮದುವೆಯಲ್ಲಿ ಕಿರುತೆರೆ ಸ್ನೇಹಿತರು ಮತ್ತು ನಟ ಪ್ರೇಮ್ ನೆನಪಿರಲಿ, ಸಿಹಿ ಕಹಿ ಚಂದ್ರು ಮತ್ತು ನಿರ್ದೇಶಕ ತರುಣ್ ಸುಧೀರ್ ಭಾಗಿಯಾಗಿದ್ದರು.
ಬ್ಯಾಚಿಲ್ಲೋರೆಟ್ ಪಾರ್ಟಿ ಕೂಡ ಮಾಡಲಾಗಿದ್ದು, ಕೆಂಪು ಬಣ್ಣದ ಸಿಂಗಲ್ ಪೀಸ್ ಧರಿಸಿ ತೇಜಸ್ವಿನಿ ಮಿಂಚಿದ್ದಾರೆ. 'ಜೀವನದ ಹೊದ ಅಧ್ಯಾಯ ಶುರು' ಎಂದು ಫೋಸ್ಟ್ ಮಾಡಿದ್ದಾರೆ.