ತಾಯಿಯಾಗುತ್ತಿದ್ದಾರೆ 'ಜೊತೆ ಜೊತೆಯಲಿ' ನಟಿ ರಶ್ಮಿ ಜಯರಾಜ್; ಅದ್ಧೂರಿ ಸೀಮಂತ ಫೋಟೋಸ್!
ಕನ್ನಡ - ತೆಲುಗು ಧಾರಾವಾಹಿ ನಟಿ ರಶ್ನಿ ಜಯರಾಜ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅದ್ಧೂರಿ ಸೀಮಂತ ಕಾರ್ಯಕ್ರಮದ ಫೋಟೋ ಹಂಚಿಕೊಂಡಿದ್ದಾರೆ.
ನಟಿ ರಶ್ಮಿ ಜಯರಾಜ್ (Rashmi Jayaraj) ಮೂಲತಃ ಕರ್ನಾಟಕದವರು. ಕನ್ನಡ ಕಿರುತೆರೆ ಲೋಕದಲ್ಲಿ ಹೆಸರು ಮಾಡಿರುವ ನಟಿ ವಿಧಿ ಧಾರಾವಾಹಿ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಈ ವರ್ಷ ಫೆಬ್ರವರಿ ತಿಂಗಳಿನಲ್ಲಿ ತಾಯಿಯಾಗುತ್ತಿರುವ (pregnancy) ವಿಚಾರನ್ನು ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದರು.
'ನಾವು ಪುಟ್ಟ ಕಂದಮ್ಮನ ನಿರೀಕ್ಷೆಯಲ್ಲಿ ಇರುವಾಗ 9 ತಿಂಗಳು ಲಾಂಗ್ ಗ್ಯಾಪ್ ಅನಿಸುವುದಿಲ್ಲ' ಎಂದು ರಶ್ಮಿ ಬರೆದುಕೊಂಡಿದ್ದರು.
'ಕುಟುಂಬಗಳು ಮರದ ಕೊಂಬೆಗಳಂತೆ, ನಾವು ವಿವಿಧ ದಿಕ್ಕುಗಳಲ್ಲಿ ಬೆಳೆಯುತ್ತೇವೆ ಆದರೆ ನಮ್ಮ ಬೇರುಗಳು ಒಂದೇ ಆಗಿರುತ್ತವೆ' ಎಂದು ಸೀಮಂತ ಪೋಟೋ ಹಂಚಿಕೊಂಡಿದ್ದಾರೆ.
ಹಸಿರು ಸೀರೆ ಕೆಂಪು ಡಿಸೈನರ್ ಬ್ಲೌಸ್‌ನಲ್ಲಿ ರಶ್ಮಿ ಮಿಂಚಿದ್ದಾರೆ. ರಶ್ಮಿ ಕೂರುವ ಸ್ಥಳಕ್ಕೆ ಬಿಳಿ ಬಣ್ಣ ಹೂಗಳಿಂದ ಅಲಂಕಾರ ಮಾಡಲಾಗಿತ್ತು.
ಪಿಂಕ್ ಡಿಸೈನರ್ ಗೌನ್ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಬೇಬಿ ಬಂಪ್ ಫ್ಲಾಂಟ್ ಮಾಡಿದ್ದಾರೆ. ಮೇಡಂ ನಿಮಗೆ ಹೆಣ್ಣು ಮಗು ಆಗಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.