ಕಿರುತೆರೆ ನಟಿ ಕವಿತಾ ಗೌಡ ಹೊಸ ಪೋಟೋಶೂಟ್; ಪುಟ್ಟ ಗಣೇಶ್ ಬರ್ತಿದ್ದಾನೆ ಅಂತ ಸೂಚನೆ ಕೊಟ್ರಾ?
ಗಣೇಶ ಹಬ್ಬದಂದು ವಿಶೇಷ ಫೋಟೋಶೂಟ್ ಮಾಡಿಸಿದ ಚಿನ್ನು. ಗಣೇಶನೇ ಬರೋದು ಅಂತಿದ್ದಾರೆ ನೆಟ್ಟಿಗರು...
ಕನ್ನಡ ಕಿರುತೆರೆಯ ಜನಪ್ರಿಯ ನಟಿ ಚಿನ್ನು ಉರ್ಫ್ ಕವಿತಾ ಗೌಡ ಮತ್ತು ಪತಿ ನಟ ಚಂದನ್ ಕುಮಾರ್ ಈ ವರ್ಷ ಗೌರಿ ಗಣೇಶ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತಿದ್ದಾರೆ.
ಪುಟ್ಟ ಮಣ್ಣಿನ ಗಣೇಶನನ್ನು ಹಿಡಿದುಕೊಂಡು ಕವಿತಾ ಗೌಡ ಫೋಟೋಶೂಟ್ ಮಾಡಿಸಿದ್ದಾರೆ. ಹಳದಿ ಸೀರೆಯಲ್ಲಿ ಕವಿತಾ ಮಿಂಚಿದ್ದಾರೆ.
ಸಮಸ್ತ ಕೋಟಿ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ವಿಘ್ನವಿನಾಶಕನು ಎಲ್ಲರ ಬಾಳಲ್ಲೂ ಸುಖ, ಸಂತೋಷ ತರಲಿ ಎಂದು ಕವಿತಾ ಬರೆದುಕೊಂಡಿದ್ದಾರೆ.
ಪುಟ್ಟ ಗಣೇಶನನ್ನು ಹಿಡಿದುಕೊಂಡಿರುವ ಕಾರಣ ಕವಿತಾ ಗೌಡ ಫಾಲೋವರ್ಸ್ 'ನಿಮ್ಮ ಮಡಿಲಿಗೆ ಗಣೇಶನೇ ಬರೋದು, ಬಾಲ ಗಣೇಶನ ಆಗಮನ ಆಗಲಿದೆ' ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಕವಿತಾ ಗೌಡ ಫೋಟೋಗಳನ್ನು ವೈಭವಿ ಕ್ಯಾಪ್ಚರ್ಸ್ ಕ್ಲಿಕ್ ಮಾಡಿರುವುದು, ಮೇಕಪ್ ಮಾಡಿರುವು ತೇಜಸ್ವಿನಿ ಮತ್ತು ವಸ್ತ್ರ ವಿನ್ಯಾಸ ಮಾಡಿರುವುದು ಕ್ಲಾಸಿ ರೆಂಟ್‌ಹೌಸ್.
ಹಲವು ವರ್ಷಗಳ ಕಾಲ ಕವಿತಾ ಗೌಡ ಮತ್ತು ಚಂದನ್ ಪ್ರೀತಿಸಿ ಮದುವೆ ಮಾಡಿಕೊಂಡಿದ್ದಾರೆ. ಲವ್ ಸ್ಟೋರಿ ಸೀಕ್ರೆಟ್ ಆಗಿಟ್ಟ ಈ ಜೋಡಿ ಪ್ರೆಗ್ನೆನ್ಸಿ ವಿಚಾರವನ್ನು ಕೆಲವು ತಿಂಗಳು ಸೀಕ್ರೆಟ್ ಆಗಿಟ್ಟಿದ್ದರು.