- Home
- Entertainment
- TV Talk
- ಜಗಳ ಆಯ್ತು, ಮಾತು ಬಿಟ್ವಿ; ಕೊನೆಗೂ ಬಾಯ್ ಫ್ರೆಂಡ್ ಹೆಸರು ರಿವೀಲ್ ಮಾಡಿದ ಕಮಲಿ ಸೀರಿಯಲ್ ಅಮೂಲ್ಯಾ
ಜಗಳ ಆಯ್ತು, ಮಾತು ಬಿಟ್ವಿ; ಕೊನೆಗೂ ಬಾಯ್ ಫ್ರೆಂಡ್ ಹೆಸರು ರಿವೀಲ್ ಮಾಡಿದ ಕಮಲಿ ಸೀರಿಯಲ್ ಅಮೂಲ್ಯಾ
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಕಮಲಿ' ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ನಟಿ ಅಮೂಲ್ಯಾ ಗೌಡ ಇದೀಗ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. 'ಡ್ರೀಮ್ ಬಾಯ್‌ಫ್ರೆಂಡ್' ಯಾರು ಎಂಬ ರಹಸ್ಯವನ್ನು ಕೊನೆಗೂ ಅಮೂಲ್ಯಾ ರಿವೀಲ್ ಮಾಡಿದ್ದಾರೆ.

ನಟಿ ಅಮೂಲ್ಯಾ ಗೌಡ ಡ್ರೀಮ್ ಬಾಯ್‌ಫ್ರೆಂಡ್
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಕಮಲಿ' ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ನಟಿ ಅಮೂಲ್ಯಾ ಗೌಡ ಇದೀಗ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಹಲವು ದಿನಗಳಿಂದ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದ ತಮ್ಮ 'ಡ್ರೀಮ್ ಬಾಯ್‌ಫ್ರೆಂಡ್' ಯಾರು ಎಂಬ ರಹಸ್ಯವನ್ನು ಕೊನೆಗೂ ಅಮೂಲ್ಯಾ ರಿವೀಲ್ ಮಾಡಿದ್ದಾರೆ. ಅಷ್ಟೇ ಅಲ್ಲ, ಇದೀಗ ಅಮೂಲ್ಯಾ ಹಾಗೂ ನಿರಂಜನ್ ಅವರ ಮದುವೆ ವಿಚಾರವೂ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕೊನೆಗೂ ಬಾಯ್‌ಫ್ರೆಂಡ್ ಯಾರು ಎಂಬ ರಹಸ್ಯ ಬಯಲು
ಅಮೂಲ್ಯಾ ಗೌಡ ತಮ್ಮ YouTube ಚಾನೆಲ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ತಮ್ಮ ಬಾಯ್‌ಫ್ರೆಂಡ್ ಯಾರು ಎಂಬುದನ್ನು ಅಭಿಮಾನಿಗಳ ಮುಂದೆ ಬಹಿರಂಗಪಡಿಸಿದ್ದಾರೆ. ಈ ವೇಳೆ ಅವರು 'ಗಾಳಿಪಟ' ಖ್ಯಾತಿಯ ಗಣೇಶ್ ಅವರ ಸೋದರಸಂಬಂಧಿ ನಿರಂಜನ್ ಅವರತ್ತ ಕೈತೋರಿಸಿದ್ದಾರೆ.
ನಂಗೆ ಬೇಡ ಬೇಡ ಅಂದ್ರು ಸಿಕ್ಕಿರುವಂತ ಫ್ರೆಂಡ್ ಇವನು ಎಂದು ತಮಾಷೆಯಾಗಿ ಹೇಳುವ ಮೂಲಕ ನಿರಂಜನ್ ಅವರೊಂದಿಗೆ ರಿಲೇಷನ್‌ಶಿಪ್‌ನಲ್ಲಿರುವುದನ್ನು ಅಮೂಲ್ಯಾ ಒಪ್ಪಿಕೊಂಡಿದ್ದಾರೆ. ನಿರಂಜನ್ ಕೂಡ ತಾವು ಅಮೂಲ್ಯಾ ಅವರೊಂದಿಗೆ ರಿಲೇಷನ್‌ಶಿಪ್‌ನಲ್ಲಿರುವುದನ್ನು ಖಚಿತಪಡಿಸಿದ್ದಾರೆ.
ವಿಡಿಯೋದಲ್ಲಿ ಜಗಳ, ಲೇವಡಿ
YouTube ವಿಡಿಯೋ ಆರಂಭದಲ್ಲೇ ಅಮೂಲ್ಯಾ ಮತ್ತು ನಿರಂಜನ್ ನಡುವೆ ತಮಾಷೆಯ ಜಗಳ ಮತ್ತು ಲೇವಡಿ ನಡೆಯುತ್ತದೆ. ನಿರಂಜನ್ ಅವರನ್ನು ಅಮೂಲ್ಯಾ "ಅನ್‌ಇನ್ವೈಟೆಡ್ ಗೆಸ್ಟ್" ಎಂದು ಕರೆದರೆ, ತಾವು "ಗೆಸ್ಟ್ ಅಪಿಯರೆನ್ಸ್"ಗಾಗಿ ಬಂದಿರುವುದಾಗಿ ನಿರಂಜನ್ ಹೇಳುತ್ತಾರೆ.
ಇಬ್ಬರೂ ಪರಸ್ಪರ ಕಾಲೆಳೆಯುತ್ತಾ, ಶರ್ಟ್ ಗುಂಡಿ ಹಾಕಿಕೊಳ್ಳುವುದು, ವಾಟರ್ ಬಾಟಲ್ ಹಿಡಿಯುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ತಮಾಷೆ ಮಾಡಿಕೊಳ್ಳುತ್ತಾರೆ. ಇವರಿಬ್ಬರ ನಡುವಿನ ಕಂಫರ್ಟ್ ಮತ್ತು ಬಾಂಡಿಂಗ್ ಅಭಿಮಾನಿಗಳ ಗಮನ ಸೆಳೆದಿದೆ.
ಮೊದಲ ಭೇಟಿಯಲ್ಲಿ ಇಬ್ಬರಿಗೂ ಏನನಿಸಿತ್ತು?
ಇನ್ನು ಇಬ್ಬರೂ ತಮ್ಮ ಮೊದಲ ಭೇಟಿಯ ದಿನಗಳನ್ನು ಕೂಡ ವಿಡಿಯೋದಲ್ಲಿ ನೆನಪಿಸಿಕೊಂಡಿದ್ದಾರೆ. ಶೂಟಿಂಗ್‌ನ ಮೊದಲ ದಿನ ನಿರಂಜನ್ ಅವರನ್ನು ನೋಡಿದಾಗ ಅವರು ಓವರ್ ಆಕ್ಟಿಂಗ್ ಮಾಡುತ್ತಿದ್ದಾರೆ ಎಂದು ಅಮೂಲ್ಯಾ ಭಾವಿಸಿದ್ದರಂತೆ.
ಮತ್ತೊಂದೆಡೆ, ಅಮೂಲ್ಯಾ ಅವರನ್ನು ನೋಡಿದಾಗ ಮೂಕಿ ಚಿತ್ರದ ಹೀರೋಯಿನ್ ರೀತಿಯಲ್ಲಿ ಕಾಣಿಸುತ್ತಿದ್ದರು. ಅವರಿಗೆ ಮಾತೇ ಬರುವುದಿಲ್ಲ ಎಂದು ಅಂದುಕೊಂಡಿದ್ದೆ ಎಂದು ನಿರಂಜನ್ ತಮಾಷೆಯಾಗಿ ಹೇಳಿದ್ದಾರೆ.
ಆದರೆ, ಹೊರಾಂಗಣ ಚಿತ್ರೀಕರಣದ ಸಂದರ್ಭದಲ್ಲಿ ನಿರಂಜನ್ ಅವರು ಅಮೂಲ್ಯಾ ಅವರಿಗೆ ತಿಂಡಿಗಳನ್ನು ತಂದುಕೊಡುತ್ತಾ ಸ್ನೇಹ ಬೆಳೆಸಿಕೊಂಡಿದ್ದಾರೆ. ಕ್ರಮೇಣ ಈ ಸ್ನೇಹ ಪ್ರೀತಿಗೆ ತಿರುಗಿದೆ ಎನ್ನಲಾಗಿದೆ. ನಿರಂಜನ್ ಅವರ ಕೇರಿಂಗ್ ನೇಚರ್ ಅಮೂಲ್ಯಾ ಅವರಿಗೆ ಇಷ್ಟವಾಗಿದ್ದರೆ, ಅಮೂಲ್ಯಾ ಅವರ ಪ್ಯೂರ್ ಮತ್ತು ಯೂನಿಕ್ ಕ್ವಾಲಿಟಿ ನಿರಂಜನ್ ಅವರನ್ನು ಆಕರ್ಷಿಸಿದೆ.
ಲಾಕ್‌ಡೌನ್‌ನಲ್ಲಿ ಜಗಳ... ತಿಂಗಳುಗಟ್ಟಲೆ ಮಾತೇ ಇರಲಿಲ್ಲ!
ಪ್ರತಿಯೊಂದು ಪ್ರೀತಿಯ ಕಥೆಯಲ್ಲೂ ಏರಿಳಿತಗಳಿರುವಂತೆ ಅಮೂಲ್ಯಾ ಮತ್ತು ನಿರಂಜನ್ ಅವರ ಸಂಬಂಧದಲ್ಲೂ ಜಗಳಗಳು ನಡೆದಿವೆ. ವಿಶೇಷವಾಗಿ ಲಾಕ್‌ಡೌನ್ ಸಮಯದಲ್ಲಿ ಇಬ್ಬರ ನಡುವೆ ಸಾಕಷ್ಟು ಜಗಳಗಳಾಗಿದ್ದವು ಎನ್ನಲಾಗಿದೆ.
ಕೆಲವು ಸಂದರ್ಭಗಳಲ್ಲಿ ತಿಂಗಳುಗಟ್ಟಲೆ ಇಬ್ಬರೂ ಒಬ್ಬರಿಗೊಬ್ಬರು ಮಾತನಾಡದೇ ಇದ್ದ ದಿನಗಳೂ ಇವೆ ಎಂದು ಅಮೂಲ್ಯಾ ಹೇಳಿದ್ದಾರೆ. ತಮ್ಮ ಸಂಬಂಧದಲ್ಲಿ ನಡೆದ ಇಂತಹ ಹಲವು ಕುತೂಹಲಕಾರಿ ಘಟನೆಗಳನ್ನು ಮುಂದಿನ ವಿಡಿಯೋಗಳಲ್ಲಿ ಹಂಚಿಕೊಳ್ಳುವುದಾಗಿ ಅವರು ತಿಳಿಸಿದ್ದಾರ
ತೆಲುಗು ಶೋನಲ್ಲಿ ಮದುವೆ ಬಗ್ಗೆ ಬಿಗ್ ಸುಳಿವು?
ಇದೀಗ ಅಮೂಲ್ಯಾ ಮತ್ತು ನಿರಂಜನ್ ಅವರ ಸಂಬಂಧಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ತೆಲುಗು ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಇಬ್ಬರ ಮದುವೆ ವಿಚಾರ ಚರ್ಚೆಗೆ ಬಂದಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ ಎನ್ನಲಾಗಿದೆ.
ಕಾರ್ಯಕ್ರಮದಲ್ಲಿ ಮದುವೆ ಸಂಭ್ರಮದ ವಾತಾವರಣ ಕಂಡುಬಂದಿದ್ದು, ಕಾಲಿಗೆ ಗಜ್ಜೆ ತೊಡಿಸುವ ಕ್ಷಣವೂ ಗಮನ ಸೆಳೆಯುತ್ತಿದೆ. ಇದರ ಜೊತೆಗೆ 'Will U Marry Me' ಎಂಬ ಬರಹ ಕಾಣಿಸಿಕೊಂಡಿರುವುದು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಕಾರ್ಯಕ್ರಮದ ವೇಳೆ "ನಾವು ರಿಯಲ್ ಆಗಿ ಮದುವೆ ಆಗ್ತಿದ್ದೀವಿ" ಎಂಬ ರೀತಿಯ ಹೇಳಿಕೆ ಕೇಳಿಬಂದಿದೆ ಎನ್ನಲಾಗಿದ್ದು, ಇದರಿಂದ ಅಮೂಲ್ಯಾ ಮತ್ತು ನಿರಂಜನ್ ನಿಜ ಜೀವನದಲ್ಲೂ ಹಸೆಮಣೆ ಏರಲಿದ್ದಾರಾ ಎಂಬ ಚರ್ಚೆ ಜೋರಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.