- Home
- Entertainment
- TV Talk
- ರಿಯಾಲಿಟಿ ಶೋನಲ್ಲಿ ಗಂಡನ ಜೊತೆ ಮುನಿಸು… ಬಳಿಕ Guys Chill, ನಾವು ಚೆನ್ನಾಗಿದ್ದೇವೆ ಎಂದು ಪೋಸ್ ಕೊಟ್ಟ ನಟಿ
ರಿಯಾಲಿಟಿ ಶೋನಲ್ಲಿ ಗಂಡನ ಜೊತೆ ಮುನಿಸು… ಬಳಿಕ Guys Chill, ನಾವು ಚೆನ್ನಾಗಿದ್ದೇವೆ ಎಂದು ಪೋಸ್ ಕೊಟ್ಟ ನಟಿ
ಜೋಡಿ ನಂ. 1 ರಿಯಾಲಿಟಿ ಶೋದಲ್ಲಿ ನಟಿ ಗೀತಾ ಭಾರತಿ ಭಟ್, ಗಂಡನ ಜೊತೆ ಜಗಳ ಮಾಡಿ, ಅತ್ತು ಭಾವುಕರಾಗಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ, ಜನ ಇಲ್ಲೇನು ಆಗುತ್ತಿದೆ ಎಂದು ಕುತೂಹಲ ವ್ಯಕ್ತಪಡಿಸಿದ್ದಾರೆ. ಅಷ್ಟರಲ್ಲೇ ನಟಿ ಚಿಲ್ ಗಯ್ಸ್ ನಾವು ಚೆನ್ನಾಗಿದ್ದೇವೆ ಎಂದಿದ್ದಾರೆ.

ಜೋಡಿ ನಂ. 1
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಜೋಡಿ ನಂ. 1. ಈ ರಿಯಾಲಿಟಿ ಶೋನಲ್ಲಿ ಸೀರಿಯಲ್ ತಾರೆಯರು ಭಾಗವಹಿಸಿದ್ದು. ‘ಬ್ರಹ್ಮಗಂಟು’ ಖ್ಯಾತಿಯ ಗೀತಾ ಭಾರತಿ ಭಟ್ ಕೂಡ ತಮ್ಮ ಪತಿ ರಾಜಾರಾಮ್ ಜೊತೆ ಭಾಗವಹಿಸಿದ್ದಾರೆ. ಇದೀಗ ವರ ವಿಡಿಯೋ ವೈರಲ್ ಆಗುತ್ತಿದೆ.
ಗೀತಾ ಭಾರತಿ ಭಟ್
ಇತ್ತೀಚೆಗೆ ಬಂದ ಪ್ರೋಮೋದಲ್ಲಿ ಕಾಣಿಸಿಕೊಂಡಿರುವ ಗೀತಾಭಾರತಿ ಭಟ್ ‘ ನಾನೇನಾದ್ರು ಮಾತಾಡಿದ್ರೆ, ಹೇಯ್ ಎಕ್ಸ್ಟ್ರಾ ಮಾತುಗಳನ್ನು ಆಡ್ಬೇಡಮ್ಮ, ಏನಕ್ಕೆ ಇದೆಲ್ಲಾ ಡ್ರಾಮಾ ಮಾಡ್ತಿಯಾ, ನನಿಗೊಂದು ನ್ಯಾಯ, ನಿಮಗೊಂದು ನ್ಯಾಯ ಏನಕ್ಕೆ, ಅದಕ್ಕೆ ರಾಜಾರಾಮ್ ಇದೆ ಇಷ್ಟೇ ಆಗೋದು, ಹೊಡಿ, ನೀನು ನನ್ನ ಬುರುಡೆನೆ ಹೊಡೆ ಬೇಕಾದ್ರೆ ಎಂದು ಹೇಳಿದ್ದಾರೆ.
ಬಿಕ್ಕಿ ಬಿಕ್ಕಿ ಅತ್ತಾಗ ಗೇಲಿ ಮಾಡಿದ ಪತಿ
ಅಷ್ಟೇ ಅಲ್ಲ ಗೀತಾ ಭಾರತಿ ಮುಂದುವರೆದು, ನಾನು ಬಿಕ್ಕಿ ಬಿಕ್ಕಿ ಅತ್ತಿರುವಾಗ ಗೇಲಿ ಮಾಡಿದ್ದೀರಾ ಏನಕ್ಕೆ? ದೂರ ತಳ್ಬೋದು, ಆದ್ರೆ ನಾನು ಎಷ್ಟೋ ಸಲ ಅತ್ತುಕೊಂಡು ಮಲಗಿದ್ದೀನಿ, ಆದರೆ ನನ್ನ ಅತ್ತುಕೊಂಡು ಮಲಗೋಕೆ ಬಿಡಬೇಡಿ ಅಷ್ಟೇ ಎಂದು ಹೇಳಿ ಅಳುತ್ತಿರುವ ವಿಡೀಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಿಡೀಯೋ ನೋಡಿ ವೀಕ್ಷಕರು ಶಾಕ್
ವಿಡೀಯೋ ನೋಡಿ ಶಾಕ್ ಆಗಿರುವ ವೀಕ್ಷಕರು, ಈ ಶೋಗೆ ಬರಬೇಕಾದ್ರೆ ಏನು ನೋವಿಲ್ಲ ಅನ್ನೋತರ ಬಂದಿದ್ರು ಈ ಜೋಡಿಗಳು. ಈವಾಗ ನೋಡಿದ್ರೆ ಎಲ್ಲರ ಮನೆ ದೋಸೇನು ತೂತೆ.. ಅಂತ ತೋರಿಸ್ತಾ ಇದಾರೆ...ಗಂಡ ಹೆಂಡತಿ ಬೇರೆ ಬೇರೆ ಮಾಡುವ ಶೋ, ಪ್ರೋಗ್ರಾಮ್ ಕೆ ಹೋದವರೆಲ್ಲ ಗ್ಯಾರೆಂಟಿ ಡೈವರ್ಸ್ ಕೊಟ್ಟೆ ಕಳಿಸ್ತಾರೆ. ತಮ್ಮ TRP ಗೋಸ್ಕರ ಈ ತರ ಸ್ಕ್ರಿಪ್ಟ್ ಮಾಡಿ ಸಮಾಜಕ್ಕೆ ಯಾವ ಸಂದೇಶ ಕೊಡ್ತಾ ಇದಿರ?? ಎಂದೆಲ್ಲಾ ಕಾಮೆಂಟ್ ಮಾಡಿ ಪ್ರಶ್ನೆ ಮಾಡುತ್ತಿದ್ದಾರೆ ಜನ.
ಜೊತೆಗಿರುವ ಫೋಟೋ ಹಂಚಿಕೊಂಡ ಗೀತಾ ಭಾರತಿ
ತಮ್ಮ ಪ್ರೊಮೋ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿ, ಜನ ಏನೇನೋ ಕಾಮೆಂಟ್ ಮಾಡೋದನ್ನು ನೋಡಿ, ಗೀತಾ ಗಂಡನ ಜೊತೆಗಿನ ಕೆಲವು ಮುದ್ದಾದ ಫೋಟೊಗಳನ್ನು ಹಂಚಿಕೊಂಡು, Guys Chill, ನಾವು ಚೆನ್ನಾಗಿದ್ದೇವೆ (Guys!! Chilll!! We are good!) ಎಂದಿದ್ದಾರೆ. ಇದನ್ನು ನೋಡಿ ಸದ್ಯ ಅಭಿಮಾನಿಗಳು ಸಹ ನಿಟ್ಟುಸಿರು ಬಿಟ್ಟಿದ್ದಾರೆ.
ಜೀ ಕನ್ನಡದ ಜನಪ್ರಿಯ ಸೆಲೆಬ್ರಿಟಿ ಜೋಡಿ ಶೋ
ಜೀ ಕನ್ನಡದ ಜನಪ್ರಿಯ ಸೆಲೆಬ್ರಿಟಿ ಜೋಡಿಗಳ ರಿಯಾಲಿಟಿ ಶೋ 'ಜೋಡಿ ನಂ.1' ಈ ಕಾರ್ಯಕ್ರಮಕ್ಕೆ ನಟಿ ಮತ್ತು ರಾಜಕಾರಣಿ ಮಾಳವಿಕಾ ಅವಿನಾಶ್, ನಟ ನೆನಪಿರಲಿ ಪ್ರೇಮ್ ಹಾಗೂ ಅಮೃತಧಾರೆಯ ಜನಪ್ರಿಯ ಜೋಡಿ ನಟ ರಾಜೇಶ್ ನಟರಂಗ ಮತ್ತು ನಟಿ ಛಾಯಾ ಸಿಂಗ್ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಶ್ವೇತಾ ಚಂಗಪ್ಪ ಮತ್ತು ಹಾಸ್ಯನಟ ಕುರಿ ಪ್ರತಾಪ್ ನಿರೂಪಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

