IPL ಹೋಸ್ಟ್ ರೀನಾ ಡಿಸೋಜಾ ಈಗ ಗಿಚಿ ಗಿಲಿಗಿಲಿ ಶೋನಲ್ಲಿ!
ಇಷ್ಟು ದಿನ ಕ್ರೀಡಾ ನಿರೂಪಕಿಯಾಗಿದ್ದ ರೀನಾ ಡಿಸೋಜಾ ಮನೋರಂಜನೆ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಮಂಜು ಪಾವಗಡಗೆ ಜೋಡಿ ಈ ಚೆಲುವೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚಿ ಗಿಲಿಗಿಲಿ ಕಾಮಿಡಿ ಶೋಗೆ ರೀನಾ ಡಿಸೋಜಾ ನಿರೂಪಕಿಯಾಗಿದ್ದಾರೆ. ಸೃಜನ್ ಲೋಕೇಶ್ ಮತ್ತು ಶ್ರುತಿ ತೀರ್ಪುಗಾರರು.
'ಗಿಚಿ ಗಿಲಿಗಿಲಿ ನಿರೂಪಣೆ ಮಾಡುತ್ತಿರುವುದಕ್ಕೆ ಖುಷಿ ಇದೆ. ಆದರೆ ಕೊಂಚ ಆತಂಕ ನನ್ನಲ್ಲಿದೆ ಏಕೆಂದರೆ ರಿಯಾಲಿಟಿ ಶೋ ನಿರೂಪಣೆ ಮಾಡುವುದು ದೊಡ್ಡ ಜವಾಬ್ದಾರಿ' ಎಂದು ಇಟೈಮ್ಸ್ ಸಂದರ್ಶನದಲ್ಲಿ ರೀನಾ ಮಾತನಾಡಿದ್ದಾರೆ.
'ಮನೋರಂಜನೆ ನೀಡುವುದು ಮನೋರಂಜಿಸುವುದು ದೊಡ್ಡ ಚಾಲೆಂಜ್. ವೀಕ್ಷಕರ ನಿರೀಕ್ಷೆ ತಕ್ಕಂತೆ ಕೆಲಸ ಮಾಡಬೇಕು ಆಗ ಮಾತ್ರ ನಾನು ಯಶಸ್ವಿಯಾಗಲು ಸಾಧ್ಯ'
'ಮಂಜು ಪಾವಗಡ ತುಂಬಾನೇ ಕೂಲ್ ಆಗಿರುವ ವ್ಯಕ್ತಿ. ಅವರ ಜೊತೆ ಕೆಲಸ ಮಾಡುವುದಕ್ಕೆ ಖುಷಿ ಇದೆ. ಮಂಜು ಅವರು ವೃತ್ತಿ ಜೀವನದಲ್ಲಿ ಬೆಳೆಯುತ್ತಿರುವ ರೀತಿಗೆ ಖುಷಿ ಇದೆ'
'ಶ್ರುತಿ ಮೇಡಂ ಅವರು ತುಂಬಾ ನಗಿಸುತ್ತಾರೆ. ಸಿನಿಮಾದಲ್ಲಿ ಅವರು ಅಳುವುದನ್ನು ನೋಡಿದ್ದೀವಿ ಆದರೆ ರಿಯಾಲಿಟಿಯಲ್ಲಿ ಅವರು ಡಿಫರೆಂಟ್ ವ್ಯಕ್ತಿ. ಇಡೀ ಶೋಗೆ ಅವರು ಪವರ್‌ಹೌಸ್'
'ಸೃಜನ್ ಲೋಕೇಶ್ ಅವರಿಗೆ ಈ ಕ್ಷೇತ್ರ ಹೊಸದಲ್ಲ, ಅವರ ಹಾಸ್ಯಕ್ಕೆ ಯಾರೂ ಮ್ಯಾಚ್ ಮಾಡೋಕೆ ಆಗೋಲ್ಲ. ಅಲ್ಲಿರುವ ಸ್ಪರ್ಧಿಗಳು ಕೂಡ ತುಂಬಾನೇ ಹಾರ್ಡ್‌ವರ್ಕ್ ಮಾಡುತ್ತಿದ್ದಾರೆ'
'ಮನೋರಂಜನೆ ಕ್ಷೇತ್ರದಲ್ಲಿರುವುದಕ್ಕೆ ಸಂತೋಷವಿದೆ. ಕ್ರೀಡೆಯಿಂದ ಮನೋರಂಜನೆ ದೊಡ್ಡ ಬದಲಾವಣೆ. ವೀಕ್ಷಕರು ನನ್ನನ್ನು ಒಪ್ಪಿಕೊಂಡಿದ್ದಾರೆ' ಎಂದು ರೀನಾ ಹೇಳಿದ್ದಾರೆ.