- Home
- Entertainment
- TV Talk
- Anvita Sagar: ಗಟ್ಟಿಮೇಳದ ಚೆಲುವೆ ಆದ್ಯಾ, ಸಿನಿಮಾ ಹೀರೋಯಿನ್, ಮಾಡೆಲ್, ಡ್ಯಾನ್ಸರ್ ಕೂಡ ಹೌದು ಗೊತ್ತಾ?
Anvita Sagar: ಗಟ್ಟಿಮೇಳದ ಚೆಲುವೆ ಆದ್ಯಾ, ಸಿನಿಮಾ ಹೀರೋಯಿನ್, ಮಾಡೆಲ್, ಡ್ಯಾನ್ಸರ್ ಕೂಡ ಹೌದು ಗೊತ್ತಾ?
ಹೆಚ್ಚಾಗಿ ಸೀರಿಯಲ್ ಗಳಲ್ಲಿ ನಾಯಕ, ನಾಯಕಿಗೆ ಹೆಚ್ಚಿನ ಅಭಿಮಾನಿಗಳು ಇರುತ್ತಾರೆ. ಆದರೆ ತನ್ನ ಮೊದಲ ಸೀರಿಯಲ್ ನಲ್ಲೇ ಜನಮನ ಗೆದ್ದು, ಇದ್ರೆ ಇಂತಹ ತಂಗಿ, ಹೆಂಡತಿ, ಅತ್ತಿಗೆ ಇರಬೇಕು ಎಂದು ಪ್ರತಿಯೊಬ್ಬ ಸೀರಿಯಲ್ ಪ್ರಿಯರಿಗೆ ಅನಿಸಿದ್ದು, ಗಟ್ಟಿಮೇಳ ಸೀರಿಯಲ್ ನ ಆದ್ಯಾ ಪಾತ್ರಧಾರಿ ಅನ್ವಿತಾ ಸಾಗರ್ ನೋಡಿ.. ಈ ಮಲ್ಟಿ ಟ್ಯಾಲೆಂಟೆಡ್ ಮಂಗಳೂರು ಬೆಡಗಿ ಬಗ್ಗೆ ತಿಳಿಯೋಣ.

ಗಟ್ಟಿಮೇಳ ಸೀರಿಯಲ್ (Gattimela Serial) ನೋಡುವವರ ಪೆವರಿಟ್ ನಟಿ ಅಂದರೆ ತಂಗಿಯ ಪಾತ್ರ ನಿರ್ವಹಿಸುವ ಅನ್ವಿತಾ ಸಾಗರ್. ತನ್ನ ಮುದ್ದಾದ ನಟನೆ, ಅಣ್ಣನವರ ಕಾಲೆಳುವ ಪ್ರೀತಿಯ ತಂಗಿ, ಗೆಳೆತಿಯಂತಿರುವ ಅತ್ತಿಗೆ ಎಲ್ಲಾ ರೀತಿಯಲ್ಲೂ ಆದ್ಯಾ ಪ್ರೇಕ್ಷಕರ ಫೆವರಿಟ್ ಆಗಿದ್ದಾರೆ. ಇವರಿಗಾಗಿ ಸಾಕಷ್ಟು ಅಭಿಮಾನಿಗಳ ಪೇಜ್ ಕೂಡ ಕ್ರಿಯೇಟ್ ಆಗಿದೆ. ಇವರು ಆಂಕರಿಂಗ್ ಮಾಡಿದ್ದಾರೆ, ಸಿನಿಮಾದಲ್ಲೂ ನಟಿಸಿದ್ದಾರೆ ಅನ್ನೋದು ಗೊತ್ತಾ?
ಅನ್ವಿತಾ ಸಾಗರ್ (Anvitha Sagar)ಮೂಲ ಹೆಸರು ಪಾರ್ವತಿ. ಇವರು :20 ಫೆಬ್ರವರಿ 1992ರಲ್ಲಿ ಜನಿಸಿದಾರೆ. ಇವರು ಕನ್ನಡ ಸೀರಿಯಲ್ ನಟಿ ಅನ್ನೋದು ನಿಮಗೆ ಗೊತ್ತೇ ಇರೆ. ಆದ್ರೆ ಅದಕ್ಕೂ ಮುನ್ನ ಇವರು ಮಾಡೆಲ್ ಆಗಿದ್ದರು, ಟಿವಿ ಚಾನೆಲ್ ಗಳಲ್ಲಿ ನಿರೂಪಣೆ ಮಾಡ್ತಿದ್ರು, ಇನು ಇವರು ಕನ್ನಡ ಮತ್ತು ತುಳು ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ ಅನ್ನೋದು ನಿಮಗೆ ಗೊತ್ತಾ?
ಈ ಮಲ್ಟಿ ಟ್ಯಾಲೆಂಟ್ ಮಂಗಳೂರು ಹುಡುಗಿಯ ಸಹೋದರ ಅನೂಪ್ ಸಾಗರ್ ತುಳು ಚಿತ್ರರಂಗದಲ್ಲಿ (Tulu Film) ಮಿಂಚುತ್ತಿರುವಂತಹ ನಟ. ಅನ್ವಿತಾ ಜನಿಸಿದ್ದು, ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ, ಅಲ್ಲಿಯೇ ಹೈಸ್ಕೂಲ್ ಶಿಕ್ಷಣ ಮುಗಿಸಿದ ಇವರು, ನಂತರ ನೆಲೆಯೂರಿದ್ದು ಮಂಗಳೂರಿನಲ್ಲಿ. ಇವರ ತಂದೆ ಹೇಮಚಂದ್ರ(ಉದ್ಯಮಿ), ತಾಯಿ ಭಾರತಿ(ಗೃಹಣಿ). ಮಂಗಳೂನಲ್ಲೇ ಇವರು ಎಂ.ಬಿ.ಎ ಸ್ನಾತಕೋತ್ತರ ಪದವಿ ಪಡೆದು ಬಳಿಕ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದರು.
ಸ್ನಾತ್ತಕೋತ್ತರ ಪದವಿ (Masters Degree) ಪಡೆಯುತ್ತಿರುವಾಗಲೇ ಅನ್ವಿತಾ ನಾಲ್ಕು ವರುಷಗಳ ಕಾಲ ನಮ್ಮ ಟಿ.ವಿ ಚಾನಲ್ ನಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದರು. ನಂತರ 2015 ರಲ್ಲಿ ಇವರು ರಂಜಿತ್ ಬಜ್ಪೆ ನಿರ್ದೇಶನದ ದಂಡ್ ತುಳುಚಿತ್ರದ ಮೂಲಕ ಸಿನಿಮಾ ಲೋಕಕ್ಕೆ ಪಾದಾರ್ಪಿಸಿದರು.ಇದರ ನಂತರ ಹಲವಾರು ತುಳು ಮತ್ತು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ.
ಅನ್ವಿತಾ ಅವರು ಕನ್ನಡ ಸಿನಿಮಾಗಳಾದ ಬಣ್ಣ ಬಣ್ಣದ ಬದುಕು, ಸ್ನೇಹಚಕ್ರ, ಮಾಯಾಕನ್ನಡಿ , ಜೀವನ ಯಜ್ಞ ಹಾಗೂ ತುಳು ಸಿನಿಮಾಗಳಾದ ದಂಡ್ , ಪೆಟ್ಕಮ್ಮಿ, ಬಲೆ ಪುದರ್ ದೀಕ ಈ ಪ್ರೀತಿಗ್ ಎಂಬ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಸ್ತುತವಾಗಿ ಇವರು ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಗಟ್ಟಿಮೇಳ ಎಂಬ ಧಾರವಾಹಿಯಲ್ಲಿ 'ಆಧ್ಯಾ; ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇನ್ನು ಐತಿಹಾಸಿಕ ಪಾತ್ರಗಳನ್ನು ತುಂಬ ಇಷ್ಟ ಪಡುವ ಅನ್ವಿತಾಗೆ ನೆಗೆಟಿವ್ ಶೇಡ್ ಮಾಡಬೇಕು ಎಂಬ ಆಸೆಯೂ ಇದೆಯಂತೆ. ಅಷ್ಟೇ ಅಲ್ಲ ಸಿನಿಮಾ, ವೆಬ್ ಸಿರೀಸ್ ಕಡೆಗೆ ಗಮನ ಕೊಡಬೇಕು ಎನ್ನುವ ಯೋಜನೆಯೂ ಇದೆಯಂತೆ. ಗಟ್ಟಿಮೇಳ ಸೀರಿಯಲ್ ನ ಆದ್ಯಾ ಪಾತ್ರದಲ್ಲಿ ಕರ್ನಾಟಕದಾದ್ಯಂತ ಸಾಕಷ್ಟು ಜನಪ್ರಿಯತೆ ಪಡೆದ ಹಿನ್ನೆಲೆಯಲ್ಲಿ ಈ ಕ್ಷೇತ್ರ ಬಿಡಲು ಮನಸ್ಸಿಲ್ಲ ಎನ್ನುತ್ತಾರೆ ಅನ್ವಿತಾ ಸಾಗರ್.
ಇನ್ನು ಮಂಗಳೂರಿನಲ್ಲಿ ಇವರದ್ದೇ ಆದ ಒಂದು ಕೆಫೆ ಕೂಡ ಇರೋದರಿಂದ ಮಂಗಳೂರು ಮತ್ತು ಬೆಂಗಳೂರು ನಡೆವೆ ಪದೇ ಪದೇ ಟ್ರಾವೆಲ್ ಮಾಡುತ್ತಿರುವ ಈ ನಟಿ, ಇದರಿಂದಾಗಿಯೇ ಬೇರೆ ಭಾಷೆಯ ಕಿರುತೆರೆಯಿಂದ ಆಫರ್ ಬಂದರೂ ಅಲ್ಲಿಗೆ ಹೋಗಲು ತಯಾರಿಲ್ಲವಂತೆ.
ಸೋಶಿಯಲ್ ಮೀಡಿಯಾದಲ್ಲಿ (Social Media) ಸಖತ್ ಬ್ಯುಸಿಯಾಗಿರುವ ಅನ್ವಿತಾ ಸೂಪರ್ ಡ್ಯಾನ್ಸರ್ ಕೂಡ ಹೌದು, ಅದನ್ನು ಇವರ ಸೋಶಿಯಲ್ ಮೀಡೀಯಾ ನೋಡಿದ್ರೇನೆ ಗೊತ್ತಾಗುತ್ತೆ. ಸಾಕಷ್ಟು ಡ್ಯಾನ್ಸ್ ವಿಡೀಯೋಗಳನ್ನು, ರೀಲ್ಸ್ ಗಳನ್ನು ಶೇರ್ ಮಾಡುತ್ತಾ, ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ ಈ ಸುಂದರಿ. ಇನ್ನು ಯುವಜನತೆಯ ಕ್ರಶ್ ಆಗಿರುವ, ಲಕ್ಷಾಂತರ ಅಭಿಮಾನಿಗಳ ಪ್ರೀತಿಯ ಆದ್ಯಾ ಸಿನಿಮಾ ಕ್ಷೇತ್ರದಲ್ಲೂ ಸಾಕಷ್ಟು ಸಾಧನೆ ಮಾಡಲಿ ಅನ್ನೋ ಹಾರೈಕೆ ನಮ್ಮದು.