ಲಿಜ್ಲಾಝ್ ಫೋಟೋಗೆ ಕೊಹ್ಲಿ ಲೈಕ್ ಕೋಲಾಹಲ ಬೆನ್ನಲ್ಲೇ ಹಣದ ಆಫರ್ ಸೀಕ್ರೆಟ್ ಬಿಚ್ಚಿಟ್ಟ ಮಾಡೆಲ್
ಜರ್ಮನ್ ಮಾಡೆಲ್ ಲಿಜ್ಲಾಝ್ ಫೋಟೋಗೆ ಇತ್ತೀಚೆಗೆ ವಿರಾಟ್ ಕೊಹ್ಲಿ ಲೈಕ್ ಒತ್ತಿ ಕೋಲಾಹಲ ಸೃಷ್ಟಿಸಿದ್ದರು. ಇದೀಗ ಮಾಡೆಲ್ ಹೊಸ ಬಾಂಬ್ ಸಿಡಿಸಿದ್ದಾರೆ. ಹಣದ ಆಫರ್ ಕುರಿತ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಘಟನೆ ಬಳಿಕ ನಡೆದ ಸೀಕ್ರೆಟ್ ಬಿಚ್ಚಿಟ್ಟ ಲಿಜ್ಲಾಝ್
ಐಪಿಎಲ್ ಟೂರ್ನಿಯಲ್ಲಿ ಬ್ಯೂಸಿಯಾಗಿರುವ ವಿರಾಟ್ ಕೊಹ್ಲಿ ಇತ್ತೀಚೆಗೆ ಜರ್ಮನ್ ಮಾಡೆಲ್, ಇನ್‌ಫ್ಲುಯೆನ್ಸರ್ ಲಿಜ್ಲಾಝ್ ಇನ್‌ಸ್ಟಾಗ್ರಾಂ ಫೋಟೋಗೆ ಲೈಕ್ ಒತ್ತಿದ್ದರು. ಇದರ ಬೆನ್ನಲ್ಲೇ ಲಿಜ್ಲಾಝ್ ಭಾರತದಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದರು. ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿತ್ತು. ಆದರೆ ಕೊಹ್ಲಿ ವೈಯುಕ್ತಿಕವಾಗಿ ತೀವ್ರ ಸಮಸ್ಯೆ ಎದುರಿಸಿದ್ದರು. ಈ ಘಟನೆ ಬೆನ್ನಲ್ಲೇ ಇದೀಗ ಕೆಲ ಸೀಕ್ರೆಟ್‌ಗಳನ್ನು ಮಾಡೆಲ್ ಲಿಜ್ಲಾಝ್ ಬಿಚ್ಚಿಟ್ಟಿದ್ದಾರೆ.

ಸಂದರ್ಶನದಲ್ಲಿ ಸ್ಫೋಟಕ ಮಾಹಿತಿ ತೆರೆದಿಟ್ಟ ಮಾಡೆಲ್
ಲಿಜ್ಲಾಝ್ ಜೊತೆ ಫಿಲ್ಮಿಮಂತ್ರಾ ನಡೆಸಿದ ಸಂದರ್ಶನದಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ವಿರಾಟ್ ಕೊಹ್ಲಿ ತನ್ನ ಫೋಟೋ ಲೈಕ್ ಮಾಡಿದ ಬಳಿಕ ಭಾರತದಲ್ಲಿ ನಾನು ಜನಪ್ರಿಯಳಾದೆ. ಮಿಲಿಯನ್ ಫಾಲೋವರ್ಸ್ ಪಡೆದುಕೊಂಡಿದೆ. ಇದೇ ವೇಳೆ ಹಲವು ಸೋಶಿಯಲ್ ಮೀಡಿಯಾ ಚಾನೆಲ್ ಸೇರಿದಂತೆ ಹಲವರು ನನ್ನನ್ನು ಸಂಪರ್ಕಿಸಿದ್ದರು. ಬಳಿಕ ಕೊಹ್ಲಿ ವಿರುದ್ಧ ಮಾತನಾಡುವಂತೆ, ಕೆಟ್ಟದಾಗಿ ಹೇಳುವಂತೆ ಹಣದ ಆಫರ್ ಮಾಡಿದ್ದರು ಎಂದು ಬಹಿರಂಗಪಡಿಸಿದ್ದಾರೆ.
ನಾನೇಕೆ ಹಾಗೆ ಮಾಡಲಿ?
ಕೊಹ್ಲಿ ವಿರುದ್ಧ ಕೆಟ್ಟದಾಗಿ ಹೇಳಬೇಕು, ಕೊಹ್ಲಿ ಹೆಸರು ಕೆಡಿಸಬೇಕು ಎಂದು ನನಗೆ ಸೂಚಿಸಿದ್ದರು. ಇಧಕ್ಕಾಗಿ ಉತ್ತಮ ಮೊತ್ತದ ಆಫರ್ ಕೂಡ ಮಾಡಿದ್ದರು. ಆದರೆ ಕೊಹ್ಲಿ ವಿರುದ್ಧ ನಾನು ಯಾಕೆ ಹಾಗೆ ಮಾಡಲಿ. ಉತ್ತಮ ಕ್ರಿಕೆಟಿಗ ಕೊಹ್ಲಿ. ಅವರ ವಿರುದ್ದ ಇಲ್ಲ ಸಲ್ಲದ ಆರೋಪ ಮಾಡುವ ವ್ಯಕ್ತಿ ನಾನಲ್ಲ. ಸಂಪರ್ಕಿಸದ ವ್ಯಕ್ತಿಗಳಿಗೆ ನಾನು ಖಡಕ್ ಉತ್ತರ ಕೊಟ್ಟಿದ್ದೇನೆ ಎಂದು ಲಿಜ್ಲಾಝ್ ಹೇಳಿದ್ದಾರೆ.
ಕೊಹ್ಲಿ ಮೇಲೆ ಯಾಕೆ ದ್ವೇಷ?
ಹಲವರು ಈ ರೀತಿ ಒತ್ತಾಯ ಮಾಡಿದ್ದರು. ನನಗೆ ಅಚ್ಚರಿಯಾಗಿತ್ತು. ಜನರು ಯಾಕೆ ಒಬ್ಬ ಕ್ರಿಕೆಟಿಗನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ಆತ ದೇಶಕ್ಕಾಗಿ, ತಂಡಕ್ಕಾಗಿ ಉತ್ತಮ ಕೊಡುಗೆ ನೀಡುತ್ತಿದ್ದಾನೆ. ಆತನ ಮೆಚ್ಚಬೇಕು. ಆಟವನ್ನು ಟೀಕಿಸಿದರೂ ಪರ್ವಾಗಿಲ್ಲ, ಆದರೆ ವ್ಯಕ್ತಿಯನ್ನು ಟೀಕಿಸುವುದು ಸರಿಯಲ್ಲ ಎಂದು ಲಿಜ್ಲಾಝ್ ಹೇಳಿದ್ದಾರೆ.
ಕೊಹ್ಲಿ ಲೈಕ್‌ನಿಂದ ನಾನು ಹ್ಯಾಪಿ
ವಿರಾಟ್ ಕೊಹ್ಲಿ ಲೈಕ್ ಒತ್ತಿದ ಕಾರಣ ನಾನು ಜನಪ್ರಿಯತೆ ಹೆಚ್ಚಾಗಿದೆ. ಶ್ರೇಷ್ಠ ಕ್ರಿಕೆಟರ್ ಲೈಕ್‌ನಿಂದ ನಾನು ಒಂದೇ ದಿನದಲ್ಲಿ ಫಾಲೋವರ್ಸ್ ಸಂಖ್ಯಯೆನ್ನು ಹೆಚ್ಚಿಸಿದ್ದು ಮಾತ್ರವಲ್ಲ ವಿಶ್ವದಲ್ಲೇ ಅದರಲ್ಲು ಭಾರತದಲ್ಲಿ ಗುರುತಿಸಿಕೊಂಡೆ. ಇದಕ್ಕಿಂತ ಖುಷಿ ಇನ್ನೇನು ಬೇಕು ಎಂದು ಲಿಜ್ಲಾಝ್ ಹೇಳಿದ್ದಾರೆ.
ಕೊಹ್ಲಿ ಲೈಕ್‌ನಿಂದ ನಾನು ಹ್ಯಾಪಿ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

