ಮುದ್ದು ಸೊಸೆ... ದೋಸ್ತನ ಮಗಳ ಜೊತೆ ಮುದ್ದುಮುದ್ದಾಗಿ ಪೋಸ್ ಕೊಟ್ಟ ಹನುಮಂತ…
ರಿಯಾಲಿಟಿ ಶೋ ಸ್ಟಾರ್ ಹನುಮಂತ ತಮ್ಮ ಖಾಸ ದೋಸ್ತ ಧನರಾಜ್ ಆಚಾರ್ ಅವರ ಮನೆಗೆ ಭೇಟಿ ಕೊಟ್ಟು ಧನರಾಜ್ ಮಗಳು ಪ್ರಸಿದ್ಧಿ ಜೊತೆ ಆಟವಾಡುತ್ತಾ ಸಮಯ ಕಳೆದಿದ್ದಾರೆ.

ಸರಿಗಮಪದಿಂದ ಹಿಡಿದು ಬಿಗ್ ಬಾಸ್ ವರೆಗೂ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಜನಪ್ರಿಯತೆ ಗಳಿಸಿದ ಹಳ್ಳಿ ಹೈದ ಹನುಮಂತ ಲಾಮಣಿ (Hanumanta Lamani) ಬಿಗ್ ಬಾಸ್ ಮೂಲಕ ಪಡೆದುಕೊಂಡ ಹೊಸ ಸ್ನೇಹಿತ ಅಂದ್ರೆ ಅದು ಧನರಾಜ್ ಆಚಾರ್.
ದೋಸ್ತಾ ದೋಸ್ತಾ ಎಂದು ಇಬ್ಬರು ಬಿಗ್ ಬಾಸ್ ನಲ್ಲಿ (Bigg Boss) ನಿಜವಾದ ನಿಷ್ಕಲ್ಮಷ ಸ್ನೇಹಕ್ಕೆ ಮಾದರಿಯಾದರು. ಇಬ್ಬರ ಒಡನಾಟ, ಮಾತು, ಆಟ, ಕಾಮಿಡಿ ಪಂಚ್ ಡೈಲಾಗ್ ಎಲ್ಲವೂ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿತ್ತು. ಇದ್ದರೆ, ಇಂತಹ ಸ್ನೇಹಿತರು ಇರಬೇಕು ಎನ್ನುವಷ್ಟು ಇವರಿಬ್ಬರ ಸ್ನೇಹ ಜನಪ್ರಿಯತೆ ಪಡೆದಿತ್ತು.
ಇದೀಗ ಹನುಮಂತು ದೋಸ್ತಾ ಧನು ಆಚಾರ್ (Dhanraj Achar) ಮನೆಗೆ ತೆರಳಿದ್ದು, ಧನರಾಜ್ ಪುತ್ರಿ ಪ್ರಸಿದ್ಧಿ ಜೊತೆ ಆಟವಾಡುತ್ತಾ ಸಮಯ ಕಳೆದಿದ್ದಾರೆ. ಆ ಫೋಟೊಗಳನ್ನು ಹನುಮಂತ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪ್ರಸಿದ್ಧಿಯನ್ನು ಕೈಯಲ್ಲಿ ಹಿಡಿದು ಆಕೆಯ ಜೊತೆ ಆಟವಾಡುತ್ತಾ ಫೋಟೊಗೆ ಪೋಸ್ ಕೊಟ್ಟಿದ್ದಾರೆ. ಫೋಟೊಗಳ ಜೊತೆಗೆ ಮುದ್ದು ಸೊಸೆ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಫೋಟೊಗಳನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ಹನುಮಂತನಿಗೆ ಪ್ರಶ್ನೆಗಳನ್ನು ಸಹ ಕೇಳಿದ್ದು, ನಿಮ್ಮ ಮದುವೆ ಯಾವಾಗಾ? ನಿಮ್ಮ ಕೈಯಲ್ಲೂ ಈ ರೀತಿ ಮಗು ಹಿಡಿಯೋದು ಯಾವಾಗ? ನಿಮ್ಮ ಮಗು ದೋಸ್ತನ ಕೈಯಲ್ಲಿ ಹೀಗೆ ಆಡೋದು ಯಾವಾಗ ಎಂದು ಪ್ರಶ್ನಿಸಿದ್ದಾರೆ.
ಇನ್ನು ಹನುಮಂತ ಧನರಾಜ್ ಆಚಾರ್ ಹಾಗೂ ಅವರ ಪತ್ನಿ ಪ್ರಜ್ಞಾ ಜೊತೆಗೂ ಪೋಸ್ ಕೊಟ್ಟಿದ್ದಾರೆ. ದೋಸ್ತಾಗಳು ಇಬ್ಬರು ಜೊತೆಯಾಗಿ ಸೇರಿರೋದನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಇಬ್ಬರ ಸ್ನೇಹ ಯಾವಾಗ್ಲೂ ಹೀಗೆ ಇರಲಿ ಎಂದು ಆಶಿಸಿದ್ದಾರೆ.
ಸದ್ಯ ಹನುಮಂತ ಹಾಗೂ ಧನು ಆಚಾರ್ ಮಗಳು ಪ್ರಸಿದ್ಧಿ ಫೋಟೊ ಶೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಪ್ರಸಿದ್ಧಿ ಕೂಡ ಯಾವುದೇ ಹಠ ಮಾಡದೇ ಆಟವಾಡುತ್ತಾ. ನಗುತ್ತಾ ಎಂಜಾಯ್ ಮಾಡ್ತಿದ್ದಾಳೆ. ಎರಡು ಮುಗ್ಧ ಜೀವಗಳಿಗೆ ಜನ ಸೋಶೊಯಲ್ ಮೀಡೀಯಾದಲ್ಲಿ ಪ್ರೀತಿಯನ್ನು ಹರಿಸಿದ್ದಾರೆ.