ಅಮೃತಧಾರೆಯಲ್ಲಿ ಪ್ರೀತಿ ಹೇಳಿಕೊಂಡ ಜೀವ, ನಿಜ ಜೀವನದಲ್ಲಿ ಹಿಂಗಾಗುತ್ತಾ?
ನಡು ವಯಸ್ಸಿನ ಎರಡು ಜೀವಗಳು ಯಾವುದೋ ಒತ್ತಡಕ್ಕೆ ಮಣಿದು, ಸಪ್ತಪದಿ ತುಳಿದು ಅಡ್ಜಸ್ಟ್‌ಮೆಂಟ್ ಸಂಬಂಧದ ಕಥೆ ಹೇಳುವ ಸೀರಿಯಲ್ ಅಮೃತಧಾರೆ. ಇದೀಗ ಇದರಲ್ಲಿ ಎರಡು ಜೀವಗಳು ತಮ್ಮ ಪ್ರೀತಿ ಹೇಳಿ ಕೊಂಡಿದೆ.
Amruthadhare Serial
ಗಂಡನ ಮುಂದೆ ಗುಲಾಬಿ ಹಿಡಿದು, ನನ್ನ ಜೀವನಕ್ಕೆ ನಿಮ್ಮ ಆಗಮನವಾಗಿ ಚಂದ್ರನಿಗೆ ಸೂರ್ಯನ ಕಿರಣ ಬಿದ್ದು, ಪ್ರಜ್ವಲಿಸಿ ಬಿಡುವ ಶಕ್ತಿ ಬಂದ ಹಾಗೆ ಆಯ್ತು, ನಿಮ್ಮ ಸಾಂಗತ್ಯ ಪಡೆದ ನಾನೇ ಪುಣ್ಯವಂತೆ. ಅದು ಒಂದು ಜನ್ಮದ್ದಲ್ಲ. ಏಳೇಳು ಜನ್ಮದ ಇಂಟರೆಸ್ಟ್ ಸಮೇತ ಸಿಕ್ಕಿರುವ ಪುಣ್ಯ. ನಾನು ನಿಮ್ಮನ್ನು ಎಲ್ಲರಗಿಂತ ಹೆಚ್ಚಾಗಿ ಪ್ರೀತಿಸುತ್ತೇನೆ. ಹುಚ್ಚಿ ತರ ಪ್ರೀತಿಸುತ್ತೇನೆ. ಕೊನೆವರೆಗೂ ಹುಚ್ಚಿ ತರಾನೇ ಪ್ರೀತಿಸುತ್ತಾನೇ ಇರುತ್ತೆೇನೆ ಎಂದು ಕೆಂಗುಲಾಬಿ ಹಿಡಿದು, ಗೌತಮ್ ಮುಂದೆ ಭೂಮಿಕಾ ಪ್ರಪೋಸ್ ಮಾಡಿದಾಗ ಎಂಥ ಅನ್ ರೊಮ್ಯಾಂಟಿಕ್ ಮಂದಿಗಾದರೂ ವಾವ್ ಎನಿಸಿದ್ದು ಸುಳ್ಳಲ್ಲ.
ಹೆಣ್ಣು ಪ್ರೀತಿ ಹೇಗೋ ಎಕ್ಸ್‌ಪ್ರೆಸ್ ಮಾಡಿದಳು. ಅದೂ ಟೀಚರ್ ಆಗಿದ್ದ ಭೂಮಿಕಾ ಮಾಡಿದ ಪ್ರೇಮ ನೀವೇದನೆ ಸೀರಿಯಲ್ ದಿಕ್ಕನ್ನೇ ಬದಲಿಸುವಂತೆ ಮಾಡಿದ್ದು ಸುಳ್ಳಲ್ಲ. ಅದಕ್ಕೊಂದು ಚೆಂದದ ಸ್ಕ್ರಿಪ್ಟ್ ಬರೆದು, ತಮ್ಮ ಪ್ರತಿಭೆ ತೋರಿದ್ದಾರೆ ಕಥೆ ಬರೆದೋರು. ಆದರೆ, ನಿಜ ಜೀವನದಲ್ಲಿ ಹೀಗೂ ಆಗುತ್ತಾ? ಭೂಮಿಕಾಳ ಪ್ರೀತಿ ನಿವೇದನೆಗೆ ಸ್ವಲ್ಪವೂ ಅಹಂ ತೋರದ ಗಂಡು ಜೀವ ಗೌತಮ್ ದಿವಾನ್ ಅದನ್ನು ಒಪ್ಪಿ, ಮಡದಿಯನ್ನು ಅಪ್ಪಿ ಮುದ್ದಾಡಿದ್ದ ಸೀನ್‌ಗೆ ವೀಕ್ಷಕರು ಬಹಳ ದಿನದಿಂದ ಕಾಯುತ್ತಿದ್ದು ಸುಳ್ಳಲ್ಲ. ಸೀರಿಯಲ್ ಕಥೆಗೆ ರೊಮ್ಯಾಂಟಿಕ್ ಡೈಲಾಗ್ಸ್ ಪರ್ಫೆಕ್ಟ್ ಆಗಿ ಸೂಟ್ ಆಗಿದವು.
ನಿಜ ಜೀವನದಲ್ಲಿ ಹೇಗೆ?
ಆದರೆ, ನಿಜ ಜೀವನದಲ್ಲಿ ಈ ಸೀರಿಯಲ್‌ನಲ್ಲಿ ಏನಾಯಿತೋ, ಅದು ಆಗುವುದೇ ಇಲ್ಲ ಎನ್ನುವುದು ದುರಂತ. ಇಬ್ಬರಲ್ಲೂ ಪ್ರೀತಿ ಇರುತ್ತೆ. ಅಕ್ಕರೆ ತೋರುತ್ತಿರುತ್ತಾರೆ. ಆದರೂ, ಯಾವಾಗಲೂ ಮಾಡಿದ ತಪ್ಪಿಗೆ ವರ್ಷಗಳು ಕಳೆದರೂ ನೋವು ಅನುಭವಿಸುತ್ತಿರುತ್ತಾರೆ. ಒಮ್ಮೆ ಮಾಡಿದ ಮಾತಿಗೆ ಕ್ಷಮೆ, ಮತ್ತೊಮ್ಮೆ ಮನಲದ್ಲಿರೋ ಪ್ರೀತಿಯನ್ನು ಎಕ್ಸ್‌ಪ್ರೆಸ್ ಮಾಡಿದರೆ ಅನೇಕ ಸಮಸ್ಯೆಗಳು ದೂರವಾಗುವುದರಲ್ಲಿ ಅನುಮಾನವೇ ಇರೋಲ್ಲ.
ಅದರಲ್ಲಿಯೂ ಅಕಸ್ಮಾತ್ ಗಂಡನಾದವನು ಪ್ರೀತಿಯಿಂದ ಮಾತನಾಡಿಸಿದರೆ ಸಾಕು, ನಿಮಗೆ ಪ್ರೀತಿ ಇದ್ದರೆ ಇವತ್ತೊಂದಿನ ಅಡುಗೆ ಮಾಡಿ ಹಾಕಿ ಎನ್ನಬಹುದೇನೋ ಭಾರತೀಯ ಹೆಂಗಳೆಯರು. ಅದು ಬಿಟ್ಟು, ಗಂಡನ ಮಾತನ್ನು ಅಕ್ಸೆಪ್ಟ್ ಮಾಡಿಕೊಂಡು, ತಮ್ಮ ಒಲವನ್ನು ವ್ಯಕ್ತಪಡಿಸುವಂಥ ಪ್ರಸಂಗಗಳು ಕ್ರಿಯೇಟ್ ಆಗುವುದೇ ಸುಳ್ಳು.
ಮನಸ್ಸಿನಲ್ಲಿಯೇ ಮಂಡಿಗೆ ತಿನ್ನೋ ದಂಪತಿ ಆಗಾಗ ತಮ್ಮ ಪ್ರೀತಿಯನ್ನು ಹೇಳಿಕೊಳ್ಳುವುದು ಆರೋಗ್ಯಕರ ಸಂಬಂಧಕ್ಕೆ ಅನಿವಾರ್ಯ. ಮನಸ್ಸಿನಲ್ಲಿ ಇಟ್ಟುಕೊಂಡ ನೋವು, ದುಃಖ, ಖುಷಿಯನ್ನು ಆಗಾಗ ಎಕ್ಸ್‌ಪ್ರೆಸ್ ಮಾಡಿಕೊಂಡರೆ ದಾಂಪತ್ಯಕ್ಕೊಂದು ಹೊಸ ಮುನ್ನುಡಿ ಬರೀಬಹುದು. ಈ ಸೀರಿಯಲ್ ಲೆವೆಲ್‌ಗೆ ಅಲ್ಲದೇ ಹೋದರೂ, ಪ್ರೀತಿಯನ್ನ ಹೇಳಿಕೊಳ್ಳಲು, ಒಪ್ಪಿಕೊಳ್ಳಲು ಆಗುತ್ತಿರುವ ಅಡ್ಡಿಗೆ ನಡೆದ ಘಟನೆ ಬಗ್ಗೆಯೊಂದು ಕ್ಷಮಾಪಣೆಯೋ ಅಥವಾ ಖುಷಿಯೋ, ಯಾವ ಫೀಲಿಂಗ್ ಇರುತ್ತೋ ಅದನ್ನು ಮನಬಿಚ್ಚಿ ಹೇಳಿಕೊಂಡರ ಕಳೆದು ಹೋದ ಕ್ಷಣವನ್ನು ಮರಳಿ ತರಲಾಗದಿದ್ದರೂ ಮುಂಬರುವ ಜೀವನವನ್ನು ಚೆನ್ನಾಗಿ ಇರುವಂತೆ ಮಾಡಿಕೊಳ್ಳಬಹುದು.
ಗಂಡನೋ, ಹೆಂಡತಿಯೋ ಮಾಡಿದ ತಪ್ಪನ್ನು ಹೇಳಿಕೊಳ್ಳಿ. ಅಕಸ್ಮಾತ್ ಒಬ್ಬರು ಮಾಡಿದ ತಪ್ಪು ಮತ್ತೊಬ್ಬರಿಗೆ ದೊಡ್ಡ ವಿಷಯವೇ ಆಗದಿರಬಹುದು. ಆದರೆ, ಅದೇ ಮನಸಸ್ಲಲ್ಲಿ ಹುತ್ತದಂತೆ ಬೆಳೆದು ಬಾಳಿನ ಮಧುರ ಕ್ಷಣವನ್ನು ಎಂಜಾಯ್ ಮಾಡದಂತೆ ಡಿಸ್ಬರ್ಟ್ ಮಾಡುತ್ತಿರುತ್ತದೆ. ಅಂಥ ಘಟನೆಗಳಿದ್ದರೆ ಹೇಳಿ ಹಗುರಾಗಿ, ಮುಂದೆ ಅಂತ ತಪ್ಪಾಗದಂತೆ ಎಚ್ಚರವಹಿಸಿ. ಒಬ್ಬರಿಗೊಬ್ಬರೂ ಯಾವಾಗ ಪ್ರೀತಿ, ಗೌರವ ತೋರುತ್ತಾರೋ ಆ ಸಂಬಂಧ ಹಳಸುವುದಿಲ್ಲ. ಅಮೃತಧಾರೆ ಸೀರಿಯಲ್‌ನಲ್ಲಿ ನೂರಾರು ಮಂದಿ ಸಂಬಂಧ ಕೆಡಿಸಲು ಕಾಯುತ್ತಿದ್ದರೂ, ಬಂಧ ಮತ್ತಷ್ಟು ಗಟ್ಟಿಯಾಗುವಂಥೆ ನಿಜ ಜೀವನದಲ್ಲೂ ಅಂಡರ್‌ಸ್ಟಾಂಡಿಗ್ ಮಾತ್ರ ಕಡಿಮೆ ಆಗೋದೇ ಇಲ್ಲ.
ಸೀರಿಯಲ್‌ನಲ್ಲಿ ಎಲ್ಲವೂ ಸ್ಕ್ರಿಪ್ಟೆಡ್. ಅಂದು ಕೊಂಡಂತೆಯೇ ಆಗುತ್ತದೆ ಬಿಡಿ ಅನ್ನಬೇಡಿ. ಕೆಲವೊಂದು ಸಿಂಪಲ್ ಸಂಬಂಧದ ಟ್ರಿಕ್ಸ್ ಅನ್ನು ನಿಜ ಜೀವನವನದಲ್ಲೂ ಅಳವಡಿಸಿಕೊಂಡರೆ ಬದುಕು ವೃಂದಾವನ ಆಗುವುದರಲ್ಲಿ ಅನುಮಾನವೇ ಇಲ್ಲ ಬಿಡಿ. ಪ್ರೀತಿ-ಪ್ರೇಮವನ್ನು ಎಕ್ಸ್‌ಪ್ರೆಸ್ ಮಾಡಿಕೊಳ್ಳಿ, ಅತ್ಯುತ್ತಮ ದಾಂಪತ್ಯ ಗೀತೆಗೆ ಮುನ್ನುಡಿ ಹಾಡಿರಿ. ಲಕ್.