ಒಟಿಟಿಯಲ್ಲಿ ದೇಶಾದ್ಯಂತ ಟ್ರೆಂಡ್ ಸೃಷ್ಟಿಸಿದೆ ದಿಗಂತ್ ಸಿನಿಮಾ… ಮಿಸ್ ಮಾಡದೆ ನೋಡಿ
ದಿಗಂತ್ ಅಭಿನಯದ ‘ಎಡಗೈಯೇ ಅಪಘಾತಕ್ಕೆ ಕಾರಣ’ ಎನ್ನುವ ಸಿನಿಮಾ ಒಟಿಟಿಯಲ್ಲಿ ಸದ್ದು ಮಾಡುತ್ತಿದೆ. ನೀವು ಇಲ್ಲಿವರೆಗೆ ಚಿತ್ರ ನೋಡದೇ ಇದ್ದರೆ ಇವತ್ತೆ ನೋಡಿ.

ಓಟಿಟಿಯಲ್ಲಿ (OTT) ಯಾವ ಸಿನಿಮಾ ನೋಡೋದು ಎಂದು ಯೋಚನೆ ಮಾಡುತ್ತಿದ್ದೀರಾ? ಹಾಗಿದ್ರೆ ನಿಮಗಾಗಿ ಒಂದು ಕನ್ನಡ ಸಿನಿಮಾ ರೆಫರ್ ಮಾಡ್ತಿದ್ದೀವಿ. ಈ ಸಿನಿಮಾ ಸದ್ಯ ಒಟಿಟಿಯಲ್ಲಿ ದೇಶಾದ್ಯಂತ ಸದ್ದು ಮಾಡುತ್ತಿದೆ.
ಯಾವುದು ಆ ಸಿನಿಮಾ ಅಂತ ಯೋಚನೆ ಮಾಡುತ್ತಿದ್ದೀರಾ? ಅದು ದಿಗಂತ ಅಭಿನಯದ ಎಡಗೈ ಅಪಘಾತಕ್ಕೆ ಕಾರಣ ಎನ್ನುವ ಕಾಮಿಡಿ ಸಿನಿಮಾ. ನೀವು ದಿಗಂತ್ (Diganth) ನಟನೆಗೆ ಫ್ಯಾನ್ ಆಗಿದ್ರೆ ಈ ಸಿನಿಮಾ ಮಿಸ್ ಮಾಡದೆ ನೋಡಿ.
"ಎಡಗೈಯೇ ಅಪಘಾತಕ್ಕೆ ಕಾರಣ" (Edagaiye paghatakke Karana) ಇದು ಎಡಗೈ ವ್ಯಕ್ತಿಗಳು ಅಂದರೆ ಲೆಫ್ಟ್ ಹಾಂಡ್ ವ್ಯಕ್ತಿಗಳು ಎದುರಿಸುವ ಸವಾಲುಗಳು ಮತ್ತು ದೈನಂದಿನ ಜೀವನದಲ್ಲಿ ಏನೆಲ್ಲಾ ಕಷ್ಟಗಳನ್ನು ಎದುರಿಸುತ್ತಾರೆ ಅನ್ನೋದನ್ನು ತಿಳಿಸುತ್ತದೆ.
ಚಿತ್ರದಲ್ಲಿ, ನಾಯಕ ಲೋಹಿತ್, ಎಡಗೈ ವ್ಯಕ್ತಿಯಾಗಿ, ಸಮಾಜದಲ್ಲಿ ಎದುರಿಸುವ ಸಮಸ್ಯೆಗಳನ್ನು ಮತ್ತು ಅಪಘಾತದ ಸನ್ನಿವೇಶಗಳನ್ನು ಎದುರಿಸುತ್ತಾನೆ. ಚಿತ್ರದ ಶೀರ್ಷಿಕೆಯು ಸೂಚಿಸುವಂತೆ, ಎಡಗೈಯವರು ಅನುಭವಿಸುವ ಸಮಸ್ಯೆಗಳು ಮತ್ತು ಸವಾಲುಗಳನ್ನು ಆಧರಿಸಿ ಚಿತ್ರದ ಕಥೆ ಹೆಣೆಯಲಾಗಿದೆ.
ಇದೊಂದು ಕ್ರೈಂ ಥ್ರಿಲ್ಲರ್ (crime thriller) ಕೂಡ ಆಗಿದ್ದು, ಕಾಮಿಡಿ ಕೂಡ ಇದೆ. ಹಾಗಾಗಿ ನೀವು ಖಂಡಿತವಾಗಿಯೂ ಸಿನಿಮಾವನ್ನು ಎಂಜಾಯ್ ಮಾಡ್ತೀರಿ. ಒಟಿಟಿಯಲ್ಲಿ ಇದಕ್ಕೆ ನಾಲ್ಕು ಸ್ಟಾರ್ ಗಳು ಸಹ ಸಿಕ್ಕಿವೆ.
ಇನ್ನು ಈ ಸಿನಿಮಾದಲ್ಲಿ ದೂದ್ ಪೇಡಾ ದಿಗಂತ್, ನಿಧಿ ಸುಬ್ಬಯ್ಯ (Nidhi Subbaiah), ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳೆ, ಧನು ಹರ್ಷ, ರಾಧಿಕಾ ನಾರಾಯಣ್ ಸೇರಿದಂತೆ ಹಲವು ನಟರು ನಟಿಸಿದ್ದಾರೆ.. ಈ ಸಿನಿಮಾವನ್ನು ಸಮರ್ಥ್ ಕಡಕೋಳ್ ನಿರ್ದೇಶಿಸಿ, ನಿರ್ಮಾಣ ಕೂಡ ಮಾಡಿದ್ದಾರೆ