- Home
- Entertainment
- TV Talk
- ಮುದ್ದಾದ ಮೂರು ಮಕ್ಕಳ ಜೊತೆಗೆ ವಿದೇಶಕ್ಕೆ ಹೋಗಿ ಅಲ್ಲೇ ಸೆಟಲ್ ಆದ ಪತ್ನಿ; ಏಕಾಂಗಿಯಾದ ಕಿರುತೆರೆ ನಟ
ಮುದ್ದಾದ ಮೂರು ಮಕ್ಕಳ ಜೊತೆಗೆ ವಿದೇಶಕ್ಕೆ ಹೋಗಿ ಅಲ್ಲೇ ಸೆಟಲ್ ಆದ ಪತ್ನಿ; ಏಕಾಂಗಿಯಾದ ಕಿರುತೆರೆ ನಟ
Actor Karanvir Bohra Wife Teejay Sidhu: ನಟ ಕರಣ್ ವೀರ್ ಬೊಹ್ರಾ, ಅವರ ಪತ್ನಿ ತೀಜಯ್ ಸಿಧು ಸದ್ಯ ದೂರ ಇರುವುದು ಸಾಕಷ್ಟು ಅನುಮಾನ ಮೂಡಿಸಿದೆ. ಬಾಲಿವುಡ್‌ನಲ್ಲಿ ಧಾರಾವಾಹಿ, ಸಿನಿಮಾ ಮಾಡುತ್ತಿರುವ ಕರಣ್ ವೀರ್ ಬೊಹ್ರಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪತ್ನಿಯನ್ನು ಕೂಡ ಫಾಲೋ ಮಾಡ್ತಿಲ್ಲ.

ಮೂವರು ಮಕ್ಕಳ ಜೊತೆಗೆ ಕೆನಡಾದಲ್ಲಿ ನೆಲೆಸಿರೋ ಪತ್ನಿ
ಇವರಿಬ್ಬರು ದೂರ ಇರೋದು ವೈಯಕ್ತಿಕ ಭಿನ್ನಾಭಿಪ್ರಾಯದಿಂದಲ್ಲ, ಬದಲಿಗೆ ಮೂವರು ಮಕ್ಕಳ ಶಿಕ್ಷಣ, ಭವಿಷ್ಯದ ದೃಷ್ಟಿಯಿಂದ ಎನ್ನಲಾಗಿತ್ತು. ಹೌದು, ಕೆನಡಾದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಬೇಕು ಎನ್ನುವ ಕಾರಣಕ್ಕೆ ತೀಜಯ್ ಅವರು ಮೂವರು ಮಕ್ಕಳ ಜೊತೆಗೆ ಕೆನಡಾದಲ್ಲಿದ್ದಾರೆ, ಅಲ್ಲಿ ಅವರ ತಾಯಿ ಮನೆ ಇದೆ ಎನ್ನಲಾಗಿದೆ.
ಮೂವರು ಮಕ್ಕಳಿದ್ದಾರೆ
ಕರಣ್ ವೀರ್ ಬೊಹ್ರಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಮೂವರು ಮಕ್ಕಳ ಖಾತೆಯನ್ನು ಫಾಲೋ ಮಾಡ್ತಿದ್ದು, ಪತ್ನಿ ಖಾತೆ ಫಾಲೋ ಮಾಡ್ತಿಲ್ಲ. ಬೆಲ್ಲಾ, ವಿಯೆನ್ನಾ, ವನೆಸ್ಸಾ ಎಂಬ ಮಕ್ಕಳಿದ್ದಾರೆ.
ಕೆನಡಾದಲ್ಲಿರೋ ಮಕ್ಕಳು
ಕೆನಡಾದಲ್ಲಿ ತೀಜಯ್ ಫ್ಯಾಮಿಲಿ ಇರುವುದರಿಂದ, ಅಲ್ಲಿ ಆರಾಮಾಗಿ ಮೂವರು ಸಣ್ಣ ಮಕ್ಕಳನ್ನು ಸಂಭಾಳಿಸಬಹುದು ಎನ್ನಲಾಗಿದೆ. ಮಕ್ಕಳನ್ನು ಮಿಸ್ ಮಾಡಿಕೊಳ್ತಿರೋ ಬಗ್ಗೆ ಕರಣ್ ಯಾವುದೇ ಪೋಸ್ಟ್ ಹಂಚಿಕೊಂಡಿಲ್ಲ. ಅಂದಹಾಗೆ ತೀಜಯ್ ಕೂಡ ಪತಿ ಬಗ್ಗೆ ಪೋಸ್ಟ್ ಮಾಡ್ತಿಲ್ಲ.
ಮಕ್ಕಳಿಂದ ದೂರ ಇರೋ ನಟ
ಮಕ್ಕಳನ್ನು ತುಂಬ ಇಷ್ಟಪಡೋ ಕರಣ್‌ವೀರ್ ಬೊಹ್ರಾ ಅವರಿಗೆ ಈಗ ಮೂವರು ಮಕ್ಕಳಿಂದ ದೂರ ಇರೋದು ಮಾತ್ರ ಶಿಕ್ಷೆಯೇ ಸರಿ. ಇನ್ನು ಇವರ ಮದುವೆ ಜೀವನ ಏನಾಗಿದೆ ಎಂದು ಅವರೇ ಹೇಳಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

