- Home
- Entertainment
- TV Talk
- Kwatle Kitchen 2 ಶೋನಿಂದ ಏಕಾಏಕಿ ನಟಿ ಶ್ರುತಿ, ನಿರೂಪಕಿ ಅನುಪಮಾ ಗೌಡ ಹೊರಬಿದ್ದಿದ್ದೇಕೆ?
Kwatle Kitchen 2 ಶೋನಿಂದ ಏಕಾಏಕಿ ನಟಿ ಶ್ರುತಿ, ನಿರೂಪಕಿ ಅನುಪಮಾ ಗೌಡ ಹೊರಬಿದ್ದಿದ್ದೇಕೆ?
kwatle kitchen show: ‘ಕ್ವಾಟ್ಲೆ ಕಿಚನ್ 2’ ಗ್ಯ್ರಾಂಡ್ ಲಾಂಚ್ ಆಗಲಿದೆ. ಶನಿವಾರ, ಭಾನುವಾರ ರಾತ್ರಿ 9 ಗಂಟೆ ಪ್ರಸಾರ ಆಗಲಿದೆ. ‘ಕ್ವಾಟ್ಲೆ ಕಿಚನ್ 1’ ಶೋನಲ್ಲಿ ನಟಿ ಶ್ರುತಿ ಅವರು ಜಡ್ಜ್ ಆಗಿ, ಅನುಪಮಾ ಗೌಡ ಅವರು ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. ಈಗ ಇವರಿಬ್ಬರೂ ಹೊರಗಡೆ ಬಂದಿದ್ದಾರೆ. ಯಾಕೆ?

ಸ್ಪರ್ಧಿಗಳು ಯಾರು?
ಪವಿತ್ರ ಬಂಧನ ಧಾರಾವಾಹಿ ನಟ ಸೂರಜ್ ಸಿಂಗ್, ಮಹಾನಟಿ ಖ್ಯಾತಿಯ ಅಮ್ರಿಟಾ, ಬಿಗ್ ಬಾಸ್ ಕರಿಬಸಪ್ಪ, ಗಂಧದ ಗುಡಿ ಧಾರಾವಾಹಿ ನಟ ಭವಿಷ್ ಗೌಡ, ವಾಣಿ, ರಕ್ಷಿತಾ ಶೆಟ್ಟಿ, ತುಕಾಲಿ ಸ್ಟಾರ್ ಸಂತು, ಟ್ಯಾಲೆಂಟೆಡ್ ಪ್ರಶಾಂತ್, ಕಾಮಿಡಿ ಕಿಲಾಡಿಗಳು ಸೂರಜ್, ಹನುಮಂತ ಲಮಾಣಿ ಕೂಡ ಸ್ಪರ್ಧಿಗಳು.
ಹೊಸಬರ ಆಗಮನ
ಇಷ್ಟು ದಿನಗಳ ಕಾಲ ಅನುಪಮಾ ಗೌಡ ಅವರು ಹೆಚ್ಚಾಗಿ ಕಲರ್ಸ್ ಕನ್ನಡ ವಾಹಿನಿಯ ಶೋಗಳನ್ನು ನಿರೂಪಣೆ ಮಾಡುತ್ತಿದ್ದರು. ಶ್ರುತಿ ಅವರು ಜಡ್ಡ್ ಆಗಿದ್ದರು. ಈಗ ಭಾಗ್ಯಲಕ್ಷ್ಮೀ ಧಾರಾವಾಹಿ ನಟಿ ಸುಷ್ಮಾ ರಾಜ್ ಅವರು ನಿರೂಪಕಿಯಾಗಿದ್ದು, ಮೇಘನಾ ರಾಜ್ ಕೂಡ ಜಡ್ಜ್ ಆಗಿದ್ದಾರೆ.
ಕಾರಣ ಏನು?
ಏಕಾಏಕಿ ಜಡ್ಜ್ ಹಾಗೂ ನಿರೂಪಕರು ಬದಲಾವಣೆ ಆಗಿರೋದು ಆಶ್ಚರ್ಯ ತಂದಿದೆ. ಇದಕ್ಕೂ ಮುನ್ನ ನಟಿ ತಾರಾ ಅವರು ಕೂಡ ಕೆಲ ಶೋಗಳ ಜಡ್ಜ್ ಆಗಿದ್ದರು. ಇದಕ್ಕೆ ವೈಯಕ್ತಿಕ ಕಾರಣ ಇದೆಯಾ? ವಾಹಿನಿ ಕಾರಣವೇ ಎನ್ನೋದು ಬಯಲಾಗಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

