ಬಟ್ಟೆ ಸರಿಯಾಗಿಲ್ಲ ಅಂತ ಜನ ಬೈಯುತ್ತಿದ್ದಾರೆ; 'ಕನ್ನಡತಿ' ಆರೋಹಿ ಬೇಸರ
ಎಲ್ಲಿದ್ದಾರೆ ಕನ್ನಡತಿ ಸಾನ್ಯಾ? ನೆಗೆಟಿವ್ ಮತ್ತು ಪಾಸಿಟಿವ್ ಪಾತ್ರಗಳ ಬಗ್ಗೆ ನಟಿ ಆರೋಹಿ ನೈನಾ ಮಾತು

'ಕಿರುತೆರೆಯಲ್ಲಿ ನೆಗೆಟಿವ್ ಮತ್ತು ಪಾಸಿಟಿವ್ ಪಾತ್ರವನ್ನು ಒಂದೇ ರೀತಿ ನೋಡಬೇಕು. ಕಲಾವಿದರಾಗಿ ಪಾಸಿಟಿವ್ ನೆಗೆಟಿವ್ ಬಗ್ಗೆ ಯೋಚನೆ ಮಾಡಬಾರದು' ಎಂದು ಆರೋಹಿ ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ಪಾತ್ರಕ್ಕೆ ಏನೆಲ್ಲಾ ಅಗತ್ಯವಿದೆ ಅದರ ಮೇಲೆ ನಮ್ಮ ಗಮನವಿರಬೇಕು ನಮ್ಮನ್ನು ಜಡ್ಜ್ ಮಾಡುವುದಕ್ಕೆ ವೀಕ್ಷಕರಿದ್ದಾರೆ. ಪಾಸಿಟಿವ್ ಕ್ಯಾರೆಕ್ಟರ್‌ಗಳಿಗೆ ನಮ್ಮನ್ನು ಹೊಗಳುತ್ತಿದ್ದಾರೆ
ಅಂದ್ರೆ ಖುಷಿಯಾಗುತ್ತದೆ ಏಕೆಂದರೆ ಪಾಸಿಟಿವ್ ಪಾತ್ರಗಳಿಗೆ ಮೆಚ್ಚುಗೆ ಅಗತ್ಯವಿದೆ ಅದೇ ನೆಗೆಟಿವ್ ಪಾತ್ರಕ್ಕೆ ಬೈಗುಳ ಅಗತ್ಯವಿದೆ ಚೆನ್ನಾಗಿ ಬೈತಿದ್ದಾರೆ ಅಂದ್ಮೇಲೆ ಕರೆಕ್ಟ್ ಆಗಿ ಮಾಡುತ್ತಿದ್ದೀವಿ ಎಂದು ಅರ್ಥ.
'ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಇನ್ನು ಬಂದಿಲ್ಲ ಬಂದ್ರೆ ಮನಸ್ಸಾರೆ ಒಪ್ಪಿಕೊಳ್ಳುವೆ. ಖಂಡಿತ ಕಿರುತೆರೆಗಿಂತ ಹೆಚ್ಚಿನ ಶ್ರಮ ಸಿನಿಮಾ ಮಾಡಲು ಅಗತ್ಯವಿದೆ ತುಂಬಾ ಯೋಚನೆ ಮಾಡಿ ಹೆಜ್ಜೆ ಇಡಬೇಕು.
'ಏನು ಮಾಡಬೇಕು ಏನು ಮಾಡಬಹುದು ಎಂದು ಇನ್ನು ಯೋಚಿಸುತ್ತಿರುವೆ. ಸಾಫ್ಟ್ ನೇಚರ್ ಕ್ಯಾರೆಕ್ಟರ್‌ನಿಂದ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ನನ್ನನ್ನು ವೀಕ್ಷಕರು ತುಂಬಾ ಬೇಗ ಒಪ್ಪಿಕೊಂಡಿದ್ದಾರೆ'
'ನನ್ನ ವಿಡಿಯೋ ಮತ್ತು ಪೋಸ್ಟ್‌ಗಳಿಗೆ ಸಾಕಷ್ಟು ಕಾಮೆಂಟ್‌ಗಳು ಬರುತ್ತದೆ ಅದರೆ ನನ್ನನ್ನು ನೇರವಾಗಿ ಭೇಟಿ ಮಾಡಿದಾಗ ಹೂ ಮಳೆ ಧಾರಾವಾಹಿಯಲ್ಲಿ ಒಂದು ರೀತಿ ನೋಡಿದ್ದೀವಿ ಕನ್ನಡತಿಯಲ್ಲಿ ಒಂದು ರೀತಿ ನೋಡಿದ್ದೀನಿ ಎಂದು ಹೇಳಿದಾಗ ಖುಷಿಯಾಗುತ್ತದೆ.
'ಮೊದಲೇ ಪಾಸಿಟಿವ್ ಪಾತ್ರ ಮಾಡಿದಾಗ ನೆಗೆಟಿವ್ ಪಾತ್ರಗಳನ್ನು ಆಫರ್ ಮಾಡುವುದಕ್ಕೆ ಯೋಚನೆ ಮಾಡುತ್ತಾರೆ. ಕನ್ನಡತಿ ಧಾರಾವಾಹಿಯಲ್ಲಿ ಸಾನ್ಯಾ ಪಾತ್ರ ಮಾಡಿದಾಗ ಬಂದಿದ್ದು ನೆಗೆಟಿವ್ ಕಾಮೆಂಟ್.
ನನ್ನ ನಟನೆ ಬಗ್ಗೆ ಮೊದಲು ಬಂದ ನೆಗೆಟಿವ್ ಕಾಮೆಂಟ್ ಅಥವಾ ಸಲಹೆ ಅಂದ್ರೆ ಬಟ್ಟೆ ಸರಿಯಾಗಿ ಧರಿಸಬೇಕು ಎಂದು. ಹಿಂದೆ ಮಾಡುತ್ತಿದ್ದವರ ನಟನೆ ಮಾತ್ರ ನೋಡಿದ್ದರೆ ಆನಂತರ ಕ್ಯಾರೆಕ್ಟ್ ಲುಕ್ ಬಗ್ಗೆ ತಿಳಿದುಕೊಂಡು ಬದಲಾಯಿಸಿಕೊಂಡೆ ಎಂದು ಸಾನ್ಯಾ ಹೇಳಿದ್ದಾರೆ.