'ಹೂ ಮಳೆ' ಅರೋಹಿ ನೈನಾ ಸಖತ್ ಮಾಡ್ರನ್; ಎಲ್ಲೋದ್ರಿ ಲಹರಿ ಅತ್ತಿಗೆ?
First Published Feb 20, 2021, 4:12 PM IST
ಹೂ ಮಳೆ ಧಾರಾವಾಹಿಯಲ್ಲಿ ಲಹರಿ ಅತ್ತಿಗೆ ಪಾತ್ರಧಾರಿ ಅರೋಹಿ ನೈನಾ ಇತ್ತೀಚಿಗೆ ಕಾಣಿಸಿಕೊಳ್ಳುತ್ತಿಲ್ಲವೆಂದು ನೆಟ್ಟಿಗರು ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ.
ಫೋಟೋಕೃಪೆ: ಅರೋಹಿ ಇನ್‌ಸ್ಟಾಗ್ರಾಂ

ಕಲರ್ಸ್ ಕನ್ನಡ ಧಾರಾವಾಹಿಯಲ್ಲಿ ಪ್ರಸಾರವಾಗುತ್ತಿರುವ ಹೂ ಮಳೆ ಧಾರಾವಾಹಿ.

ಕಾರ್ಪೋರೇಟ್ ಕಾವೇರಿ ಸೊಸೆ, ಲಹರಿ ಅತ್ತಿಗೆ ಪಾತ್ರದಲ್ಲಿ ಮಿಂಚುತ್ತಿರುವ ಅರೋಹಿ ನೈನಾ.

ಲಹರಿ ಹಾಗೂ ಅತ್ತಿಗೆ ಆನ್‌ಸ್ಕ್ರೀನ್ ಕಾಂಬಿನೇಷನ್ ತುಂಬಾನೇ ಹಿಟ್ ಅಗಿತ್ತು.

ಕಾರ್ಪೋರೇಟ್ ಕಾವೇರಿ ಪ್ರಮುಖ ಪಾತ್ರಧಾರಿ ಆದರೂ ಆರೋಹಿ ಪಾತ್ರ ವೀಕ್ಷಕರ ಮೆಚ್ಚುಗೆ ಪಡೆದುಕೊಂಡಿತ್ತು.

ಲಹರಿ ಯದುವೀರ್ ಮನೆಗೆ ಹೋದ ನಂತರ ಅತ್ತಿಗೆ ಪಾತ್ರವೇನೂ ಇರಲಿಲ್ಲ.

ವೀಕ್ಷಕರು ತಾವು ಮತ್ತೆ ಆರೋಹಿನ ನೋಡಬೇಕು ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ.

ಹೂ ಮಳೆ ಪ್ರೋಮೋ ಹಾಗೂ ಸಣ್ಣ ತುಣುಕಿನ ವಿಡಿಯೋ ಶೇರ್ ಮಾಡಿದಾಗಲ್ಲೆಲ್ಲಾ ಆರೋಹಿ ಬಗ್ಗೆ ವಿಚಾರಿಸುತ್ತಾ ಕಾಮೆಂಟ್ ಮಾಡುವುದು ಹೆಚ್ಚಾಗಿದೆ.