- Home
- Entertainment
- TV Talk
- 'Geetha' ಮಾಡ್ರನ್ ವಿಲನ್ ಭಾನುಮತಿ ಉರ್ಫ್ Sharmitha ಗೌಡ ಬಗ್ಗೆ ನಿಮಗೆ ತಿಳಿಯದ ಸತ್ಯಗಳು!
'Geetha' ಮಾಡ್ರನ್ ವಿಲನ್ ಭಾನುಮತಿ ಉರ್ಫ್ Sharmitha ಗೌಡ ಬಗ್ಗೆ ನಿಮಗೆ ತಿಳಿಯದ ಸತ್ಯಗಳು!
ತೆರೆ ಮೇಲೆ ಖಡಕ್ ವಿಲನ್ ಆಗಿ ಮಿಂಚಿರುವ ಭಾನುಮತಿ ಅಲಿಯಾಸ್ ಶರ್ಮಿತಾ ಗೌಡ ಎಷ್ಟು ಸ್ಟೈಲಿಷ್ ಗೊತ್ತಾ?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗೀತಾ ಧಾರಾವಾಹಿಯಲ್ಲಿ ಅತ್ತೆ ಮತ್ತು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಶರ್ಮಿತಾ ಗೌಡ.
ಶರ್ಮಿತಾ ಗೌಡ ವಿಲನ್ ಆಗಿದ್ದರೂ ನಾಯಕಿಗಿಂತ ತುಂಬಾ ಸ್ಟೈಲಿಷ್ ಆಗಿ ಕಾಣಿಸಿಕೊಳ್ಳುತ್ತಾರೆ. ಅವರ ಫ್ಯಾಷನ್ ಸೆನ್ಸ್ ಬಗ್ಗೆ ನೆಟ್ಟಿಗರು ಕಾಮೆಂಟ್ ಮಾಡುತ್ತಲೇ ಇರುತ್ತಾರೆ.
ಶರ್ಮಿತಾ ಗೌಡ ಮೂಲಕ ಮಂಗಳೂರಿನವರು ಹಲವು ವರ್ಷಗಳಿಂದ ಕಿರುತೆರೆ ಮತ್ತು ಬೆಳ್ಳಿತೆರೆಗಳಲ್ಲಿ ನಟಿಸುತ್ತಿದ್ದಾರೆ. ಬಣ್ಣದ ಜರ್ನಿ ಹೊರತುಪಡಿಸಿ ಶರ್ಮಿತಾ ಬೇರೆ ಕೆಲಸನೂ ಮಾಡುತ್ತಾರೆ.
ಶರ್ಮಿತಾ ಅವರು ಫಿಟ್ನೆಸ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದು ನ್ಯೂಟ್ರಿಷನಿಸ್ಟ್ ಕೂಡ. ಹೀಗಾಗಿ ಅವರು ಇಷ್ಟೊಂದು ಫಿಟ್ ಆಂಡ್ ಫೈನ್ ಆಗಿರುವುದು.
ಅಮ್ಲೆಟ್, ಸೀತಾಯಣ (Seetharam), ಫ್ಯಾಮಿಲಿ ಪ್ಯಾಕ್ (Family Pack) ಸೇರಿದಂತೆ ಅನೇಕ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ.
ಆನ್ ಸ್ಕ್ರೀನ್ ಮತ್ತು ಆಫ್‌ಸ್ಕ್ರೀನ್ ಶರ್ಮಿತಾ ಅವರದ್ದು ಬೇರೆ ವ್ಯಕ್ತಿತ್ವ. ಶರ್ಮಿತಾ ಅವರು ಜಗಳವಾಡುತ್ತಾರೆ ಸಿಟ್ಟು ಬೇಸರದಿಂದ ಫುಲ್ ದೂರವಂತೆ.
ಚಿತ್ರೀಕರಣ ಸಮಯದಲ್ಲಿ ಹೊಡೆಯುವ ಅಥವಾ ವ್ಯಂಗ್ಯ ಮಾಡುವ ಪ್ರಸಂಗ ಬಂದಾಗ ಭಾನುಮತಿಯಾಗಿ ನಟಿಸಿ ಆನಂತರ ಶರ್ಮಿತಾ ಆಗಿ ಕ್ಷಮೆ ಕೇಳುತ್ತಾರಂತೆ.
ಇನ್‌ಸ್ಟಾಗ್ರಾಂನಲ್ಲಿ 1 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಶರ್ಮಿತಾ ತುಂಬಾನೇ ಮಾಡ್ರನ್ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.