ಫೇಸ್‌ಬುಕ್ ಒಳ್ಳೆಯದಲ್ಲ ಅಂತಾನೆ ಮಗ; ಸ್ನೇಹಿತ್‌ನನ್ನು ಆ ಪದಗಳಿಂದ ಟ್ರೋಲ್ ಮಾಡಿದ್ದಕ್ಕೆ ತಾಯಿ ಬೇಸರ
ಸಾಮಾಜಿಕ ಜಾಲತಾಣದಲ್ಲಿ ಮಗನ ಬಗ್ಗೆ ಹರಿದಾಡುತ್ತಿರುವ ನೆಗೆಟಿವ್ ಕಾಮೆಂಟ್‌ಗಳನ್ನು ನೋಡಿ ಬೇಸರ ಮಾಡಿಕೊಂಡು ಸ್ನೇಹಿತ್ ಪೋಷಕರು.
ಫೇಸ್‌ಬುಕ್‌ನಲ್ಲಿ ಖಾತೆ ಓಪನ್ ಮಾಡಿಕೊಡಲು ನನ್ನ ಮಗನನ್ನು ಕೇಳುತ್ತಿದ್ದೆ. ಇಲ್ಲ ನಿನಗೆ ಅಷ್ಟು ಗೊತ್ತಾಗುವುದಿಲ್ಲ ಆಮೇಲೆ ಒಳ್ಳೆಯದಲ್ಲ ಬೇಡ ಮಾಡಿಕೊಟ್ಟಿರಲಿಲ್ಲ.
ನಮ್ಮನೆ ಯುವರಾಣಿ ಸೀರಿಯಲ್ ಸಮಯದಲ್ಲಿ ನನ್ನ ಮಗನೇ ಇನ್‌ಸ್ಟಾಗ್ರಾಂ ಓಪನ್ ಮಾಡಿಕೊಟ್ಟ. ಪ್ರೈವೇಟ್ ಅಕೌಂಟ್ ಇತ್ತು ನನ್ನ ಮಗನ ಫೋಟೋ ಮಾತ್ರ ಲೈಕ್ ಮಾಡುತ್ತಿದ್ದೆ ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಸ್ನೇಹಿತ್ ತಾಯಿ ಮಾತನಾಡಿದ್ದಾರೆ.
ಬಿಗ್ ಬಾಸ್ ಆರಂಭವಾಗಿ ಎರಡು ವಾರ ಕಳೆದ ಮೇಲೆ ನಮ್ಮ ಯಜಮಾನರು ಸ್ವಲ್ಪ ಟೆನ್ಶನ್ ತೆಗೆದುಕೊಳ್ಳಲು ಶುರು ಮಾಡಿದರು. ಪದೇ ಪದೇ ಕೇಳಿದ ಮೇಲೆ ಕಾರಣ ಹೇಳಿದರು.
ನಮ್ಮ ಮಗನ ಬಗ್ಗೆ ತುಂಬಾ ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದಾರೆ. ಹೇಳಿಕೊಳ್ಳಲು ಆಗಲ್ಲ ಅಷ್ಟು ಕೆಟ್ಟದಾಗಿ ಪದ ಬಳಸುತ್ತಿದ್ದಾರೆ ಅಂತ ಗೊತ್ತಾದ ಮೇಲೆ ತುಂಬಾ ಬೇಸರ ಆಯ್ತು ಎಂದಿದ್ದಾರೆ ಸ್ನೇಹಿತ್ ತಾಯಿ.
ನನ್ನ ಮಗ ಸಣ್ಣ ಪುಟ್ಟ ತಪ್ಪು ಮಾಡುತ್ತಿರುವುದು ಅದಿಕ್ಕೆ ಟ್ರೋಲ್ ಮಾಡುತ್ತಿದ್ದರು. ಇದರಿಂದ ರಾತ್ರಿ ನಿದ್ರೆ ಬರುತ್ತಿರಲಿಲ್ಲ ಏನೂ ಮಾಡಲು ಇಂಟ್ರೆಸ್ಟ್ ಇರುತ್ತಿರಲಿಲ್ಲ.
ಮೂರು ತಿಂಗಳು ಬಿಗ್ ಬಾಸ್‌ನಲ್ಲಿ ಮಗ ಇರುತ್ತಾನೆ ನಾವು ಸುತ್ತಾಡಿಕೊಂಡು ಬರ ಬಹುದು ಎಂದು ಪ್ಲ್ಯಾನ್ ಮಾಡಿದ್ವಿ ಆದರೆ ಎಲ್ಲರ ಉಲ್ಟಾ ಆಯ್ತು'
ಈಗ ಫೀಲ್ಡ್‌ನಲ್ಲಿ ಬೆಳೆಯುತ್ತಿರುವ ಹುಡುಗ ....ನಮ್ಮ ನೋವಯ ಯಾರ ಬಳಿನೂ ಶೇರ್ ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಪಾಪ ಕಷ್ಟಪಟ್ಟು ಆಟವಾಡುತ್ತಿದ್ದ.