ಬಿಗ್ ಬಾಸ್ ಮೈಕಲ್ ತಾಯಿಗೆ ಮೆಸೇಜ್ ಮಾಡ್ತೀನಿ; ಮದ್ವೆ ಸುಳಿವು ಕೊಟ್ರಾ ಇಶಾನಿ?
ಮೈಕಲ್ ತಾಯಿ ಜೊತೆ ಮಾತನಾಡಿದ್ದೀನಿ. ಫ್ಯಾಮಿಲಿ ರೌಂಡ್ ಮಿಸ್ ಮಾಡಿಕೊಂಡ ಬಿಗ್ ಬಾಸ್ ಇಶಾನಿ...

ಕನ್ನಡದ ಮಹಿಳಾ Rapper ಇಶಾನಿ ಸದ್ಯ ತಮ್ಮ ಮುಂದಿನ 'ವಿಟಮಿನ್ ಎಮ್' ಹಾಡಿನ ರಿಲೀಸ್ ಬ್ಯುಸಿಯಲ್ಲಿದ್ದಾರೆ. ಬಿಗ್ ಬಾಸ್ ಸೀಸನ್ 10ರ ಜರ್ನಿ ನಂತರ ಸಖತ್ ಹೆಸರು ಮಾಡಿದ್ದಾರೆ.
ಎಲಿಮಿನೇಟ್ ಆಗಿ ಹೊರ ಬಂದ ಮೇಲೆ ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡಿಲ್ಲ ಅನ್ನೋ ಬೇಸರ ಇತ್ತು. ತಮ್ಮ ಸ್ನೇಹಿತಾ ಮೈಕಲ್‌ಗೆ ಫುಲ್ ಸಪೋರ್ಟ್ ಮಾಡುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಫ್ಯಾಮಿಲಿ ರೌಂಡ್ ನಡೆಯಿತ್ತು. ಪ್ರತಿಯೊಬ್ಬ ಸ್ಪರ್ಧಿಯ ಮನೆಯವರು ಬಿಬಿ ಮನೆಯೊಳಗೆ ಎಂಟ್ರಿ ಕೊಟ್ಟು ಮಾತನಾಡಿಸಿ, ಎಂಜಾಯ್ ಮಾಡಿದ್ದರು.
ಈ ಎಪಿಸೋಡ್‌ನಲ್ಲಿ ಮೈಕಲ್ ತಾಯಿಯನ್ನು ನೋಡಿ ಇಶಾನಿ ಖುಷಿಯಾಗಿದ್ದಾರೆ. 'ಮೈಕಲ್ ತಾಯಿ ಜೊತೆ ಮಾತನಾಡಿದ್ದೀನಿ. ಅವರಿಗೆ ಮೆಸೇಜ್ ಮಾಡಿ ಚೆಕ್ ಮಾಡ್ತಾನೆ ಇರ್ತೀನಿ' ಎಂದು ಖಾಸಗಿ ಸಂದರ್ಶನದಲ್ಲಿ ಇಶಾನಿ ಮಾತನಾಡಿದ್ದಾರೆ.
ಮೈಕಲ್ ತಾಯಿ ತುಂಬಾ ಕೈಂಡ್ ಮತ್ತು ಹಂಬಲ್ ಆಗಿರುತ್ತಾರೆ. ಅವರನ್ನು ನೋಡಿ ಮೈಕಲ್ ಖುಷಿಯಾಗಿದ್ದರು, ಅವರಿಬ್ಬರು ಖುಷಿಯಾಗಿರುವುದನ್ನು ನೋಡಿ ನಾನು ಖುಷಿಯಾಗಿದೆ.
ಎಲ್ಲರ ಫ್ಯಾಮಿಲಿ ಆಗಮನದ ಕ್ಷಣ ತುಂಬಾ ಎಮೋಷನಲ್ ಆಗಿತ್ತು. ಅಲ್ಲಿ ನಾನು ಇರಬೇಕಿತ್ತು ಆ ಕ್ಷಣ ಮಿಸ್ ಮಾಡಿಕೊಂಡೆ. ನನಗೆ ತಂದೆ ತಾಯಿ ತುಂಬಾ ಮುಖ್ಯ ಎಂದಿದ್ದಾರೆ ಇಶಾನಿ.
ಇಶಾನಿಯನ್ನು ಗರ್ಲ್‌ಫ್ರೆಂಡ್ ಎಂದು ಮೈಕಲ್ ಕರೆಯುತ್ತಿದ್ದರು. ಅಲ್ಲದೆ ಇಬ್ಬರು ಒಟ್ಟಿಗೆ ಇದ್ದು ಕ್ಷಣ ಸೂಪರ್ ಆಗಿತ್ತು. ಮದುವೆ ಆಗುವ ಸಾಧ್ಯತೆಗಳು ಹೆಚ್ಚಿದೆ ಎನ್ನಬಹುದು.
ಯಾವುದೇ ಕಾರಣಕ್ಕೂ ಮದುವೆಗೆ ಒಪ್ಪಲ್ಲ ಎಂದು ಇಶಾನಿ ತಂದೆ ಈ ಹಿಂದೆ ಸ್ಪಷ್ಟನೆ ಕೊಟ್ಟಿದ್ದರು. ಅದನ್ನೂ ಮೀರಿ ಮಸೇಜ್ ಮಾಡುತ್ತಿರುವ ಕಾರಣ ಮದುವೆ ಸುಳಿವು ಅಂತಿದ್ದಾರೆ ನೆಟ್ಟಿಗರು.