ಇವನೇನು ಗಂಡನೋ, ಸುಡುಗಾಡು ನಾಯಿಯೋ? ಭಾಗ್ಯಲಕ್ಷ್ಮಿ ತಾಂಡವ್‌ಗೆ ನೆಟ್ಟಿಗರ ಕ್ಲಾಸ್!
ಕಥೆಗೊಂದು ಉತ್ತಮ ತಿರುವುಕೊಟ್ಟು ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿರೋ ಸೀರಿಯಲ್ ಗಳಲ್ಲಿ ಒಂದು ಭಾಗ್ಯಲಕ್ಷ್ಮಿ. ಸೊಸೆಗೆ ಓದಿಸ್ತೇನೆ ಎಂದು ಮಾತು ಕೊಟ್ಟ ಕುಸುಮಾ, ಸದ್ಯ ಅದೇ ತಯಾರಿಯಲ್ಲಿದ್ದಾರೆ. ಆದರೆ, ಹೇಗಾದರೂ ಹೆಂಡತಿಯನ್ನು ಓದುವ ಹುಚ್ಚಿನಿಂದ ಹೊರ ತರಬೇಕೆಂದು ಯತ್ನಿಸುತ್ತಿರುವ ತಾಂಡವ್ ನಡೆಗೆ ನೆಟ್ಟಿಗರು ರೊಚ್ಚಿಗೆದ್ದಿದಾರೆ!

ದಿನದಿಂದ ದಿನಕ್ಕೆ ರೋಚಕ ತಿರುವುಗಳೊಂದಿಗೆ ಪ್ರಸಾರವಾಗುತ್ತಿರುವ ಧಾರಾವಾಹಿ ಭಾಗ್ಯಲಕ್ಷ್ಮಿ (Bhagyalakshmi). ಸೊಸೆಗೆ ಬೆಂಬಲವಾಗಿ ನಿಂತಿರೋ ಅತ್ತೆಯನ್ನು ನೋಡಿ ಸೀರಿಯಲ್ ಪ್ರಿಯರು ಮೆಚ್ಚಿಕೊಂಡಿದ್ದು, ಇದೀಗ ಸೊಸೆಗೆ 10ನೇ ತರಗತಿ ಕಲಿಸೋ ತಯಾರಿಯಲ್ಲಿದ್ದಾರೆ ಕುಸುಮಾ.
ಮಗನಿಗೆ ಸವಾಲು ಹಾಕಿದಂತೆ ಕೊಟ್ಟ ಮಾತಿನ ಪಟ್ಟು ಬಿಡದ ಕುಸುಮಾ, ಸೊಸೆಗೆ ಓದಲು ಹತ್ತನೇ ತರಗತಿಯ ಕನ್ನಡ ಪುಸ್ತಕಗಳನ್ನು ಈಗಾಗಲೇ ತರಿಸಿಯಾಗಿದೆ. ಈಗ ಮನೆಯವರನ್ನೆಲ್ಲಾ ಕರೆಯಿಸಿ, ತನ್ವಿ ಮತ್ತು ಭಾಗ್ಯ ಪುಸ್ತಕಕ್ಕೆ ಸರಸ್ವತಿ ಪೂಜೆ ಮಾಡಲು ತಯಾರಿ ನಡೆಸಿದ್ದಾರೆ.
ಸೊಸೆಯ ಕೈಯಾರೆ ಪುಸ್ತಕಗಳನ್ನು ದೇವರ ಮುಂದೆ ಇರಿಸಿ, ಮನೆಯವರನ್ನೆಲ್ಲಾ ಕರೆಯುತ್ತಾಳೆ ಕುಸುಮಾ. ದೇವರ ಮನೆಯಲ್ಲಿ ಭಾಗ್ಯಾ ಪುಸ್ತಕಗಳನ್ನು ನೋಡಿ ಶಾಖ್ ಆಗಿರೋ ತಾಂಡವ್, ಅಮ್ಮ ತೆಗೆದುಕೊಂಡಿರೋ ನಿರ್ಧಾರದಿಂದ ಹಿಂದೆ ಬರುವಂತೆ ಕಾಣಿಸುತ್ತಿಲ್ಲ, ಎಂದು ಮನಸ್ಸಿನಲ್ಲಿಯೇ ಕೋಪ ಮಾಡ್ಕೊಂಡಿದ್ದಾನೆ.
ಹತ್ತನೇ ಕ್ಲಾಸ್ ಓದು ತುಂಬಾನೆ ಕಷ್ಟ ಇರುತ್ತೆ, ಅದಕ್ಕೆ ಶಾರದೆ ಆಶೀರ್ವಾದದಿಂದ ಮಗಳು ಚೆನ್ನಾಗಿ ಓದುವಂತೆ ಆಗಲಿ ಎಂದು ಭಾಗ್ಯಾ ಮಗಳನ್ನು ಕರೆದು, ಹತ್ತನೆ ತರಗತಿಯಲ್ಲಿ ಒಳ್ಳೆಯ ಅಂಕ ತೆಗೆದುಕೊಂಡು ಪಾಸ್ ಆಗುವಂತೆ ಮಾಡುವಂತೆ ಶಾರದೆಯಲ್ಲಿ ಬೇಡುವಂತೆ ಮಗಳಿಗೆ ಹೇಳುತ್ತಾಳೆ.
ಆವಾಗ ಅತ್ತೆ ಕುಸುಮಾ, ಭಾಗ್ಯಾ ತನ್ವಿ ಮಾತ್ರ ಅಲ್ಲ, ನೀನು ಕೂಡ ದೇವರನ್ನು ಚೆನ್ನಾಗಿ ಬೇಡಿಕೊಳ್ಳುವುದು ಒಳ್ಳೆಯದು ಎಂದು ಹೇಳುತ್ತಾರೆ. ಅದಕ್ಕೆ ಮಾವ ಹೌದು, ಹೌದು, ಮಗಳ ಓದಿಗೆ ತಾಯಿನೂ ಕೈ ಜೋಡಿಸಿದ್ರೆ ಒಳ್ಳೆಯದು, ಇಬ್ಬರೂ ಸೇರಿ ಪೂಜೆ ಮಾಡಿಕೊಳ್ಳುವಂತೆ ಹೇಳುತ್ತಾರೆ.
ಗಂಡನ ಮಾತನ್ನ ತಡೆಯುವ ಕುಸುಮಾ, ಮಗಳಷ್ಟೇ ಅಲ್ಲ, ಮಗಳ ಜೊತೆಗೆ ತಾಯಿನೂ ಓದ್ತಾಳೆ, ಈ ಸಲ ಹತ್ತನೇ ತರಗತಿಯಲ್ಲಿ ತನ್ವಿ ಜೊತೆ ಭಾಗ್ಯಾನೂ ಚೆನ್ನಾಗಿ ಓದಿ, ಪರೀಕ್ಷೆ ಬರೆದು ಚೆನ್ನಾಗಿ ಮಾರ್ಕ್ ಬರುವಂತೆ ಇಬ್ಬರೂ ಸೇರಿ ಪೂಜೆ ಮಾಡಿ, ನಾನು ಒಂದು ಸಲ ಹೇಳಿದ ಮೇಲೆ ಅದನ್ನ ಯಾರಿಂದಾನೂ ಬದಲಾಯಿಸಲು ಸಾಧ್ಯ ಇಲ್ಲ ಎನ್ನುತ್ತಾಳೆ ಕುಸುಮಾ. ಅಮ್ಮನ ಹಠವನ್ನು ಪತ್ನಿಯಿಂದಾಲೇ ಸರಿ ಮಾಡಲು ಯತ್ನಿಸುತ್ತಿರುವ ತಾಂಡವ್, ಮತ್ತೆ ಭಾಗ್ಯಾಳನ್ನು ಹಂಗಿಸಿ ಮಾತನಾಡಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಗಂಡನ ನಡೆಗೆ ಅತೀವ ಕಮೆಂಟ್ ಮೂಲಕ ಅತೀವ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಮಂದಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.