RIP ಡೂಡು; ಪ್ರೀತಿಯ ಶ್ವಾನ ಕಳೆದುಕೊಂಡ ದಿವ್ಯಾ ಸುರೇಶ್
ಮುದ್ದಿನ ಶ್ವಾನ ಕಳೆದುಕೊಂಡ ನೋವಿನಲ್ಲಿ ಆಮ್ರಪಾಲಿ. ಸಾಂತ್ವಾನ ಹೇಳಿದ ನಟ್ಟಿಗರು....

ಮಾಡಲ್ ಕಮ್ ಮಾಜಿ ಜಿಗ್ ಬಾಸ್ (Bigg Boss) ಸ್ಪರ್ಧಿ ದಿವ್ಯಾ ಸುರೇಶ್ (Divya Suresh) ಪ್ರೀತಿಯ ಶ್ವಾನ ಡುಡು ಇಂದು ಅಗಲಿದ್ದಾನೆ.
ಡುಡು ನೆನಪಿನಲ್ಲಿ ಅವನೊಟ್ಟಿಗೆ ಕಳೆದ ಪ್ರತಿ ಕ್ಷಣ ಹಾಗೂ ಅವನು ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಡೂಡಲ್ ತಂದ ದಿನವೇ ನನ್ನ ಬೇಬಿ ಎಂದು ಪುಟ್ಟ ಮರಿ ಫೋಟೋ ಹಾಕಿದ್ದರು. ನನ್ನ ಜೀವನ ಖುಷಿ ಎಂದು ಪದೇ ಪದೇ ಹೇಳಿಕೊಂಡಿದ್ದಾರೆ.
ಒಮ್ಮೆ ಗಾಡ ನಿದ್ರೆ ಮಾಡುತ್ತಿರುವ ಫೋಟೋ ಹಾಕಿ ' ಬಹುಷ ಇಷ್ಟು ಗಾಡ ನಿದ್ರೆಯಲ್ಲಿ ಚಿಕನ್ ಬಗ್ಗೆ ಯೋಚನೆ ಮಾಡುತ್ತಿರಬೇಕು' ಎಂದು ಬರೆದುಕೊಂಡಿದ್ದರು.
ನಾನು ಜೀವನದಲ್ಲಿ ಅತಿ ಹೆಚ್ಚು ಪ್ರೀತಿ ಮಾಡುವ ವ್ಯಕ್ತಿ ಅಥವಾ ಅದಕ್ಕೊಂದು ಹೆಸರು ಕೊಡಬೇಕು ಅಂದ್ರೆ ಅದು ನೀನೇ ಡೂಡಲ್ ಎಂದಿದ್ದರು ದಿವ್ಯಾ.
ಪ್ರತಿ ಸಲ ಕಾರಿನಲ್ಲಿ ಪ್ರಯಾಣ ಮಾಡುವಾಗ ಶ್ವಾನವನ್ನು ಕರೆದುಕೊಂಡು ಹೋಗುತ್ತಿದ್ದರು. ಅವನು ಮಾಡುತ್ತಿದ್ದ ತುಂಟಾಟವನ್ನು ಸೆರೆ ಹಿಡಿದು ಅಪ್ಲೋಡ್ ಮಾಡಿದ್ದಾರೆ.
Rip ಡೂಡು. ಈಗ ನೀನು ಒಳ್ಳೆ ಜಾಗದಲ್ಲಿರುವೆ ಅಂದುಕೊಂಡಿದ್ದೀನಿ. ನಿನ್ನ ತುಂಬಾ ಇಷ್ಟ ಪಡುತ್ತೀನಿ ಹಾಗೂ ಮಿಸ್ ಮಾಡಿಕೊಳ್ಳುತ್ತೀನಿ ಎಂದಿದ್ದಾರೆ ದಿವ್ಯಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.