- Home
- Entertainment
- TV Talk
- Youtube silver button ಪಡೆದ ಖುಶಿಯಲ್ಲಿ Subscribers ಜೊತೆ ಪಾರ್ಟಿ ಮಾಡಿದ ಚೈತ್ರ ವಾಸುದೇವನ್
Youtube silver button ಪಡೆದ ಖುಶಿಯಲ್ಲಿ Subscribers ಜೊತೆ ಪಾರ್ಟಿ ಮಾಡಿದ ಚೈತ್ರ ವಾಸುದೇವನ್
ನಟಿ ನಿರೂಪಕಿ ಚೈತ್ರ ವಾಸುದೇವನ್ ಯೂಟ್ಯೂಬ್ ನಲ್ಲಿ 1 ಲಕ್ಷ ಸಬ್ ಸ್ಕ್ರೈಬರ್ ಗಳನ್ನು ಪಡೆದಿದ್ದು, ಇದೇ ಸಂತೋಷಕ್ಕಾಗಿ ನಟಿ ಆಯ್ದ ಕೆಲವು ಸಬ್ ಸ್ಕ್ರೈಬರ್ ಜೊತೆ ಸಂಭ್ರಮ ಹಂಚಿಕೊಂಡು ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ.

ಕನ್ನಡದ ಬಿಗ್ ಬಾಸ್ ಸೀಸನ್ 7 (Bigg Boss Season 7) ಸ್ಪರ್ದಿ, ನಟಿ ಮತ್ತು ನಿರೂಪಕಿಯಾಗಿ ಗುರುತಿಸಿಕೊಂಡಿರುವ ಚೈತ್ರ ವಾಸುದೇವನ್, ಕಿರುತೆರೆಯಲ್ಲಿ ಕಡಿಮೆ ಕಾಣಿಸಿಕೊಂಡರೂ, ತಮ್ಮ ಫ್ಯಾಷನ್, ಡ್ರೆಸ್ಸಿಂಗ್ ಮತ್ತು ತಮ್ಮ ಯೂಟ್ಯೂಬ್ ವಿಡಿಯೋಗಳಿಂದಾಗಿ ತುಂಬಾ ಜನಪ್ರಿಯತೆ ಪಡೆದಿದ್ದಾರೆ.
ಚೈತ್ರ ತಮ್ಮ ಯೂಟ್ಯೂಬ್ ವಿಡಿಯೋಗಳಿಂದಲೇ (Youtube Channel) ಸುದ್ದಿಯಾಗುತ್ತಿದ್ದು, ಇದೀಗ ತಮ್ಮ ಚಾನೆಲ್ ಗೆ 1 ಲಕ್ಷ ಸಬ್ ಸ್ಕ್ರೈಬರ್ ಗಳನ್ನು ಪಡೆದ ಖುಷಿಯಲ್ಲಿ ತೇಲಾಡ್ತಾ ಇದ್ದಾರೆ ನಟಿ. ಈ ಸಂತಸವನ್ನು ಡಬಲ್ ಮಾಡಲು ಪಾರ್ಟಿ ಏರ್ಪಡಿಸಿದ್ದು, ಇಲ್ಲಿ ತಮ್ಮ ಕೆಲವು ಆಯ್ದ ಸಬ್ ಸ್ಕ್ರೈಬರ್ ಗಳನ್ನು ಕರೆಯಿಸಿಕೊಂಡು ಸಂಭ್ರಮ ಹೆಚ್ಚಿಸಿದ್ದಾರೆ.
ಚೈತ್ರಾ ವಾಸುದೇವನ್ (Chaitra Vasudevan) ತಮ್ಮ ಯೂಟ್ಯೂಬ್ ಚಾನೆಲನ್ನು 2021ರಲ್ಲಿ ಆರಂಭಿಸಿದ್ದರು. ಈಗಾಗಲೆ 1.08 ಸಬ್ ಸ್ಕ್ರೈಬರ್ ಗಳನ್ನು ಪಡೆದಿರುವ ನಟಿ, ಇಲ್ಲಿವರೆಗೂ ಸುಮಾರು 319 ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಈ ಚಾನೆಲ್ ಮೂಲಕ ಅವರು ತಮ್ಮ ಲೈಫ್ ಸ್ಟೈಲ್ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಟ್ರಾವೆಲ್ ಪ್ರಿಯೆಯಾಗಿರುವ ಚೈತ್ರಾ ತಮ್ಮ ಚಾನೆಲ್ ನಲ್ಲಿ ತಾವು ಇಲ್ಲಿವರೆಗೆ ಹೋಗಿರುವ ನ್ಯಾಷನಲ್, ಇಂಟರ್ ನ್ಯಾಷನಲ್, ಲೋಕಲ್ ಟ್ರಾವೆಲ್ ಬಗ್ಗೆ ವ್ಲೋಗ್ ಮಾಡಿದ್ದಾರೆ. ಅಲ್ಲದೇ ತಮ್ಮ ರೂಮ್ ಟೂರ್, ಫ್ಯಾಷನ್, ಮೇಕಪ್, ಆಹಾರ, ಶಾಪಿಂಗ್ ಬಗ್ಗೆ ಸಹ ತಮ್ಮ ಚಾನೆಲ್ ಮೂಲಕ ಮಾಹಿತಿ ನೀಡಿದ್ದಾರೆ.
ಅಷ್ಟೇ ಅಲ್ಲದೇ ಸೆಲೆಬ್ರಿಟಿಗಳ ಇಂಟರ್ವ್ಯೂ, ಬ್ಯೂಟಿ ಟಿಪ್ಸ್, ಫಿಟ್ನೆಸ್ ಸೀಕ್ರೆಟ್ ಬಗ್ಗೆಯೂ ಮಾಹಿತಿಯನ್ನು ನೀಡಿದ್ದಾರೆ. ಇದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಜನಪ್ರಿಯತೆ ಪಡೆದಿರುವ ಚೈತ್ರಾ, ತಮ್ಮ ಇನ್ಸ್ಟಾ ಖಾತೆಯಲ್ಲಿ ಹೊಸ ಹೊಸ ಫೋಟೊ ಶೇರ್ ಮಾಡುವ ಮೂಲಕ ಅಭಿಮಾನಿಗಳ ಜೊತೆ ಕನೆಕ್ಟ್ ಆಗುತ್ತಿದ್ದಾರೆ.
ಇತ್ತೀಚೆಗಷ್ಟೇ ತಮ್ಮ ಡ್ರೀಮ್ ಡೆಸ್ಟಿನೇಶನ್ ಟ್ರಾವೆಲ್ ಟರ್ಕಿ ಪ್ರವಾಸ ಮಾಡಿ ಬಂದಿರುವ ಚೈತ್ರಾ, ಅಲ್ಲಿ ಎಂಜಾಯ್ ಮಾಡಿರುವ ಫೋಟೋ, ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ (social media) ಹಂಚಿಕೊಂಡಿದ್ದರು. ಇದರ ಜೊತೆ ಇವರ ಸುಂದರ ಫೋಟೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.
ಇನ್ನು ಕರಿಯರ್ ವಿಷಯಕ್ಕೆ ಬಂದ್ರೆ, ಇವರು ಕನ್ನಡ ಕಿರುತೆರೆಯ ಬೇಡಿಕೆಯ ಹೋಸ್ಟ್ ಆಗಿದ್ದಾರೆ. ಇವರು ಕನ್ನಡದ ವಿಶೇಷ ಕಾರ್ಯಗಳಿಗೆ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಈಕೆಗೆ ಸ್ವಂತ ಈವೆಂಟ್ ಕಂಪನಿ ಇದೆ, ಅದರ ಜೊತೆಗೆ ಪ್ರೊಡಕ್ಷನ್ ಹೌಸ್ ಕೂಡ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.