- Home
- Entertainment
- TV Talk
- Bigg Bossನಲ್ಲಿ 10 ಪಟ್ಟು ಹೆಚ್ಚು ಸಂಭಾವನೆ ಸಿಕ್ಕಿದ್ದು ನಿಜ: ರಜತ್, ಚೈತ್ರಾ ಕುಂದಾಪುರ ರಿವೀಲ್ ಮಾಡಿದ್ದೇನು?
Bigg Bossನಲ್ಲಿ 10 ಪಟ್ಟು ಹೆಚ್ಚು ಸಂಭಾವನೆ ಸಿಕ್ಕಿದ್ದು ನಿಜ: ರಜತ್, ಚೈತ್ರಾ ಕುಂದಾಪುರ ರಿವೀಲ್ ಮಾಡಿದ್ದೇನು?
ಬಿಗ್ಬಾಸ್ ಸೀಸನ್ 12ಕ್ಕೆ ಅತಿಥಿಗಳಾಗಿ ಪ್ರವೇಶಿಸಿದ್ದ ರಜತ್ ಮತ್ತು ಚೈತ್ರಾ ಕುಂದಾಪುರ ಇದೀಗ ಮನೆಯಿಂದ ಹೊರಬಂದಿದ್ದಾರೆ. ತಮ್ಮ ಎರಡನೇ ಬಾರಿಯ ಬಿಗ್ಬಾಸ್ ಅನುಭವವನ್ನು ಹಂಚಿಕೊಂಡ ಅವರು, ಸೀಸನ್ 11 ಕ್ಕಿಂತ 10 ಪಟ್ಟು ಹೆಚ್ಚು ಸಂಭಾವನೆ ಪಡೆದಿರುವುದಾಗಿ ರಜತ್ ಬಹಿರಂಗಪಡಿಸಿದ್ದಾರೆ.

ರಜತ್ ಮತ್ತು ಚೈತ್ರಾ ಕುಂದಾಪುರ
ಬಿಗ್ಬಾಸ್ ಸೀಸನ್ 12 (Bigg Boss Season 12)ರಲ್ಲಿ ವೈಲ್ಡ್ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ 11ನೇ ಸೀಸನ್ ಸ್ಪರ್ಧಿಗಳಾದ ರಜತ್ ಮತ್ತು ಚೈತ್ರಾ ಕುಂದಾಪುರ ಇದೀಗ ಹೊರಕ್ಕೆ ಬಂದಿದ್ದಾರೆ. ಅತಿಥಿಗಳಾಗಿ ಮೂರು ವಾರ ಇದ್ದ ಅವರು ಇದೀಗ ಮನೆಯಿಂದ ಹೊರಕ್ಕೆ ಬಂದಿದ್ದಾರೆ.
ಬಿಗ್ಬಾಸ್ ಅನುಭವ
ಎರಡನೆಯ ಬಾರಿ ಬಿಗ್ಬಾಸ್ ಮನೆ ಪ್ರವೇಶ ಮಾಡಿರುವ ಕುರಿತಂತೆ ಅವರು ಮಾಧ್ಯಮಗಳ ಜೊತೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಯಾರು ಹೇಗೆ ಆಡುತ್ತಿದ್ದಾರೆ, ಯಾರು ಗೆಲ್ಲಬೇಕು, ಯಾರು ಟಾಪ್ 5 ಎನ್ನುವ ಇತ್ಯಾದಿಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ವಿನ್ನರ್ ಯಾರು?
ಚೈತ್ರಾ ಕುಂದಾಪುರ ಗಿಲ್ಲಿ ನಟ, ರಕ್ಷಿತಾ, ಅಶ್ವಿನಿ ಗೌಡ, ಕಾವ್ಯಾ ಸೇರಿದಂತೆ ಕೆಲವರ ಹೆಸರನ್ನು ಫೈನಲಿಸ್ಟ್ನಲ್ಲಿ ತೆಗೆದುಕೊಂಡಿದ್ದರೆ, ರಜತ್ ಮಾತ್ರ ಜಾಣ್ಮೆಯಿಂದ ಉತ್ತರಿಸಿದ್ದು, ಎಲ್ಲರೂ ಚೆನ್ನಾಗಿ ಆಡ್ತಿದ್ದಾರೆ. ಯಾರು ಚೆನ್ನಾಗಿ ಆಡುತ್ತಾರೋ ಅವರು ಬರಲಿ ಎಂದಿದ್ದಾರೆ. ವಿನ್ನರ್ (Bigg Boss 12 Kannada winner) ಜನರ ಮೇಲಿದೆ. ಚೆನ್ನಾಗಿ ಆಡುವವರು ಬರಲಿ ಎಂದಿದ್ದಾರೆ.
10 ಪಟ್ಟು ಹೆಚ್ಚು ನಿಜ
ಇದೇ ವೇಳೆ ಇಬ್ಬರಿಗೂ ಸಂಭಾವನೆ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ರಜತ್ (Bigg Boss Rajath) ಅವರು ಸಂಭಾವನೆ ಎಷ್ಟು ಎಂದು ಹೇಳದಿದ್ದರೂ 11ನೇ ಸೀಸನ್ಗಿಂತಲೂ 10 ಪಟ್ಟು ಹೆಚ್ಚು ಸಂಭಾವನೆ ಸಿಕ್ಕಿರೋದು ನಿಜ ಎಂದು ಹೇಳಿದ್ದಾರೆ. ತಮಗೆ ಹಿಂದಿನ ಸೀಸನ್ನಲ್ಲಿ ತುಂಬಾ ಕಡಿಮೆ ಸಂಭಾವನೆ ಸಿಕ್ಕಿತ್ತು. ಈಗ ಹೆಚ್ಚು ಸಿಕ್ಕಿದೆ. ನಾನು ಏನಿದ್ದೇನೋ, ಎಲ್ಲವೂ ಬಿಗ್ಬಾಸ್ನಿಂದ ಎಂದು ಹೇಳಿದ್ದಾರೆ.
ಚೈತ್ರಾ ಕುಂದಾಪುರ ಹೇಳಿದ್ದೇನು?
ಆದರೆ, ಈ ಪ್ರಶ್ನೆಗೆ ಚೈತ್ರಾ ಕುಂದಾಪುರ (Bigg Boss Chaitra Kundapura) ಜಾಣ್ಮೆಯಿಂದ ಉತ್ತರ ಕೊಟ್ಟಿದ್ದು, ಕಳೆದ ಸೀಸನ್ನಲ್ಲಿಯೂ ನನಗೆ ಉತ್ತಮ ಸಂಭಾವನೆಯೇ ಸಿಕ್ಕಿತ್ತು. ಆದರೆ ಅದಕ್ಕಿಂತಲೂ ಇಲ್ಲಿ ಹೆಚ್ಚು ಸಿಕ್ಕಿರೋದು ನಿಜ, ಆದರೆ ಎಷ್ಟು ಎಂದು ಹೇಳಲು ಆಗುವುದಿಲ್ಲ ಎಂದಿದ್ದಾರೆ. ಜೊತೆಗೆ, ನನ್ನ ಪತಿ ಚೆನ್ನಾಗಿ ದುಡಿಯುತ್ತಾರೆ. ಆದ್ದರಿಂದ ಸಂಭಾವನೆ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

