Brahmagantu Serial: ಬಯಲಾಯ್ತು ಸೌಂದರ್ಯಳ ಅಸಲಿ ಮುಖ! ಬ್ರಹ್ಮಗಂಟು ಸೀರಿಯಲ್ ಅಂತ್ಯ?
ಬ್ರಹ್ಮಗಂಟು ಧಾರಾವಾಹಿಯಲ್ಲಿ ಸೌಂದರ್ಯ ಮತ್ತು ದೀಪಾ ನಡುವಿನ ಸವಾಲಿನಲ್ಲಿ ಗುಣವೇ ಗೆದ್ದಿದೆ. ಸೌಂದರ್ಯಳ ಅಸಲಿ ಮುಖ ಬಯಲಾಗಿದ್ದು, ದೀಪಾ ಮತ್ತು ಚಿರಾಗ್ ಒಂದಾಗಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದ ಸೀರಿಯಲ್ ಮುಕ್ತಾಯದ ಹಂತ ತಲುಪಿದೆ ಎಂದು ಹೇಳಲಾಗುತ್ತಿದೆ.

ಸೌಂದರ್ಯನೋ, ಗುಣನೊ?
ಬ್ರಹ್ಮಗಂಟು ಸೀರಿಯಲ್ (Brahmagantu Serial) ಸದ್ಯ ರೋಚಕ ಹಂತ ತಲುಪಿದೆ. ಸೌಂದರ್ಯ ಮೇಲೋ, ಗುಣ ಮೇಲೋ ಎಂದು ದೀಪಾ ಮತ್ತು ಸೌಂದರ್ಯ ನಡುವೆ ಚಾಲೆಂಜ್ ನಡೆದಿತ್ತು. ಅದಕ್ಕೆ ದಾಳವಾಗಿದ್ದು ಚಿರಾಗ್. ಇದೀಗ ಗುಣನೇ ಮುಖ್ಯ ಎಂದು ಚಿರಾಗ್ ಸಾಬೀತು ಮಾಡಿದ್ದಾನೆ.
ದೀಪಾ-ಚಿರು ಒಂದಾದ್ರು
ದಿಶಾಳ ಬಣ್ಣವನ್ನು ಕಳಚಿಟ್ಟು, ದೀಪಾ ತನ್ನ ನಿಜದ ರೀತಿಯಲ್ಲಿಯೇ ಮನೆಬಿಟ್ಟು ಹೋಗಿದ್ದಾಳೆ. ಅಷ್ಟಕ್ಕೂ ಗಂಡನ ಬಗ್ಗೆ ಅಪಾರ್ಥ ಮಾಡಿಕೊಂಡು ಆಕೆ ಮನೆ ಬಿಟ್ಟಿದ್ದಳು. ಆದರೆ ಪತ್ನಿ ಇಲ್ಲದೇ ಕೊರಗಿರೋ ಚಿರಾಗ್ ದೀಪಾಳ ಮನಸ್ಸನ್ನು ಗೆಲ್ಲಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದು, ಇದೀಗ ಅವರಿಬ್ಬರೂ ಒಂದಾಗುವ ಟೈಮ್ ಬಂದೇ ಬಿಟ್ಟಿದೆ.
ಸತ್ಯ ಒಪ್ಪಿಕೊಂಡ ಸೌಂದರ್ಯ
ಅದೇ ಇನ್ನೊಂದೆಡೆ, ಸೌಂದರ್ಯಳ ಮುಖವಾಡ ಮಾವನ ಎದುರು ಬಯಲಾಗಿದೆ. ತನಗೆ ಮಕ್ಕಳ ಭಾಗ್ಯ ಇಲ್ಲ ಎಂದುಕೊಂಡ ಸೌಂದರ್ಯ, ಆ ಮನೆಯಲ್ಲಿ ತೊಟ್ಟಿಲು ತೂಗುವುದನ್ನು ನೋಡುವುದಿಲ್ಲ ಎಂದಿದ್ದಾಳೆ. ತಾನು ಒಳ್ಳೆಯ ಮುಖವಾಡ ಹಾಕಿಕೊಂಡು, ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದೇನೆ ಎಂದು ಹೇಳಿದ್ದಾಳೆ.
ಸೌಂದರ್ಯ ಅಸಲಿ ಮುಖ
ದೀಪಾ ಮತ್ತು ಚಿರಾಗ್ ಒಂದಾಗಲು ನಾನು ಬಿಡುವುದಿಲ್ಲ. ಅವರಿಬ್ಬರಿಗೂ ಡಿವೋರ್ಸ್ ಕೊಡಿಸುತ್ತೇನೆ ಎಂದಿದ್ದಾಳೆ. ಆದರೆ ಈ ಮಾತನ್ನೆಲ್ಲಾ ಮಾವ ಕೇಳಿಸಿಕೊಂಡಿದ್ದಾನೆ. ಇದು ತಿಳಿಯುತ್ತಲೇ ಮಾವನನ್ನೇ ಸಾಯಿಸಲು ಹೋಗಿದ್ದಾಳೆ ಸೌಂದರ್ಯ.
ಎಲ್ಲವೂ ಸುಸೂತ್ರ
ಅಲ್ಲಿಗೆ ಸೌಂದರ್ಯಳ ಅಸಲಿ ಮುಖ ತಿಳಿದಿದೆ. ಅತ್ತ ದೀಪಾ ಮತ್ತು ಚಿರಾಗ್ ಒಂದಾಗಿದ್ದಾರೆ. ಅದೇ ಇನ್ನೊಂದೆಡೆ ನರಸಿಂಹನ ತನ್ನ ಸಿಡುಕು ಪತ್ನಿಯನ್ನು ಹಾವಿನ ಕಡಿತದಿಂದ ಪಾರು ಮಾಡಿದ್ದು, ಅವಳಲ್ಲಿ ಪ್ರೇಮವನ್ನು ಮೂಡಿಸಿದ್ದಾನೆ.
ಸೀರಿಯಲ್ ಮುಕ್ತಾಯ?
ಹೀಗೆ ಎಲ್ಲವೂ ಮುಗಿದಿರುವ ಹಿನ್ನೆಲೆಯಲ್ಲಿ ಬ್ರಹ್ಮಗಂಟು ಸೀರಿಯಲ್ ಮುಕ್ತಾಯ ಆಗಲಿದೆ ಎಂದೇ ಹೇಳಲಾಗುತ್ತಿದೆ. ಇನ್ನು ಕೆಲವೇ ಎಪಿಸೋಡ್ಗಳಲ್ಲಿ ಇದು ಅಂತ್ಯ ಹಾಡಲಿದೆ. ಏಕೆಂದರೆ ಸೀರಿಯಲ್ ಅನ್ನು ಮತ್ತಷ್ಟು ಎಳೆಯಲು ಯಾವುದೇ ವಿಷಯ ವೀಕ್ಷಕರಿಗೆ ಕಾಣಿಸುತ್ತಿಲ್ಲ. ಇದರ ಹೊರತಾಗಿಯೂ ಸೀರಿಯಲ್ ಎಳೆಯುವುದು ಕೂಡ ದೊಡ್ಡ ವಿಷಯವೇನಲ್ಲ ಬಿಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

