- Home
- Entertainment
- TV Talk
- ಬ್ರಹ್ಮಗಂಟು ಸೀರಿಯಲ್‌ನಲ್ಲಿ ಪ್ರಣಯ ಪರ್ವ: ದೀಪಾ–ಚಿರು ರೊಮ್ಯಾನ್ಸ್ ನೋಡಿ ನಿರ್ದೇಶಕರಿಗೆ ಹೊಸ ಬೇಡಿಕೆಯಿಟ್ಟ ನೆಟ್ಟಿಗರು!
ಬ್ರಹ್ಮಗಂಟು ಸೀರಿಯಲ್‌ನಲ್ಲಿ ಪ್ರಣಯ ಪರ್ವ: ದೀಪಾ–ಚಿರು ರೊಮ್ಯಾನ್ಸ್ ನೋಡಿ ನಿರ್ದೇಶಕರಿಗೆ ಹೊಸ ಬೇಡಿಕೆಯಿಟ್ಟ ನೆಟ್ಟಿಗರು!
ಬ್ರಹ್ಮಗಂಟು ಸೀರಿಯಲ್‌ನಲ್ಲಿ ಪ್ರಣಯ ಪರ್ವ ಶುರವಾಗಿದೆ. ದೀಪಾ-ಚಿರು ಬಾಳಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿದೆ. ಆದರೆ, ಈ ಸೀನ್ ಪ್ರೋಮೋ ನೋಡಿದ ನಿರ್ದೇಶಕರಿಗೆ ಹೊಸ ಬೇಡಿಕೆ ಇಟ್ಟಿದ್ದಾರೆ ನೆಟ್ಟಿಗರು.

ಬ್ರಹ್ಮಗಂಟು ಸೀರಿಯಲ್
ಬ್ರಹ್ಮಗಂಟು ಸೀರಿಯಲ್ ಇದೀಗ ಪ್ರೇಕ್ಷಕರಿಗೆ ಇಷ್ಟವಾಗಲು ಶುರುವಾಗಿದೆ. ನಿಧಾನವಾಗಿ ಚಿರು-ದೀಪಾ ನಡುವೆ ರೊಮ್ಯಾನ್ಸ್ ಶುರುವಾಗಿದ್ದು, ಈ ಎಪಿಸೋಡ್ ನೋಡಲು ಕಾಯುತ್ತಿರುವುದಾಗಿ ಪ್ರೇಕ್ಷಕರು ಹೇಳುತ್ತಿದ್ದಾರೆ. ಜೊತೆಗೆ ನಿರ್ದೇಶಕರಿಗೆ ತಮ್ಮೂರಿಗೆ ಬನ್ನಿ ಎಂದು ಕರೆಯುತ್ತಿದ್ದಾರೆ ನೆಟ್ಟಿಗರು. ಕಾರಣ ಕೇಳಿದ್ರೆ ನೀವೂ ಬಿದ್ದು ಬಿದ್ದು ನಗುತ್ತೀರಿ.
ಚಿರು-ದೀಪಾ ಒಂದಾಗೋ ಕಾಲ ಬಂದಿದೆ!
ಹಳ್ಳಿಗೆ ಹೋದ ಚಿರು ಮೇಲೆ ಅನಾಮಿಕರು ಅಟ್ಯಾಕ್ ಮಾಡಲು ಹೋಗಿದ್ದಾರೆ. ಸಡನ್ ಆಗಿ ಆ ಸೀನ್‌ಗೆ ಎಂಟ್ರಿ ಕೊಟ್ಟ ದೀಪಾ ತನ್ನ ಸೀರೆ ಸೆರಗು ಸಿಕ್ಕಿಸಿ, ರೌಡಿಗಳಿಗೆ ಸಿನಿಮೀಯ ಶೈಲಿಯಲ್ಲಿ ಚಚ್ಚುತ್ತಾಳೆ. ದೀಪಾ ಅಟ್ಯಾಕ್ ಮಾಡಿದ ಶೈಲಿಗೆ ವೀಕ್ಷಕರು ಫುಲ್ ಫಿದಾ ಆಗಿದ್ದಾರೆ. ದೀಪಾಳ ನಡೆಗೆ ಖುಷಿಯಾದ ವೀಕ್ಷಕರು ಇದು ಇದು ಆ್ಯಕ್ಚುಯಲಿ ಚನ್ನಾಗಿರೋದು ಅಂತಿದ್ದಾರೆ. ಅಷ್ಟೇ ಅಲ್ಲ ದೀಪಾಳ ಫೈಟಿಂಗ್‌ಗೆ ವೀಕ್ಷಕರಿಂದ ಮಾತ್ರ ಚಪ್ಪಾಳೆ ಸಿಕ್ಕಿದ್ದಲ್ಲ. ಚಿರು ಸಹ ಫುಲ್ ಖುಷಿಯಾಗಿ ಅವಳನ್ನು ಕರೆದು ಅಪ್ಪಿ ಕೊಂಡಿದ್ದಾನೆ. ಅದೇ ಟೈಮಲ್ಲಿ ವರುಣನ ಸಿಂಚನವೂ ಆಗಿದೆ.
ಇದೇ ಸೀನ್‌ಗಳ ಬಹಳ ದಿನಗಳಿಂದ ಕಾಯ್ತಾ ಇದೀವಿ. ಅಂತೂ ಆ ದಿನ ಬಂತು ಎಂದು ಜೀ ಕನ್ನಡ ಪ್ರೋಮೋ ನೋಡಿ ಸಂಭ್ರಮಿಸಿದ ವೀಕ್ಷಕರು, ನಮ್ಮೂರಲ್ಲಿ ಮಳೆ ಆಗ್ತಿಲ್ಲ. ನಿರ್ದೇಶಕರು ನಮ್ಮೂರಲ್ಲೂ ಮಳೆ ತರಿಸಲೆಂದು ಕೇಳಿ ಕೊಳ್ಳುತ್ತಿದ್ದಾರೆ. ಮಳೆಯ ಸಿಂಚನ ಶುಭ ಸಂಕೇತ. ಸಮೃದ್ಧಿಯ ಪ್ರತೀಕ. ಆ ಕಾರಣಕ್ಕೆ ಬಹುಶಃ ಇಂಥದ್ದೊಂದು ದೃಶ್ಯ ಸೇರಿಸಿರಬಹುದು ನಿರ್ದೇಶಕರು. ಆದರೆ, ನೆಟ್ಟಿಗರ ಡಿಮ್ಯಾಂಡ್ ಮಾತ್ರ ಬೇರೆ ಇದೆ.
ಚಿರು ಅತ್ತಿಗೆಯೇ ರೌಡಿ!
ದೀಪಾ, ರೂಪಾ ಪೊಲೀಸ್ ಕಾಸ್ಟೇಬಲ್ ಅವಳಿ ಮಕ್ಕಳು. ರೂಪವತಿ ಜೊತೆ ರೂಪಾ ಜೊತೆ ಸಿರಿವಂತ ಫ್ಯಾಷನ್ ಡಿಸೈನರ್ ಚಿರು ಮದ್ವೆಯಾಗಬೇಕಿತ್ತು. ಆದರೆ, ಯಾರದ್ದೋ ಹಿಂದೆ ಹೋದ ರೂಪಾ ಜಾಗದಲ್ಲಿ, ದೀಪಾ ಅನಿವಾರ್ಯವಾಗಿ ಚಿರುವಿನಿಂದ ತಾಳಿ ಕಟ್ಟಿಸಿಕೊಳ್ಳುತ್ತಾಳೆ. ಎಲ್ಲ ಸೀರಿಯಲ್ಸ್‌ನಲ್ಲಿ ಇರುವಂತೆ ಇಲ್ಲಿಯೂ ಮನೆಯಲ್ಲಿರೋ ಸೌಂದರ್ಯದ ಖನಿ ಸೌಂದರ್ಯ ಚಿರು ಅತ್ತಿಗೆಯೇ ರೌಡಿ. ಏನೇ ಮಾಡಿದರೂ ಈ ದೀಪಾ, ಚಿರು ಒಂದಾಗದಂತೆ ಸದಾ ಮಸಲತ್ತು ಮಾಡುತ್ತಿರುತ್ತಾಳೆ. ಮದ್ವೆಯಾಗಿ ಅದೆಷ್ಟು ದಿನಗಳು ಕಳೆದವು. ಈ ಬ್ರಹ್ಮಗಂಟುವಿನಲ್ಲಿಯೂ ಒಂದಾಗಬೇಕಿದ್ದ ಜೋಡಿ ಒಂದೇ ಮನೆಯಲ್ಲಿದ್ದರೂ ಬೆೇರೆ ಬೇರೆಯೇ ಇರುತ್ತಾರೆ.
ದೀಪಾ, ದಿಶಾ ಹೆಸರಿನಲ್ಲಿ ಚಿರು ಬದುಕಲ್ಲಿ ಎಂಟ್ರಿ
ಇದೇ ಹೊತ್ತಲ್ಲಿ, ದೀಪಾಳೇ ದಿಶಾ ಎಂಬ ಮಾಡೆಲ್ ಹೆಸರಲ್ಲಿ ಚಿರು ಬದುಕಲ್ಲಿ ಎಂಟ್ರಿ ಆಗಿರುತ್ತಾಳೆ. ಹೇಗಾದರೂ ದಿಶಾ ಬಲೆಗೆ ಚಿರು ಬೀಳಬೇಕೆಂದು ಸೌಂದರ್ಯ ಮಸಲತ್ತು ಮಾಡುತ್ತಲೇ ಇರುತ್ತಾಳೆ. ಎಲ್ಲವೂ ಇದೀಗ ಒಂದು ತಹಬದಿಗೆ ಬಂದಿದ್ದು, ಚಿರು-ದೀಪಾ ಒಂದಾಗೋ ಕಾಲ ಬಂದಿದೆ. ಅವಿರಬ್ಬರನ್ನು ಒಂದು ಮಾಡಲು ರೌಡಿಗಳು ಎಂಟ್ರಿ ಆಗಿದ್ದಾರೆ. ಎಲ್ಲ ಸಿನಿಮಾಗಳಲ್ಲಿ ಹೀರೋಯಿನ್ ಅನ್ನು ಕಾಪಾಡಲು ಹೀರೋ ಬಂದ್ರೆ, ಇಲ್ಲಿ ಸ್ವಲ್ಪ ಉಲ್ಟಾ ಆಗಿದೆ. ಚಿರುವನ್ನು ಕಾಪಾಡಲು ದೀಪಾಳೇ ಸೆರಗು ಕಟ್ಟಿ ಹೋರಾಡಿದ್ದಾಳೆ. ಅದು ಚಿರುಗೆ ಮೆಚ್ಚುಗೆಯಾಗಿದೆ. ಮುಂದೇನು ಆಗುತ್ತೆ ನೋಡಬೇಕು.
ಚಿರು ಬಾಳಲ್ಲಿ ಬಿರುಗಾಳಿ ಎಬ್ಬಿಸಿರುವ ಅತ್ತಿಗೆ
ಆಸ್ತಿ ಆಸೆಗಾಗಿ ಸೌಂದರ್ಯ ಎನ್ನೋ ಅತ್ತಿಗೆ ಚಿರು ಬಾಳಲ್ಲಿ ತಂಗಾಳಿಯಂತೆ ಕಾಣಿಸಿಕೊಂಡು ಬಿರುಗಾಳಿ ಬೀಸುತ್ತಿರುತ್ತಾಳೆ. ಎಲ್ಲ ಸೀರಿಯಲ್‌ನಲ್ಲಿಯೂ ಮನಲೆಯ್ಲಿರೋ ರೌಡಿ ಕೊ*ಲೆ ಮಾಡುವಂಥ ಕೃತ್ಯ ಎಸಗಲೂ ಹಿಂದು ಮುಂದು ನೋಡುವುದಿಲ್ಲ. ಆದರೆ, ಈ ಸೀರಿಯಲ್‌ನಲ್ಲಿ ಸೌಂದರ್ಯ ಘೋ ಮುಖ ವ್ಯಾಘ್ರೆ. ಯಾರಿಗೂ ಗೊತ್ತಾಗದಂತೆ ಮಸಲತ್ತು ಮಾಡುತ್ತಿರುತ್ತಾಳೆ. ಆ ಮತ್ತೊಂದು ಮುಖ ಕಳಚಿ ಬಿದ್ದಾಗ ಚಿರುವಿಗೆ ಅವಳ ನೈಜ ಮುಖದ ಅನಾವರಣಗೊಳ್ಳುತ್ತೆ. ಅದ್ಯಾವಾಗ ಆಗುತ್ತೋ ಗೊತ್ತಿಲ್ಲ.
ಅಣ್ಣಯ್ಯ ಸಿನಿಮಾದಂತೆ ಭಾಸವಾಗುತ್ತಿರುವ ತಾಯಿ ಪಾತ್ರ
ಹಿಂದೆ ರವಿಚಂದ್ರನ್-ಮಧು ಅಭಿನಯನದ ಅಣ್ಣಯ್ಯ ಎನ್ನುವ ಸಿನಿಮಾ ಬೇರೆ ಭಾಷೆಯಿಂದ ಡಬ್ಬಾಗಿದ್ದರೂ, ಕನ್ನಡದಲ್ಲಿ ಮನೆ ಮಾತಾಗಿತ್ತು. ಅಲ್ಲಿಯೂ ಸಾಕು ತಾಯಿ ಅಣ್ಣಯ್ಯನಿಗೆ ಮಾತೃ ದೇವೋ ಭವ ಎನ್ನುವಂತೆ ಮಾಡಿ, ಮಾಡೋ ಮಸಲತ್ತು ಒಂದೆರಡಲ್ಲ. ಈಗ ಬರುವ ಬಹುತೇಕ ಸೀರಿಯಲ್ಸ್‌ನಲ್ಲಿ ಇಂಥ ಪಾತ್ರಗಳು ಸರ್ವೇ ಸಾಮಾನ್ಯವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

