ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ಪವಿತ್ರ ಪಾತ್ರದ ಮೂಲಕ ಜನಮನ ಗೆಲ್ಲುತ್ತಿರುವ ನಟಿ ಅಮೂಲ್ಯ ಭಾರಧ್ವಜ್.
tv-talk Jun 28 2026
Author: Pavna Das Image Credits:Isntagram
Kannada
ಜ್ಯೂನಿಯರ್ ಆಗಿ ಗಮನ ಸೆಳೆದ ನಟಿ
ಪವಿತ್ರ ಬಂಧನದಲ್ಲಿ ಸೀನಿಯರ್-ಜೂನಿಯರ್ ಲವ್ ಸ್ಟೋರಿ ಮೂಲಕ ಗಮನ ಸೆಳೆದ ಪವಿತ್ರ ಇದೀಗ ಒಲ್ಲದ ಮನಸಿನಿಂದ ದೇವ್ ನ ಪತ್ನಿಯಾಗಿ, ಮನೆ ಮಂದಿಯ ಕೋಪವನ್ನು ಸಹಿಸಿ ಬದುಕುವ ಪಾತ್ರ.
Image credits: Isntagram
Kannada
ಜನ ಇಷ್ಟ ಪಟ್ಟ ಪವಿತ್ರ-ದೇವ್ ಜೋಡಿ
ಪವಿತ್ರ- ದೇವ್ ಜೋಡಿ ಮಧ್ಯೆ ಕೋಪ-ಜಗಳ ನಡೆಯುತ್ತಿದ್ದರೂ , ಇಬ್ಬರ ಮುದ್ದಾದ ಪೇರ್ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆದರೆ ಇದೀಗ ನಟಿ ಸೀರಿಯಲ್’ನಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.
Image credits: Isntagram
Kannada
ಟರ್ಕಿಯಲ್ಲಿ ನಟಿ
ಅಮೂಲ್ಯ ಸೀರಿಯಲ್ ನಿಂದ ಕೊಂಚ ಬ್ರೇಕ್ ತೆಗೆದುಕೊಂಡು ದೂರ ಟರ್ಕಿಗೆ ತೆರಳಿದ್ದು, ಅಲ್ಲಿನ ಸುಂದರ ತಾಣಗಳು ಕಡಲ ತೀರದಲ್ಲಿ ನಟಿ ಎಂಜಾಯ್ ಮಾಡಿದ್ದಾರೆ.
Image credits: Isntagram
Kannada
ಧಾರಾವಾಹಿಯಲ್ಲಿ ಮಾತ್ರ ಸಿಂಪಲ್
ಆದರೆ ರಿಯಲ್ ಲೈಫಲ್ಲಿ ಅಮೂಲ್ಯ ಅಷ್ಟೊಂದು ಸಿಂಪಲ್ ಅಲ್ವೇ ಅಲ್ಲ. ಸಖತ್ ಸ್ಟೈಲಿಶ್. ಹೆಚ್ಚಾಗಿ ಮಾಡರ್ನ್ ಡ್ರೆಸಲ್ಲೇ ಪೋಸ್ ಕೊಡುವ ಚೆಲುವೆಯ ಟರ್ಕಿ ಫೋಟೊಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
Image credits: Isntagram
Kannada
ಸ್ಟೈಲಿಶ್ ಲುಕ್ ನಲ್ಲಿ ನಟಿ
ಅಮೂಲ್ಯ ವಿವಿಧ ರೀತಿಯ ಮಾಡರ್ನ್ ಉಡುಪುಗಳಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ನಟಿ ಕಾಮೆಂಟ್ ಸೆಕ್ಷನ್ ರಿಸ್ಟ್ರಿಕ್ಟ್ ಮಾಡಿದ್ದಾರೆ. ಆದರೆ ಫೋಟೊ ಮಾತ್ರ ರೀ ಶೇರ್ ಆಗುತ್ತಿದೆ.
Image credits: Isntagram
Kannada
ದಾಸ ಪುರಂದರಲ್ಲಿ ನಟಿಸಿದ್ದ ಅಮೂಲ್ಯ
ದಾಸ ಪುರಂದರ ಧಾರಾವಾಹಿಯಲ್ಲಿ ಪುರಂದರನ ಪತ್ನಿಯಾಗಿ ಮಿಂಚಿದ್ದ ಅಮೂಲ್ಯ ಭಾರಧ್ವಜ್. ತಮ್ಮ ಮುಗ್ಧ ಅಭಿನಯದಿಂದ ಗಮನ ಸೆಳೆದಿದ್ದರು. ಇವರ ಪಾತ್ರ ಕೂಡ ಗಮನ ಸೆಳೆದಿತ್ತು.
Image credits: Isntagram
Kannada
ಬೃಂದಾವನದ ಸುಂದರಿ
ಇದಾದ ನಂತರ ಅಮೂಲ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಬೃಂದಾವನ ಧಾರಾವಾಹಿಗೆ ) ನಾಯಕಿಯಾಗುವ ಮೂಲಕ ಗಮನ ಸೆಳೆದಿದ್ದರು. ಇದೀಗ ಪವಿತ್ರ ಬಂಧನದ ಮೂಲಕ ಸುದ್ದಿಯಲ್ಲಿದ್ದಾರೆ.