Jodi No 1 Show Season 3 Winner Name: ಸೆಲೆಬ್ರಿಟಿಗಳ ಜೋಡಿಗಳು ಸ್ಪರ್ಧೆ ಮಾಡಿದ್ದ ‘ಜೋಡಿ ನಂ 1’ ಸೀಸನ್‌ 3 ರಿಯಾಲಿಟಿ ಶೋ ಈಗ ಫೈನಲ್‌ ಹಂತಕ್ಕೆ ಬಂದಿದೆ, ಇದರ ಗ್ರ್ಯಾಂಡ್‌ ಫಿನಾಲೆ ನಡೆಯಲಿದೆ. ಹಾಗಾದರೆ ಈ ಬಾರಿ ಯಾರು ಗೆಲ್ಲುತ್ತಾರೆ? 

Jodi No 1 Show Season 3

14 ವಾರಗಳು, ವಿನೂತನ ಟಾಸ್ಕ್‌ಗಳು, ಭರಪೂರ ಮನರಂಜನೆ, ಭಾವುಕತೆಯ ಕ್ಷಣಗಳನ್ನು ಹೊಂದಿದ್ದ ‘ಜೋಡಿ ನಂ 1’ ರಿಯಾಲಿಟಿ ಶೋ ಗ್ರ್ಯಾಂಡ್ ಫಿನಾಲೆ‌ ಮೂಲಕ ಕನ್ನಡಿಗರ ಮನಗೆಲ್ಲಲು ಸಜ್ಜಾಗಿದೆ. ಇದೇ ಜುಲೈ 11 ಮತ್ತು 12ರಂದು ಶನಿವಾರ, ಭಾನುವಾರ ರಾತ್ರಿ 9ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.

14 ವಾರಗಳು, 105 ದಿನಗಳು, ಹತ್ತು ಸೆಲೆಬ್ರಿಟಿ ಜೋಡಿಗಳು, ಒಂದು ಚಾಂಪಿಯನ್ ಪಟ್ಟ, ಯಾರ ಮುಡಿಗೆ ಸೇರುತ್ತೆ ಎನ್ನುವ ಪ್ರಶ್ನೆಗೆ ಉತ್ತರ ನೀಡಲಿದೆ 'ಜೋಡಿ ನಂ.1' ಗ್ರ್ಯಾಂಡ್ ಫಿನಾಲೆ”. ಸೆಲೆಬ್ರಿಟಿ ಜೋಡಿಗಳನ್ನು ಒಂದೇ ವೇದಿಕೆಗೆ ತಂದ ವಿನೂತನ ರಿಯಾಲಿಟಿ ಶೋ 'ಜೋಡಿ ನಂ.1'

ಈ ಶೋ ವಿಶೇಷತೆ ಏನು?

ಇಲ್ಲಿ 30 ವರ್ಷದ ಸಾರ್ಥಕತೆಯ ದಾಂಪತ್ಯದ ಜೋಡಿ, 16 ವರ್ಷಗಳ ದಾಂಪತ್ಯದ ಅದ್ದೂರಿ ಜೋಡಿ, 10 ವರ್ಷಗಳ ಸಾಮರಸ್ಯವನ್ನ ಕಂಡಂತ ವಿನೂತನ ಜೋಡಿಗಳ ಜೊತೆಗೆ ಈಗಷ್ಟೇ ದಾಂಪತ್ಯಕ್ಕೆ ಕಾಲಿಟ್ಟ 3 ತಿಂಗಳ ಜೋಡಿಗಳೊಂದಿಗೆ ಶುರುವಾದ ಸಂಭ್ರಮದ ಕಾರ್ಯಕ್ರಮ ಜೋಡಿ ನಂ 1.

ಈ ದಶ ಜೋಡಿಗಳ ದಾಂಪತ್ಯದ ಪಯಣದಲ್ಲಿ ನಗು ಇತ್ತು, ಅಳು ಇತ್ತು, ಪ್ರೀತಿ ಇತ್ತು, ಸಂತೋಷದ ಕ್ಷಣಗಳಿತ್ತು, ಆತ್ಮತೃಪ್ತಿಯ ಭಾವವಿತ್ತು.. ಸೋಲಿತ್ತು, ಗೆಲುವಿತ್ತು, ಕನಸಿತ್ತು, ಸವಾಲಿತ್ತು. ಪ್ರತಿವಾರ ಸಿಕ್ಕಾಪ್ಟಟ್ಟೆ ಪ್ರೀತಿ ಮಾಡ್ತಿದ್ರು, ಆಗಾಗ ಸ್ವಲ್ಪ ಮುನಿಸಿಕೊಂಡ್ರು, ಇದರ ನಡುವೆ ಒಬ್ಬರನೊಬ್ಬರು ಅಗಾಧವಾಗಿ ಅರ್ಥ ಮಾಡ್ಕೊಂಡ್ರು, ಒಟ್ಟಾರೆಯಾಗಿ ಇಲ್ಲೊಂದು ಜರ್ನಿ ಇತ್ತು. ಬದುಕಿನ ಸಾರ್ಥಕ ಕ್ಷಣಗಳಿತ್ತು..

“ಈ ಎಲ್ಲ ಸಮ್ಮಿಶ್ರಣದ ಸುಂದರ ಹೂರಣ ಜೋಡಿ ನಂ 1” ಸೀಸನ್‌ ಪೂರ್ತಿ ನಡೆದ ಪ್ರತಿಯೊಂದು ಸವಾಲಿನಲ್ಲೂ ಜೋಡಿಗಳ ಪ್ರೀತಿ, ಹೊಂದಾಣಿಕೆ, ಪರಸ್ಪರ ನಂಬಿಕೆ, ಒಬ್ಬರಿಗೊಬ್ಬರು ನೀಡಿದ ಬೆಂಬಲ ಪ್ರೇಕ್ಷಕರ ಮನ ಗೆದ್ದಿದ್ದು, 'ಜೋಡಿ ನಂ.1' ಫಿನಾಲೆ ಟೈಮ್‌ ಹತ್ತಿರ ಬಂದಿದೆ.

ತೀರ್ಪುಗಾರರು ಯಾರು?

“ಮಾಳವಿಕ ಅವಿನಾಶ್, ಲವ್ಲಿ ಸ್ಟಾರ್‌ ಪ್ರೇಮ್‌, ರಾಜೇಶ್ ನಟರಂಗ, ಛಾಯಾಸಿಂಗ್” ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಕುರಿ ಪ್ರತಾಪ್‌ ಹಾಗು ಶ್ವೇತಾ ಚೆಂಗಪ್ಪ ಈ ಶೋ ನಿರೂಪಕರು.

ಸ್ಪರ್ಧಿಗಳು ಯಾರು?

ಅಭಿಲಾಷ್ - ಅಪೂರ್ವ, ಕೋಟೆ ಪ್ರಭಾಕರ್ - ಮಾಲತಿ, ಗೀತಾ ಭಾರತಿ ಭಟ್- ರಾಜಾರಾಮ್ ಭಟ್, ರಜಿನಿ ಹಾಗು ಅರುಣ್, ರುದ್ರ ಮಾಸ್ಟರ್ - ನಿರೀಕ್ಷಾ, ಮಿಮಿಕ್ರಿ ಗೋಪಿ - ಉಷಾರಾಣಿ, ಧನರಾಜ್ - ಪ್ರಜ್ಞಾ, ಜಗಪ್ಪ - ಸುಶ್ಮಿತಾ, ಬಾಳು ಬೆಳಗುಂದಿ - ಮಾಲಾಶ್ರೀ, ನಯನ - ಸುಹಾಸ್ ಜೋಡಿ ಮಧ್ಯೆ ಯಾರು ಗೆಲ್ಲಲಿದ್ದಾರೆ ಎಂದು ಕಾದು ನೋಡಬೇಕಿದೆ.