ಜೀ ಕನ್ನಡವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಕರ್ಣ. ಭರ್ಜರಿ ಮನೋರಂಜನೆ ನೀಡುತ್ತಾ ಪ್ರಸಾರವಾಗುತ್ತಿದೆ.
ಕೆಲವು ದಿನಗಳ ಹಿಂದೆ ಕರ್ಣ ಧಾರಾವಾಹಿ 100 ಸಂಚಿಕೆಗಳನ್ನು ಪೂರೈಸಿದ ಸಂಭ್ರಮದಲ್ಲಿದೆ.
ಕರ್ಣ ಧಾರಾವಾಹಿ 100 ಎಪಿಸೋಡ್ ಗಳನ್ನು ಪೂರೈಸಿದ ಸಂಭ್ರಮದಲ್ಲಿ ಸೀರಿಯಲ್ ನಿರ್ಮಾಪಕಿ ಶ್ರುತಿ ನಾಯ್ದು, ತಂಡಕ್ಕೆ ತಮ್ಮ ಕೈಯಾರೆ ಬಿರಿಯಾನಿ ಮಾಡಿ ಬಡಿಸಿದ್ದಾರೆ.
ಕರ್ಣ ಸೀರಿಯಲ್ ಸೆಟ್ ನಲ್ಲಿ ಬಿರಿಯಾನಿ ಮಾಡಿ ಬಡಿಸಿರುವ ಫೊಟೊಗಳನ್ನು ಶೇರ್ ಮಾಡಿರುವ ಶ್ರುತಿ ನಾಯ್ಡು Cooking with a pinch of love ಎಂದು ಬರೆದುಕೊಂಡಿದ್ದಾರೆ.
ಶ್ರುತಿ ನಾಯ್ಡು ಅವರು ತಯಾರಿಸಿದ ಭರ್ಜರಿ ಬಾಡೂಟವನ್ನು ಪೂರ್ತಿ ತಂಡ ಸವಿದು ಸಖತ್ ಆಗಿ ಪೋಸ್ ನೀಡಿದೆ.
ಕರ್ಣ ಧಾರಾವಾಹಿಯನ್ನು ರಮೇಶ್ ಇಂದಿರಾ ಅವರು ನಿರ್ದೇಶನ ಮಾಡುತ್ತಿದ್ದು, ಶ್ರುತಿ ನಾಯ್ಡು ನಿರ್ಮಾಣ ಮಾಡುತ್ತಿದ್ದಾರೆ.
ಕರ್ಣ ಧಾರವಾಹಿಯಲ್ಲಿ ಕಿರಣ್ ರಾಜ್, ನಮ್ರತಾ ಗೌಡ, ಭವ್ಯಾ ಗೌಡ, ನಾಗಭರಣ, ಆಶಾಲತಾ, ಗಾಯತ್ರಿ ಪ್ರಭಾಕರ್ ಸೇರಿ ಹಲವಾರು ಕಲಾವಿದರು ನಟಿಸುತ್ತಿದ್ದಾರೆ.
ಕರ್ಣ ಸೀರಿಯಲ್ ಹಾಗೂ ಅಣ್ಣಯ್ಯ ಸೀರಿಯಲ್ ಮಹಾಸಂಗಮ ನಡೆಯುತ್ತಿದೆ. ಮಾರಿಗುಡಿ ಜಾತ್ರೆಗೆ ಕರ್ಣನ ಕುಟುಂಬ ತೆರಳಿದೆ. ಅಲ್ಲಿ ಸತ್ಯದ ಅನಾವರಣ ಆಗಲಿದೆ.
ಹಾಟ್ ಅವತಾರದಲ್ಲಿ ರಾಧಾ ಮಿಸ್… ಬೆಂಕಿ ಲುಕ್ ಕೊಟ್ಟ Shwetha Prasad
ಮೇಘಾ ಶೆಟ್ಟಿ ಮನೆಯಲ್ಲಿ ದೀಪಾವಳಿ ಸಂಭ್ರಮ... ಅಜ್ಜಿ ಜೊತೆ ಪೂಜೆಯಲ್ಲಿ ಭಾಗಿ
Bigg Boss: ಕರಿಮಣಿ ನಾಯಕಿ ಸ್ಪಂದನಾಗೆ ಸುದೀಪ್ ನೀಡಿದ್ರು ಬಿರುದು
ಟೀಕೆಗಳನ್ನು ಎದುರಿಸಿದ ಗಟ್ಟಿಗಿತ್ತಿ ಸುಹಾನಾ ಸೈಯದ್ ಎಲ್ಲಿಯವರು? ಓದಿದ್ದೇನು?